ತಾಲಿಬಾನ್ ಉಗ್ರರಿಂದ 22 ಆಫ್ಘಾನ್​ ಯೋಧರ ಹತ್ಯೆ -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ತಾಲಿಬಾನ್ ಉಗ್ರರಿಂದ 22 ಆಫ್ಘಾನ್​ ಯೋಧರ ಹತ್ಯೆ -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಇಂದು ಕೆಆರ್​ಎಸ್​, ಬೇಬಿ ಬೆಟ್ಟಕ್ಕೆ ಸುಮಲತಾ ಭೇಟಿ

blank
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಸಿಡಿದೆದ್ದಿರೋ ಸಂಸದೆ ಸುಮಲತಾ ಕೆಆರ್​ಎಸ್​ ಕಾಪಾಡುವ ಶಪಥಗೈದಿದ್ದಾರೆ. 2 ದಿನಗಳ ಮಂಡ್ಯ ಪ್ರವಾಸದಲ್ಲಿರೋ ಅವರು ಇಂದು ಕೆಆರ್​ಎಸ್​ ಹಾಗೂ ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಮೊದಲು ಕೆಆರ್​​ಎಸ್​ ಡ್ಯಾಂನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಂಸದೆ ಅವರಿಂದ ಮಾಹಿತಿ ಕಲೆ ಹಾಕಲಿದ್ದಾರೆ. ಬಳಿಕ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿ ಗಣಿಗಾರಿಕೆ ಬಗೆಗಿನ ವಾಸ್ತವ ಏನು ಅನ್ನೋದನ್ನ ಪರಿಶೀಲನೆ ನಡೆಸಲಿದ್ದಾರೆ

‘ಗಣಿಗಾರಿಕೆಯಿಂದ 1200 ಕೋಟಿ ರೂಪಾಯಿ ರಾಜಧನ ಬಾಕಿ’
ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಬರೋಬ್ಬರಿ 1200 ಕೋಟಿ ರೂಪಾಯಿ ರಾಜಧನ ವಸೂಲಿ ಬಾಕಿ ಇರುವ ಸಂಗತಿ ಬಯಲಾಗಿದೆ. ಈ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ನಿನ್ನೆ ಮಾಹಿತಿ ನೀಡಿದ್ರು. ಸುದ್ದಿಗೋಷ್ಠಿಗೂ ಮುನ್ನ ಅಧಿಕಾರಿಗಳ ಸಭೆ ನಡೆಸಿದ ಸುಮಲತಾ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಂದ 1200 ಕೋಟಿ ರೂಪಾಯಿ ರಾಜಧನ ವಸೂಲಿಯಾಗಬೇಕಿದೆ. ಇದರಲ್ಲಿ ಒಂದು ಪರ್ಸೆಂಟ್‌ನಷ್ಟು ವಸೂಲಿಯಾಗಿಲ್ಲ. ರಾಜಧನ ವಸೂಲಾಗಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಅದು ಎಷ್ಟೊಂದು ನೆರವಾಗುತ್ತಿತ್ತು? ಏಕೆ ವಸೂಲಿ ಮಾಡಿಲ್ಲ? ಇಷ್ಟು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯುವ ಯಾವುದೇ ಪ್ರಯತ್ನಗಳೇ ನಡೆದಿಲ್ಲ. ಸಮಸ್ಯೆಗಳನ್ನು ಉಳಿಸಿಕೊಂಡು ಬಂದಿದ್ದೀರೆ ಹೊರತು ಯಾವುದಕ್ಕೂ ಪರಿಹಾರ ನಿಮ್ಮಲ್ಲಿ ಇಲ್ಲವೇ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ

ರಕ್ಷಾ ರಾಮಯ್ಯ ಸೇರಿ 17 ಮಂದಿ ವಿರುದ್ಧ FIR

blank
ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಸೇರಿ 17 ಮಂದಿ ವಿರುದ್ಧ ಎಫ್​​ಐಆರ್ ದಾಖಲಾಗಿದೆ. ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಜುಲೈ 12 ರಂದು ರಕ್ಷಾ ರಾಮಯ್ಯ ನೇತೃತ್ವದಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡಿದ್ರು.. ಹೆಬ್ಬಾಳದ ಬ್ಯಾಪಿಸ್ಟ್ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟಿಸಿತ್ತು. ಯಾವುದೇ ಅನುಮತಿ ಪಡೆಯದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸೈಕಲ್ ಜಾತಾ ನಡೆಸಲಾಗಿತ್ತು. ಹೀಗಾಗಿ ಸರ್ಕಾರದ ಲಾಕ್​ಡೌನ್ ನಿಯಮಗಳನ್ನ ಉಲ್ಲಂಘಿಸಲಾಗಿದೆ ಅಂತ IPC 188 ಹಾಗೂ ಎನ್.ಡಿ.ಎಂ.ಎ ಆಕ್ಟ್ ಅಡಿ ಎಫ್​​ಐಆರ್ ದಾಖಲಿಸಲಾಗಿದೆ.

ನಂದಿಗಿರಿಧಾಮಕ್ಕೆ ವೀಕೆಂಡ್​​ನಲ್ಲಿಲ್ಲ ಎಂಟ್ರಿ

blank
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ‌ಗಿರಿಧಾಮಕ್ಕೆ ವೀಕೆಂಡ್ ಲಾಕ್​ಡೌನ್ ಜಾರಿ ಮಾಡಲಾಗಿದೆ. ವಾರದ ಕೊನೆಯಲ್ಲಿ ಬೆಂಗಳೂರು, ಹೊರ ರಾಜ್ಯ ಮತ್ತು ರಾಜ್ಯದ ವಿವಿಧ ಮೂಲೆಗಳಿಂದಲೂ ಸಾವಿರಾರು ಮಂದಿ ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಸದ್ಯ ಅಪಾರ ಪ್ರವಾಸಿಗರ ಆಗಮನದಿಂದ ಬೆಳ್ಳಂ ಬೆಳಗ್ಗೆಯೇ ನಂದಿ ಬೆಟ್ಟದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗುತ್ತಿದೆ, ಹೀಗಾಗಿ, ಜಿಲ್ಲಾಡಳಿತ ನಂದಿಗಿರಿಧಾಮಕ್ಕೆ ಶುಕ್ರವಾರ ಸಂಜೆ 6 ರಿಂದ ಸೋಮವಾರ ಮುಂಜಾನೆ 6ಗಂಟೆಯವರೆಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಿದೆ.

‘3ನೇ ಅಲೆ ತಡೆಯೋದು ನಿಮ್ಮದೇ ಜವಾಬ್ದಾರಿ’
ದೇಶದ ಕೆಲ ಭಾಗಗಳಲ್ಲಿ ಜನರು ಕೋವಿಡ್‌ ನಿರ್ಬಂಧಗಳನ್ನು ಉಲ್ಲಂಘಿಸ್ತಿದ್ದಾರೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. 3ನೇ ಅಲೆ ಬಾರದಿರುವಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಜನರದ್ದೇ ಆಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ತಡೆಗೆ ವಿಧಿಸಿರುವ ನಿಯಮಗಳನ್ನು ಪಾಲಿಸುವ ಬದಲು ಜನ ಅವುಗಳನ್ನು ಮರೆಯುತ್ತಿದ್ದಾರೆ. 3ನೇ ಅಲೆ ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆಯ ಬಗ್ಗೆ ಜನರಿಗೆ ತಿಳಿಯದಿರುವುದು ವಿಷಾದಕರ ಎಂದು ಹೇಳಿದ್ದಾರೆ

ಉತ್ತರಾಖಂಡ್​​ನ ಪ್ರಸಿದ್ಧ ಕನ್ವಾರ್ ಯಾತ್ರೆ ರದ್ದು
ಕೊರೊನಾ 3ನೇ ಅಲೆ ಅಲೆ ಭೀತಿ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಧಾರ್ಮಿಕ ಕ್ಷೇತ್ರವಾಗಿರೋ ಕನ್ವಾರ್ ಯಾತ್ರೆಯನ್ನು ರದ್ದುಗೊಳಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಕನ್ವಾರ್ ಯಾತ್ರೆಯನ್ನು ರದ್ದುಗೊಳಿಸಿದೆ. ಕನ್ವಾರ್ ಯಾತ್ರೆಯು ವಾರ್ಷಿಕ ಶಿವ ಭಕ್ತರ ಹಬ್ಬವಾಗಿದ್ದು, ಹತ್ತಿರದ ಶಿವ ದೇವಾಲಯಗಳಲ್ಲಿ ಗಂಗಾ ಜಲವನ್ನು ಸಂಗ್ರಹಿಸಲು ಬರಿಗಾಲಿನಿಂದ ಮೆರವಣಿಗೆ ನಡೆಸುತ್ತಾರೆ. ಈ ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಇದೇ ಕಾರಣಕ್ಕೆ ಉತ್ತರಾಖಂಡ ಸರ್ಕಾರ ಈ ಧಾರ್ಮಿಕ ಯಾತ್ರೆ ರದ್ದುಗೊಳಿಸಲಾಗಿದೆ ಅಂತಾ ಸರ್ಕಾರ ತಿಳಿಸಿದೆ.

ವೈದ್ಯೆ ಹಣೆಗೆ ಕುಂಕುಮ ಹಚ್ಚಿದ ಕಾಂಪೌಂಡರ್​!
ನೌಕರಿಯಿಂದ ವಜಾ ಮಾಡಿದ್ದಕ್ಕಾಗಿ ಬಿಹಾರದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡ್ತಿದ್ದ ಕಾಂಪೌಂಡರ್​ವೋರ್ವ ವಿಭಿನ್ನವಾಗಿ ಪ್ರತೀಕಾರ ತೀರಿಸಿಕೊಂಡಿದ್ದಾನೆ. ಬಿಹಾರದ ಸಮಸ್ತಿಪುರ್​ದಲ್ಲಿ ಈ ವಿಚಿತ್ರ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಸುಮಿತ್​ ಕುಮಾರ್​​​ ಕಳೆದ ಕೆಲ ದಿನಗಳ ಹಿಂದೆ ವಜಾಗೊಂಡಿದ್ದ. ಇದರಿಂದ ಕೋಪಗೊಂಡು ಮಹಿಳಾ ವೈದ್ಯೆಯ ಹಣೆಗೆ ಬಲವಂತವಾಗಿ ಕುಂಕುಮ ಹಚ್ಚಿದ್ದಾನೆ. ತದನಂತರ ಸೆಲ್ಫಿ ತೆಗೆದುಕೊಂಡು ಫೋಟೋಗಳನ್ನ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾನೆ. ಈ ಫೋಟೋ ವೈರಲ್​ ಆಗುತ್ತಿದ್ದಂತೆ ವೈದ್ಯೆ-ಕಾಂಪೌಂಡರ್​ ಮದುವೆಯಾಗಿದ್ದಾರೆಂದು ಅನೇಕರು ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ.

₹30,000 ಕೋಟಿ ಟರ್ನ್​ ಓವರ್ ಮಾಡಿದ ಪತಂಜಲಿ ಗ್ರೂಪ್

blank
ಲಾಕ್​​ಡೌನ್​ನಿಂದ ಬಹುತೇಕ ಸಂಸ್ಥೆಗಳು ನಷ್ಟ ಅನುಭವಿಸಿದ್ದರೆ, ಬಾಬಾ ರಾಮ್​ದೇವ್​ ನೇತೃತ್ವದ ಪತಂಜಲಿ ಗ್ರೂಪ್ ಮಾತ್ರ 2020-21 ರಲ್ಲಿ 30 ಸಾವಿರ ಕೋಟಿ ವಹಿವಾಟು ನಡೆಸಿರೋದಾಗಿ ಘೋಷಿಸಿದೆ. ಇತ್ತೀಚೆಗೆ ಸಂಸ್ಥೆ ಸ್ವಾಧೀನಪಡಿಸಿಕೊಂಡ ರುಚಿ ಸೋಯಾದಿಂದಲೇ ವಾರ್ಷಿಕ 16 ಸಾವಿರ 318 ಕೋಟಿ ಟರ್ನ್​ ಓವರ್​ ನಡೆಸಿದೆ ಎನ್ನಲಾಗಿದೆ. ಮುಂದಿನ 3-4 ವರ್ಷಗಳಲ್ಲಿ ತನ್ನ ಸಂಸ್ಥೆಗಳನ್ನ ಸಾಲರಹಿತ ಸಂಸ್ಥೆಗಳನ್ನಾಗಿ ಮಾಡುವ ಗುರಿ ಇಟ್ಟುಕೊಂಡಿದೆ ಎಂದು ಬಾಬಾ ರಾಮ್​​ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು 2020-21ರಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯೊಂದೇ ಒಟ್ಟು 9 ಸಾವಿರ 783 ಕೋಟಿ ಟರ್ನ್​​ ಓವರ್​ ನಡೆಸಿದೆಯಂತೆ.

ತಾಲಿಬಾನ್ ಉಗ್ರರಿಂದ 22 ಆಫ್ಘಾನ್​ ಯೋಧರ ಹತ್ಯೆ!

blank
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯೋಧರು, ಅಮಾಯಕರ ಮೇಲೆ ಭಯೋತ್ಪಾದಕರು ಗುಂಡಿನ ಸುರಿಮಳೆಗೈಯುತ್ತಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 22 ಅಫ್ಘಾನ್​ ಯೋಧರನ್ನು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ. ಉಗ್ರರ ಜೊತೆ ಮುಖಾಮುಖಿಯಾದಾಗ ಯೋಧರ ಬಳಿ ಶಸ್ತ್ರಾಸ್ತ ಇರಲಿಲ್ಲ. ಈ ವೇಳೆ ಅವರನ್ನು ಶರಣಾಗುವಂತೆ ಉಗ್ರರು ಸೂಚಿಸಿದ್ದಾರೆ. ಶಾಂತಿಯುತವಾಗಿ ಶರಣಾದ ಯೋಧರು ಹತ್ತಿರ ಬಂದಾಗ ಏಕಾಏಕಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಎದೆ ಝಲ್ ಎನಿಸುವಂತಿದೆ.

ಒಲಿಂಪಿಕ್ಸ್​ನಿಂದ ಹಿಂದೆ ಸರಿದ ರೋಜರ್​ ಫೆಡರರ್
ಸ್ವಿಟ್ಜರ್​ಲೆಂಡ್​ನ ಟೆನಿಸ್​ ತಾರೆ ರೋಜರ್​ ಫೆಡರರ್​ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಟ್​​ನಿಂದ ಹಿಂದೆ ಸರಿದಿದ್ದಾರೆ. ಗಾಯದ ಕಾರಣ ನೀಡಿ ತಾವು ಮಹಾ ಕ್ರೀಡಾಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಫೆಡರರ್​, ಗ್ರಾಸ್​ ಆವೃತ್ತಿಯಲ್ಲಿ ಆಡುವಾಗ ಮಂಡಿ ನೋವು ಕಾಣಿಸಿಕೊಂಡಿದೆ. ಹಾಗಾಗಿ, ನಾನು ಟೋಕಿಯೋ ಒಲಿಂಪಿಕ್ಸ್​​ನಿಂದ ಅನಿವಾರ್ಯವಾಗಿ ಹಿಂದೆ ಸರಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು, ಇದಕ್ಕೂ ಮೊದಲು ಸ್ಪೇನ್​ನ ರಾಫಾ ನಡೆಲ್ ಹಾಗೂ ಮಹಿಳಾ ತಾರೆ ಸೆರೆನಾ ವಿಲಿಯಮ್ಸ್​ ಒಲಿಂಪಿಕ್ಸ್​ ಗೇಮ್ಸ್​ನಿಂದ ದೂರ ಉಳಿದಿದ್ದಾರೆ

The post ತಾಲಿಬಾನ್ ಉಗ್ರರಿಂದ 22 ಆಫ್ಘಾನ್​ ಯೋಧರ ಹತ್ಯೆ -ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link