ಇಂಗ್ಲೆಂಡ್​ನಲ್ಲಿ ನಡೆಯಲ್ವಾ ಅಶ್ವಿನ್ ಮ್ಯಾಜಿಕ್? ಕಿಂಗ್ ಕೊಹ್ಲಿಗೆ ಮತ್ತೊಂದು ತಲೆನೋವು

ಇಂಗ್ಲೆಂಡ್​ನಲ್ಲಿ ನಡೆಯಲ್ವಾ ಅಶ್ವಿನ್ ಮ್ಯಾಜಿಕ್? ಕಿಂಗ್ ಕೊಹ್ಲಿಗೆ ಮತ್ತೊಂದು ತಲೆನೋವು

ಶುಭ್​​ಮನ್​ ಗಿಲ್ ಇಂಜುರಿಯಿಂದ ಹಿನ್ನಡೆ ಅನುಭವಿಸಿರೋ ಟೀಮ್ ಇಂಡಿಯಾಕ್ಕೀಗ, ಮತ್ತೊಂದು ಆತಂಕ ಶುರುವಾಗಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯ ಪ್ರಮುಖ ಅಸ್ತ್ರವಾಗಿರುವ ಅಶ್ವಿನ್​, ಕೌಂಟಿ ಕ್ರಿಕೆಟ್​ನಲ್ಲಿ ವಿಕೆಟ್​​ಗಾಗಿ ಪರದಾಡಿದ್ರು. ಇದ್ರಿಂದ ಕ್ಯಾಪ್ಟನ್ ಕೊಹ್ಲಿಗೆ ಹೊಸ ತಲೆನೋವು ಶುರುವಾಗಿದೆ.

ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನವೇ, ಟೀಮ್ ಇಂಡಿಯಾಕ್ಕೆ ಒಂದಿಲ್ಲೊಂದು ವಿಘ್ನ ಎದುರಾಗ್ತಿದೆ. ಶುಭ್​​ಮನ್​ ಗಿಲ್ ಇಂಜುರಿಯಿಂದ ಆರಂಭದಲ್ಲೇ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾಕ್ಕೆ ಈಗ, ಆಫ್​ ಸ್ಪಿನ್ನರ್ ಅಶ್ವಿನ್ ಕೌಂಟಿ ಫಾರ್ಮ್​ ತಲೆಬಿಸಿ ಹೆಚ್ಚಿಸಿದೆ.

ಕೌಂಟಿಯಲ್ಲಿ ನಿರಾಸೆ ಮೂಡಿಸಿದ ಆರ್​.ಅಶ್ವಿನ್
ಟೀಮ್ ಮ್ಯಾನೇಜ್​ಮೆಂಟ್ ಶುರುವಾಯ್ತು ತಲೆನೋವು

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ, ಕೌಂಟಿ ಕ್ರಿಕೆಟ್​ನಲ್ಲಿ ಪಾಲ್ಗೊಂಡು ಪ್ರಿಪರೇಷನ್​ ನಡೆಸಲು ಮುಂದಾಗಿದ್ದ ಅಶ್ವಿನ್​, ಮೊದಲ ಅಗ್ನಿಪರೀಕ್ಷೆಯಲ್ಲೇ ಫೇಲ್ ಆಗಿದ್ದಾರೆ. ಸೊಮರ್​ಸೆಟ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್, 43 ಓವರ್​ ಬೌಲಿಂಗ್ ಮಾಡಿ, ಕೇವಲ ಒಂದೇ ಒಂದು ವಿಕೆಟ್ ಪಡೆದಿದ್ದಾರೆ. ಇದೇ ಈಗ ಕ್ಯಾಪ್ಟನ್ ಕೊಹ್ಲಿ ಮತ್ತು ಟೀಮ್ ಮ್ಯಾನೇಜ್​ಮೆಂಟ್, ತಲೆಬಿಸಿಗೆ ಕಾರಣವಾಗಿರೋದು.

blank

ಇಂಗ್ಲೆಂಡ್​ನಲ್ಲಿ ನಡೆಯಲ್ವಾ ಅಶ್ವಿನ್ ಮ್ಯಾಜಿಕ್
ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಮ್ಯಾಚ್​ವಿನ್ನರ್,​ ಆರ್​.ಅಶ್ವಿನ್.. ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವಿನಲ್ಲಿ, ಅಶ್ವಿನ್ ಪ್ರಮುಖ ಪಾತ್ರವಹಿಸಿದ್ರು. ಇಂಗ್ಲೆಂಡ್​​ನಲ್ಲೂ ಅಶ್ವಿನ್​​ ಅದೇ ಗುಡ್​ ಫಾರ್ಮ್​ ಮುಂದುವರೆಸುತ್ತಾರೆ ಅಂತ, ನಿರೀಕ್ಷಿಸಲಾಗಿತ್ತು. ಆದ್ರೀಗ ಕೌಂಟಿ ಪಂದ್ಯದಲ್ಲಿ ಅಶ್ವಿನ್ ವೈಫಲ್ಯ, ಕ್ಯಾಪ್ಟನ್ ಮತ್ತು ಕೋಚ್​​ ಅನ್ನ ಕಾಡ್ತಿದೆ.

ಒಟ್ನಲ್ಲಿ.. ಆಫ್​ಸ್ಪಿನ್ನರ್ ಅಶ್ವಿನ್​, ಒರ್ವ ಕ್ಲಾಸ್ ಸ್ಪಿನ್ನರ್​ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಇಂಗ್ಲೆಂಡ್​​ ಟೆಸ್ಟ್ ಸರಣಿಗೂ ಮುನ್ನ ಅಶ್ವಿನ್, ಫಾರ್ಮ್​ಗೆ ಮರಳುವ ವಿಶ್ವಾಸ ಇದೆ.

ಇದನ್ನೂ ಓದಿ: ದ್ರಾವಿಡ್​ ಕೋಚ್​ ಆಗಿ ಎಂಟ್ರಿ.. ರವಿ ಶಾಸ್ತ್ರಿಗೆ ಶುರುವಾಗಿದೆ ಟೆನ್ಶನ್

The post ಇಂಗ್ಲೆಂಡ್​ನಲ್ಲಿ ನಡೆಯಲ್ವಾ ಅಶ್ವಿನ್ ಮ್ಯಾಜಿಕ್? ಕಿಂಗ್ ಕೊಹ್ಲಿಗೆ ಮತ್ತೊಂದು ತಲೆನೋವು appeared first on News First Kannada.

Source: newsfirstlive.com

Source link