ಚುನಾವಣಾ ತಂತ್ರಜ್ಞನ ಜೊತೆ ರಾಹುಲ್ ರಹಸ್ಯ ಸಭೆ; ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯುವ ಪ್ಲಾನ್

ಚುನಾವಣಾ ತಂತ್ರಜ್ಞನ ಜೊತೆ ರಾಹುಲ್ ರಹಸ್ಯ ಸಭೆ; ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯುವ ಪ್ಲಾನ್

ನವದೆಹಲಿ: ಮುಂಬರುವ ರಾಜ್ಯಗಳ ಚುನಾವಣೆಗಳ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ. ಬಿಜೆಪಿ ವಿರುದ್ಧ ಪುಟಿದೇಳಲು ರಣತಂತ್ರ ರೂಪಿಸುತ್ತಿರುವ ಕೈ ಪಾಳಯದ ವರಿಷ್ಠರು ಚುಣಾವಣಾ ಚತುರನ ಮೊರೆ ಹೋಗಿದ್ದಾರೆ. ಪ್ರಶಾಂತ್ ಕಿಶೋರ್ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಸದ್ಯ ಈ ಸಭೆಯಲ್ಲಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯೋ ಬಗ್ಗೆ ಚರ್ಚೆಯಾಗಿರೋ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಶರದ್​​ ಪವಾರ್​ ಬೆನ್ನಲ್ಲೇ​ ರಾಹುಲ್​ ಗಾಂಧಿ ಭೇಟಿಯಾದ ಪ್ರಶಾಂತ್​​ ಕಿಶೋರ್

ಮುಂದಿನ ವರ್ಷ ನಡೆಯಲಿರುವ 6 ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೈ ಪಾಳಯ ಅಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಜೊತೆ ಈಗಿನಿಂದಲೇ ರಣತಂತ್ರ ರೂಪಿಸುವಲ್ಲಿ ಬ್ಯುಸಿಯಾಗಿವೆ.

blank

ಮುಂಬರುವ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ‘ರಣತಂತ್ರ’
ಮುಂದಿನ ವರ್ಷ ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಉತ್ತರಾಖಂಡ್, ಗೋವಾ ಹಾಗೂ ಮಣಿಪುರ ವಿಧಾನಸಭೆ ಚುನಾವಣೆಗೆ ನಡೆಯಲಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿರುವ ಕಾಂಗ್ರೆಸ್​ ನಾಯಕರು ಪ್ರಶಾಂತ್ ಕಿಶೋರ್​ಗೆ ಗಾಳ ಹಾಕಿದ್ದಾರೆ. ನಿನ್ನೆ ರಾಹುಲ್ ಗಾಂಧಿ ಅವರ ಜೊತೆ ಸುದೀರ್ಘ ಚರ್ಚೆ ನಡಸಿದ್ದಾರೆ

ಇದನ್ನೂ ಓದಿ: ಆಮ್​ ಆದ್ಮೀ ಪಾರ್ಟಿ ಕದ ತಟ್ಟಿದ ಪ್ರಿಯಾಂಕಾ ವಾದ್ರಾ ಆಪ್ತ

ಚತುರನ ಜೊತೆ ‘ರಾಗಾ’ ತಂತ್ರ
ದೆಹಲಿಯ ನಿವಾಸದಲ್ಲಿ ನಿನ್ನೆ ರಾಹುಲ್ ಗಾಂಧಿ ಹಾಗೂ ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್​ ನಾಯಕ ಕೆಸಿ ವೇಣುಗೋಪಾಲ್, ಹರೀಶ್ ರಾವತ್, ಪ್ರಿಯಾಂಕ ಗಾಂಧಿ ಸೇರಿ ಹಲವು ಹಿರಿಯ ಕಾಂಗ್ರೆಸ್​ ನಾಯಕರು ಭಾಗಿಯಾಗಿದ್ರು. ಪ್ರಶಾಂತ್​​ ಕಿಶೋರ್​ ಜೊತೆ ಸುದೀರ್ಘ ಚರ್ಚೆ ನಡೆಸಿದ್ರು. ಇದ್ರಲ್ಲಿ ಪ್ರಮುಖವಾಗಿ ಮುಂದಿನ ವರ್ಷ ನಡೆಯಲಿರೋ 6 ರಾಜ್ಯಗಳ ಚುನಾವಣೆ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಪಂಜಾಬ್​​ನಲ್ಲಿ ಅಧಿಕಾರ ಹಿಡಿದಿರೋ ಕಾಂಗ್ರೆಸ್​ ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್, ಗೋವಾ ಹಾಗೂ ಮಣಿಪುರ ಮೇಲೂ ಕಣ್ಣಿಟ್ಟಿದೆ. ಜೊತೆಗೆ ಬಿಜೆಪಿ, ಸೇರಿ ಇನ್ನುಳಿದ ಪಕ್ಷಗಳ ವಿರುದ್ಧ ಹೋರಾಡಲೂ ಅಸ್ತ್ರಗಳ ಸಿದ್ಧಪಡಿಸ್ತಿದೆ.

ಕ್ಯಾಪ್ಟನ್, ಸಿಧು ನಡುವೆ ಸಂಗ್ರಾಮ
ನಿನ್ನೆಯ ಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಶಾಂತ್​ ಕಿಶೋರ್​ ಚುನಾವಣೆ ಅಲ್ಲದೇ ಪಂಜಾಬ್ ನಾಯಕರ ನಡುವಿನ ಕಿತ್ತಾಟದ ಕುರಿತೂ ಚರ್ಚಿಸಿದ್ದಾರೆ ಎನ್ನಲಾಗ್ತಿದೆ, ಅಂದ್ರೆ ಕಳೆದ ಮೂರು ವರ್ಷದಿಂದ ಪಂಜಾಬ್ ಸಿಎಂ ಅಮರೇಂದ್ರ ಸಿಂಗ್ ಹಾಗೂ ಮಾಜಿ ಕ್ರಿಕೆಟಿಗ ಕಮ್​ ಶಾಸಕ ನವಜೋತ್ ಸಿಂಗ್ ಸಿಧು ಮಧ್ಯೆ ಸಮರ ನಡೀತಾ ಇದೆ. ಇದು ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಈಗಲೇ ಇಬ್ಬರನ್ನ ಒಂದುಗೂಡಿಸುವ ಪ್ಲಾನ್​ ಬಗ್ಗೆ ಈ ಸಭೆಯಲ್ಲಿ ಚರ್ಚಿಸಿದ್ದಾರೆ ಎನ್ನಲಾಗ್ತಿದೆ.

ಅಂದಹಾಗೇ 2017ರಲ್ಲಿ ಬಿಜೆಪಿಯಲ್ಲಿದ್ದ ಸಿಧು ಅವರನ್ನ ಕಾಂಗ್ರೆಸ್​ಗೆ ಕರೆತರುವಲ್ಲಿ ಇದೇ ಪ್ರಶಾಂತ್​ ಕಿಶೋರ್ ನಿರ್ಣಾಯಕ ಪಾತ್ರ ನಿರ್ವಹಿಸಿದ್ರು. ಆದ್ರೆ ಇದೀಗ ಸಿಧು ನಡೆ ಆಮ್ ಆದ್ಮಿ ಕಡೆ ಇದೆ ಎನ್ನಲಾಗ್ತಿದೆ. ಹೀಗಾಗಿ ನವಜೋತ್ ಸಿಂಗ್ ಸಿಧು ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಬೇಕು ಎಂಬ ಬಗ್ಗೆ ಚಿಂತಿಸಲಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ:ಮಗನ ಸಾಧನೆ ಕಂಡು ಎದೆ ತುಂಬಿ ಕೊಂಡಾಡಿದ ಪ್ರಿಯಾಂಕಾ ವಾದ್ರಾ ದಂಪತಿ

ಇನ್ನು ಈ ಕೈ ಪಾಳಯದ ಈ ಮೀಟಿಂಗ್​ 2024ರ ಲೋಕಸಭಾ ಚುನಾವಣೆಯ ಬಗ್ಗೆಯೂ ನಡೆದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬಿಜೆಪಿಯ ಬಳಿ ಇರುವ ಅಧಿಕಾರ ಮರಳಿ ಪಡೆಯಲು ಹಪಾಹಪಿಸುತ್ತಿರುವ ಕಾಂಗ್ರೆಸ್ ಒಗ್ಗಾಟ್ಟಾಗಿ ಹೋರಾಡುವ ಪ್ಲಾನ್​ ಕೂಡ ಮಾಡಿದೆ.

The post ಚುನಾವಣಾ ತಂತ್ರಜ್ಞನ ಜೊತೆ ರಾಹುಲ್ ರಹಸ್ಯ ಸಭೆ; ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯುವ ಪ್ಲಾನ್ appeared first on News First Kannada.

Source: newsfirstlive.com

Source link