ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಮೇಲೆ ಅಲೆಗಳಿಗಾಗಿ ಕಾಯಬಾರದು -ಡಿವಿಎಸ್​ ಹೀಗ್ಯಾಕೆ ಅಂದ್ರು?

ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಮೇಲೆ ಅಲೆಗಳಿಗಾಗಿ ಕಾಯಬಾರದು -ಡಿವಿಎಸ್​ ಹೀಗ್ಯಾಕೆ ಅಂದ್ರು?

ಮೈಸೂರು: ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ‌. ನನಗೆ ಪಕ್ಷ ಕೊಟ್ಟಂತಹ ಅವಕಾಶಗಳು ಬಹುಶಃ ರಾಜ್ಯದಲ್ಲಿ ಯಾವ ರಾಜಕಾರಣಿಗಳಿಗೂ ಸಿಕ್ಕಿಲ್ಲ. ನಾನೊಬ್ಬ ಸುಸಂಸ್ಕೃತ ರಾಜಕಾರಣಿ ಎಂದು ಕೇಂದ್ರದ ಮಾಜಿ ಸಚಿವ ಸದಾನಂದಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು ಅಧಿಕಾರ ಕೊಟ್ಟಾಗ ಏರುವುದು, ಕೊಡದಿದ್ದಾಗ ಇಳಿಯುವುದು ಮಾಡಬಾರದು. ನಮಗೆ ಏನೇ ಸಿಕ್ಕರೂ ಸ್ವೀಕರಿಸಿ ಸಮಾನ ಮನಸ್ಸಿನಿಂದ ನಡೆಯಬೇಕು ಎಂದಿದ್ದಾರೆ.

ರಾಜೀನಾಮೆ ವಿಚಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನ. ಕೆಲ ರಾಜ್ಯಗಳ ಮುಂದಿನ ಚುನಾವಣೆಯ ಸಂಘಟನಾ ದೃಷ್ಟಿಯಿಂದ ರಾಜೀನಾಮೆ ಕೇಳಿದ್ರು. ಹೀಗಾಗಿ ತಕ್ಷಣ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡಿರೋದು ಸಂಘಟನೆಗೆ ಸಂಭಂದಪಟ್ಟ ವಿಚಾರ. ಮೂರ್ನಾಲ್ಕು ರಾಜ್ಯದಲ್ಲಿದ್ದ ಬಿಜೆಪಿ ಈಗ ಹದಿಮೂರು ರಾಜ್ಯದಲ್ಲಿ ಅಧಿಕಾರ ಹಿಡಿದು ದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದಿದೆ ಮೋದಿ ಜಾಗತಿಕವಾಗಿ ಬೆಳೆದಿದ್ದಾರೆ ಎಂದರು.

blank

ರಾಜ್ಯದಲ್ಲಿ ಸಂಪುಟ ವಿಸ್ತರಣೆಯಲ್ಲಿ ಗೊಂದಲ ಮೂಡಿರುವ ವಿಚಾರ ಕುರಿತು ಮಾತನಾಡಿ, ನಮ್ಮ ಪಕ್ಷ ಬೆಳೆಯಬೇಕು ಅಂದ್ರೆ ಇತರ ಪಕ್ಷದಿಂದ ಬಂದವರೂ ಸಿದ್ಧಾಂತ ಒಪ್ಪಿಕೊಳ್ಳಬೇಕು. ಹೊರಗಿನಿಂದ ಬಂದವರನ್ನ ಸ್ಟ್ರೀಮ್ ಲೈನ್ ಮಾಡುವ ಅವಶ್ಯಕತೆ ಇದೆ. ಪಕ್ಷ ಆ ದಾರಿಯಲ್ಲಿ ಕೆಲಸ ಮಾಡ್ತಿದೆ ಎಂದಿದ್ದಾರೆ.

ತಮ್ಮ ವಿರುದ್ಧ ನಡೆಯುತ್ತಿರುವ ಟೀಕಾ ಪ್ರಹಾರಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ರಾಜಕೀಯ ಅಂದ್ರೆ ದೊಡ್ಡ ಸಮುದ್ರ ಇದ್ದಂತೆ. ಸಮುದ್ರಕ್ಕೆ ಸ್ನಾನ ಮಾಡಲು ಇಳಿದ ಮೇಲೆ ಅಲೆಗಳಿಗೆ ಕಾಯಬಾರದು. ರಾಜಕೀಯದಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಎಲ್ಲದಕ್ಕೂ ನಮ್ಮ ಕಾರ್ಯಾಚರಣೆ, ಕಮಿಟ್ಮೆಂಟ್ ಮೂಲಕ ಉತ್ತರ ಕೊಡಬೇಕು. ನಾನು ಏರ್​​ಪೋರ್ಟ್​ಗೆ ಬಂದಾಗ ಸ್ವಾಗತ ಮಾಡೋಕೆ ನಾಲ್ಕು ಸಾವಿರ ಜನ ಬಂದಿದ್ರು.‌ ಇದಕ್ಕಿಂತ ದೊಡ್ಡ ಸಂಪಾದನೆ ಏನಿದೆ? ಎಲ್ಲಾ ಟೀಕೆಗೆಗೂ ಇದೇ ಉತ್ತರ ಅನ್ನೋ ಮೂಲಕ ಟಾಂಗ್ ನೀಡಿದರು.

ಇದನ್ನೂ ಓದಿ: ಸದಾನಂದಗೌಡರಿಗೆ ಅದ್ಧೂರಿ ಸ್ವಾಗತ: ಹೆಗಲ ಮೇಲೆ ಹೊತ್ತು ಮೆರೆಸಿದ ಬೆಂಬಲಿಗರು

The post ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಮೇಲೆ ಅಲೆಗಳಿಗಾಗಿ ಕಾಯಬಾರದು -ಡಿವಿಎಸ್​ ಹೀಗ್ಯಾಕೆ ಅಂದ್ರು? appeared first on News First Kannada.

Source: newsfirstlive.com

Source link