ರಣ್​ಬೀರ್-ಆಲಿಯಾ ಜೋಡಿಗೆ 2022ರಲ್ಲಿ ಮದ್ವೆ, 15 ವರ್ಷದೊಳಗೆ ಡಿವೋರ್ಸ್ ಅಂತೆ..!

ರಣ್​ಬೀರ್-ಆಲಿಯಾ ಜೋಡಿಗೆ 2022ರಲ್ಲಿ ಮದ್ವೆ, 15 ವರ್ಷದೊಳಗೆ ಡಿವೋರ್ಸ್ ಅಂತೆ..!

ಬಾಲಿವುಡ್​ನ ಹಾಟ್​ ಕಪಲ್ ಎಂದೇ ಸುದ್ದಿಯಾಗ್ತಿರುವ ಆಲಿಯಾ ಭಟ್​ ಹಾಗೂ ರಣ್​ಬೀರ್​ ಕಪೂರ್​ಗೆ ನಟ ಕಮಲ್ ರಷೀದ್ ಖಾನ್ (ಕೆಆರ್​ಕೆ) ಶಾಕಿಂಗ್ ವಿಷ್ಯ ಹೇಳಿದ್ದಾರೆ.

ಟ್ವಿಟರ್​​ನಲ್ಲಿ ರಣ್​ಬೀರ್ ಹಾಗೂ ಆಲಿಯಾ ಭಟ್​ ಮದುವೆ ಬಗ್ಗೆ ಭವಿಷ್ಯ ನುಡಿದಿರುವ ರಷೀದ್ ಖಾನ್.. ಈ ಜೋಡಿ 2022 ರ ಅಂತ್ಯದೊಳಗೆ ಮದುವೆ ಆಗಲಿದ್ದಾರೆ. ಆದರೆ 15 ವರ್ಷಗಳ ಒಳಗೆ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ, ಡಿವೋರ್ಸ್​ ಪಡೆಯಲಿದ್ದಾರೆ ಅಂತಾ ಹೇಳಿದ್ದಾರೆ.

ಯಾವಾಗ ಕೆಆರ್​ಕೆ ಈ ರೀತಿ ಟ್ವೀಟ್ ಮಾಡಿದ್ರೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ, ನಿಕ್​ ಜೋನಸ್​ ಇಬ್ಬರು ಮದುವೆಯಾಗ್ತಾರೆ ಅನ್ನೋ ಭವಿಷ್ಯವನ್ನ ನುಡಿದಿದ್ರು. ಆದು ಆಗಿದೆ. ಈಗ ಈ ಭವಿಷ್ಯವೂ ಸತ್ಯವಾಗುತ್ತಾ? ಅಂತ ಕಾದುನೋಡ್ಬೇಕು ಅಂತಿದ್ದಾರೆ ಅಭಿಮಾನಿಗಳು!

 

The post ರಣ್​ಬೀರ್-ಆಲಿಯಾ ಜೋಡಿಗೆ 2022ರಲ್ಲಿ ಮದ್ವೆ, 15 ವರ್ಷದೊಳಗೆ ಡಿವೋರ್ಸ್ ಅಂತೆ..! appeared first on News First Kannada.

Source: newsfirstlive.com

Source link