ದ್ರಾವಿಡ್​ ಕೋಚ್​ ಆಗಿ ಎಂಟ್ರಿ.. ರವಿ ಶಾಸ್ತ್ರಿಗೆ ಶುರುವಾಗಿದೆ ಟೆನ್ಶನ್

ದ್ರಾವಿಡ್​ ಕೋಚ್​ ಆಗಿ ಎಂಟ್ರಿ.. ರವಿ ಶಾಸ್ತ್ರಿಗೆ ಶುರುವಾಗಿದೆ ಟೆನ್ಶನ್

ಟೀಮ್​ ಇಂಡಿಯಾವನ್ನ ಉತ್ತುಂಗಕ್ಕೇರಿಸಿದ ಕೀರ್ತಿ, ಕೋಚ್​​​​​​ ರವಿ ಶಾಸ್ತ್ರಿಗೆ ಸಲ್ಲುತ್ತದೆ. ಆದರೆ ಇಂತಹ ಸಕ್ಸಸ್​​ಫುಲ್​ ಕೋಚ್​ಗೆ, ಈಗ ಟೆನ್ಶನ್ ಶುರುವಾಗಿದೆ. ಇಂಗ್ಲೆಂಡ್​ ಟೆಸ್ಟ್ ಸರಣಿ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಬಳಿಕ, ಶಾಸ್ತ್ರಿ ಭವಿಷ್ಯ ನಿರ್ಧಾರವಾಗಲಿದೆ.

ರವಿ ಶಾಸ್ತ್ರಿ, ಟೀಮ್ ಇಂಡಿಯಾದ ಸಕ್ಸಸ್​​ಫುಲ್​ ಕೋಚ್​.! ಮೂರೂ ಫಾರ್ಮೆಟ್​ಗಳಲ್ಲಿ ಟೀಮ್ ಇಂಡಿಯಾ ಶ್ರೇಷ್ಠ ಪ್ರದರ್ಶನ ನೀಡ್ತಿರೋದಕ್ಕೆ, ದ್ರೋಣಾಚಾರ್ಯ ರವಿ ಶಾಸ್ತ್ರಿ ಶ್ರೀರಕ್ಷೆಯೇ ಕಾರಣ.! ಆದರೆ ಭಾರತದ ಮತ್ತೊಂದು ತಂಡಕ್ಕೆ ರಾಹುಲ್​ ದ್ರಾವಿಡ್​ ಕೋಚ್​​ ಆಗ್ತಿದ್ದಂತೆ, ರವಿ ಶಾಸ್ತ್ರಿಗೆ ಟೆನ್ಶನ್ ಶುರುವಾಗಿದೆಯಂತೆ!
ಯೆಸ್​​.. ಇಂಥದ್ದೊಂದು ಪ್ರಶ್ನೆ ಈಗ, ಕ್ರಿಕೆಟ್​ ಸರ್ಕಲ್​​​ನಲ್ಲಿ ಸಖತ್​​ ಸದ್ದು ಮಾಡ್ತಿದೆ. ಗಾಯಾಳು ಶುಭ್ಮನ್​ ಗಿಲ್ ಸ್ಥಾನಕ್ಕೆ, ಪೃಥ್ವಿ ಶಾ ಮತ್ತು ದೇವದತ್​ ಪಡಿಕ್ಕಲ್​​ರನ್ನ ಇಂಗ್ಲೆಂಡ್​ಗೆ ಕಳುಹಿಸುವಂತೆ ಕೋಚ್ ರವಿ ಶಾಸ್ತ್ರಿ, ಮಂಡಳಿಗೆ ಮನವಿ ಮಾಡಿಕೊಂಡಿದ್ರು. ಆದ್ರೆ ಬಿಸಿಸಿಐ, ಸಾಸ್ತ್ರಿ ಮನವಿಯನ್ನ ಸಾರಾಸಗಟಾಗಿ ತಿರಸ್ಕರಿಸಿದೆ. ಪೃಥ್ವಿ-ಪಡಿಕ್ಕಲ್​​ರನ್ನ ಇಂಗ್ಲೆಂಡ್​ಗೆ ಕಳಿಸದಿರೋದಕ್ಕೆ, ಲಂಕಾದಲ್ಲಿರುವ ಟೀಮ್ ಇಂಡಿಯಾದ ಮತ್ತೋರ್ವ ಕೋಚ್​ ದ್ರಾವಿಡ್, ಕಾರಣ ಎನ್ನಲಾಗ್ತಿದೆ.

blank

ಕೋಚ್​​​​ ರವಿ ಶಾಸ್ತ್ರಿ ಮೇಲೆ ಒತ್ತಡ ಯಾಕೆ?
ಕೋಚ್ ರವಿ ಶಾಸ್ತ್ರಿ ರೀಪ್ಲೇಸ್​ಮೆಂಟ್ ಆಟಗಾರರನ್ನ ಕೇಳಿದ್ರೂ, ಬಿಸಿಸಿಐ ಏಕೆ ಕಳಿಸಿಲ್ಲ ಎಂಬ ಅನುಮಾನದ ಹುತ್ತ ಬೆಳೆದಿದೆ. ಇದರಿಂದ ರವಿ ಶಾಸ್ತ್ರಿ​ ಮಾತಿಗೆ ಮಂಡಳಿಯಲ್ಲಿ ಬೆಲೆ ಇಲ್ವಾ..? ಅಥವಾ ಶಾಸ್ತ್ರಿಯನ್ನ ಕೆಳಗಿಳಸಲು ಪ್ಲಾನ್ ನಡೆಯುತ್ತಿದ್ಯಾ? ದ್ರಾವಿಡ್​​ ಕೋಚ್​ ಆಗಿ ಎಂಟ್ರಿ ಕೊಟ್ಟ ಬಳಿಕ, ಶಾಸ್ತ್ರಿಯನ್ನ ಸೈಡ್​ಲೈನ್ ಮಾಡಲಾಗ್ತಿದ್ಯಾ ಎಂಬ ಅನುಮಾನ ಮೂಡ್ತಿದೆ. ದ್ರಾವಿಡ್​ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಸ್ನೇಹ ಕೂಡ ಇರಬಹುದು ಎಂದು ಹೇಳಲಾಗ್ತಿದೆ.

ವಿಶ್ವಕಪ್​ ನಂತರ ಕೋಚ್​ ಸ್ಥಾನದಲ್ಲಿ ಮುಂದುವರಿಯೋದು ಕಷ್ಟ?
ರವಿ ಶಾಸ್ತ್ರಿ ಅವಧಿಯಲ್ಲಿ ಟೀಮ್ ಇಂಡಿಯಾ ವಿಶ್ವದ ಉತ್ತುಂಗ ತಲುಪಿದೆ. ಆದರೆ ಒಂದು ಐಸಿಸಿ ಪ್ರಶಸ್ತಿ ಗೆಲ್ಲದಿರೋದು ರವಿ ಶಾಸ್ತ್ರಿ ಹಿನ್ನಡೆಗೆ ಕಾರಣವಾಗ್ತಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​​ ಗೆದ್ದಿದ್ದರೆ ಶಾಸ್ತ್ರಿ, ಅಧಿಕಾರವಧಿ ಮತ್ತೊಂದು ಅವಧಿಗೆ ವಿಸ್ತರಣೆಯಾಗೋ ಸಾಧ್ಯತೆ ಇತ್ತು. ಇದೀಗ ಟಿ-20 ವಿಶ್ವಕಪ್​ಗೆ ಅಧಿಕಾರ ಮುಗಿಯಲಿದ್ದು, ರವಿಶಾಸ್ತ್ರಿ ಮೇಲೆ ಒತ್ತಡ ಹೆಚ್ಚಾಗಿದೆ. ಈ ಪ್ರಶಸ್ತಿ ಗೆದ್ದರಷ್ಟೇ ಕೋಚ್​ ಅವಧಿ ವಿಸ್ತರಣೆ ಆಗಲಿದೆ ಎನ್ನಲಾಗ್ತಿದೆ. ಹಾಗಾಗಿ ಇಂಗ್ಲೆಂಡ್​​ ಸರಣಿ ಮತ್ತು ಟಿ20 ವಿಶ್ವಕಪ್​​, ರವಿ ಶಾಸ್ತ್ರಿಗೆ ಡು ಆರ್​ ಡೈ ಆಗಿದೆ!

‘ಸದ್ಯ ರವಿಶಾಸ್ತ್ರಿಗೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಟಿ20 ವಿಶ್ವಕಪ್​​ ಅವರಿಗೆ ಕೊನೆಯಾಗಲಿದೆ. ಅಧಿಕಾರ ವಿಸ್ತರಣೆ ಕೂಡ ಅನುಮಾನ’
-ರಿತೀಂದರ್​ ಸಿಂಗ್​ ಸೌಧಿ, ಮಾಜಿ ಕ್ರಿಕೆಟಿಗ

ಸದ್ಯ ಸೀನಿಯರ್ ತಂಡಕ್ಕೆ ರಾಹುಲ್​ ದ್ರಾವಿಡ್​​ರನ್ನೇ ಕೋಚ್​ ಆಗಿ ನೇಮಕ ಮಾಡಿ ಎಂಬ ಕೂಗು ಜಾಸ್ತಿಯಾಗಿದೆ. ಇದು ಕೇವಲ ಕ್ರಿಕೆಟ್​ ಸರ್ಕಲ್​​ನಲ್ಲಿ ಕೇಳಿ ಬರ್ತಿರುವ ಮಾತುಗಳಲ್ಲ. ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರ ಅಭಿಪ್ರಾಯ ಕೂಡ ಇದೇ ಆಗಿದೆ.

The post ದ್ರಾವಿಡ್​ ಕೋಚ್​ ಆಗಿ ಎಂಟ್ರಿ.. ರವಿ ಶಾಸ್ತ್ರಿಗೆ ಶುರುವಾಗಿದೆ ಟೆನ್ಶನ್ appeared first on News First Kannada.

Source: newsfirstlive.com

Source link