ಪಾಕ್​​ನಿಂದ ಮತ್ತೆ ಗಡಿ ದಾಟಿ ಬಂದ ಡ್ರೋಣ್​; ಬಿಎಸ್​ಎಫ್​ ಯೋಧರಿಂದ ಫೈರಿಂಗ್ 

ಪಾಕ್​​ನಿಂದ ಮತ್ತೆ ಗಡಿ ದಾಟಿ ಬಂದ ಡ್ರೋಣ್​; ಬಿಎಸ್​ಎಫ್​ ಯೋಧರಿಂದ ಫೈರಿಂಗ್ 

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಮತ್ತೊಂದು ಅನುಮಾನಾಸ್ಪದ ಡ್ರೋಣ್ ಹಾರಾಟ ನಡೆಸಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಡ್ರೋಣ್ ದಾಳಿ ಕಣ್ಗಾವಲಿಗೆ DRDO ಹೊಸ ತಂತ್ರ.. ಪತ್ತೆಯಾದ ಕ್ಷಣದಲ್ಲೇ ‘ಆ’ ಡ್ರೋಣ್ ಢಮಾರ್

ಜಮ್ಮುವಿನ ಅರ್ನಿಯಾ ಸೆಕ್ಟರ್​​ನಲ್ಲಿ ಕಳೆದ ರಾತ್ರಿ ಡ್ರೋಣ್ ಹಾರಾಟವನ್ನ ಗಮನಿಸಿದ ಬಿಎಸ್​ಎಫ್​ ಯೋಧರು ಫೈರಿಂಗ್ ಮಾಡಿದ್ದಾರೆ. ಕೆಲ ಸಮಯದ ಬಳಿಕ ಆ ಡ್ರೋಣ್ ಕಣ್ಮರೆಯಾಗಿದೆ. ವರದಿಗಳ ಪ್ರಕಾರ ಪಾಕಿಸ್ತಾನದ ಗಡಿಯಿಂದ ಬಂದಿದ್ದ ಈ ಡ್ರೋಣ್, ಫೈರಿಂಗ್ ಮಾಡುತ್ತಿದ್ದಂತೆಯೇ ವಾಪಸ್ ಆಗಿದೆ ಅಂತಾ ಹೇಳಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಬಿಎಸ್​ಎಫ್.. ಜುಲೈ 13 ರಂದು ರಾತ್ರಿ 9.52ರ ಸುಮಾರಿಗೆ ಡ್ರೋಣ್ ಪತ್ತೆಯಾಗಿದೆ. ಅರ್ನಿಯಾ ಗಡಿಯಿಂದ ಸುಮಾರು 200 ಮೀಟರ್​ ದೂರದಲ್ಲಿ ಡ್ರೋಣ್ ಹಾರಾಟ ನಡೆಸುತ್ತಿತ್ತು. ಕೂಡಲೇ ಎಚ್ಚೆತ್ತ ನಮ್ಮ ಸೇನೆ ಫೈರಿಂಗ್ ಮಾಡಿದೆ. ನಂತರ ಆ ಡ್ರೋಣ್ ನಾಪತ್ತೆಯಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ: IAF ವಾಯುನೆಲೆ ಮೇಲೆ ದಾಳಿ ಬೆನ್ನಲ್ಲೇ ಶ್ರೀನಗರದಲ್ಲಿ ಡ್ರೋಣ್ ಬಳಕೆ ನಿಷೇಧ

ಜೂನ್ 27 ರಂದು ಡ್ರೋಣ್ ಮೂಲಕ ಜಮ್ಮುವಿನ ಐಎಎಫ್ ವಾಯುನೆಲೆ ಮೇಲೆ ಎರಡು ಪ್ರತ್ಯೇಕ ಬ್ಲಾಸ್ಟ್​ ನಡೆದಿತ್ತು. ಈ ಸ್ಫೋಟಕ್ಕೆ ಪಾಕಿಸ್ತಾನದ ಡ್ರೋಣ್ ಅನ್ನ ಉಗ್ರರು ಬಳಸಿದ್ದಾರೆ ಅಂತಾ ಹೇಳಲಾಗಿದೆ. ಈ ಕೃತ್ಯದಲ್ಲಿ ಇಬ್ಬರು ಸಿಬ್ಬಂದಿಗೆ ಗಾಯ ಕೂಡ ಆಗಿತ್ತು. ಈ ಘಟನೆ ಬೆನ್ನಲ್ಲೇ ಮತ್ತೆ ಪಾಕಿಸ್ತಾನದ ಡ್ರೋಣ್​ಗಳು ಗಡಿಯಲ್ಲಿ ಹಾರಾಟ ನಡೆಸಿದ್ದವು. ಇದೀಗ ಮತ್ತೊಂದು ಡ್ರೋಣ್ ಗಡಿಗೆ ಎಂಟ್ರಿ ನೀಡಿದೆ.

ಇದನ್ನೂ ಓದಿ: ಭವಿಷ್ಯದ ಡ್ರೋಣ್ ದಾಳಿ ತಡೆ​​ಗೆ ಪ್ಲಾನಿಂಗ್;​ ಕೇರಳದಲ್ಲಿ ಸ್ಥಾಪನೆಯಾಗ್ತಿದೆ ಡ್ರೋಣ್ ರಿಸರ್ಚ್ ಲ್ಯಾಬ್

The post ಪಾಕ್​​ನಿಂದ ಮತ್ತೆ ಗಡಿ ದಾಟಿ ಬಂದ ಡ್ರೋಣ್​; ಬಿಎಸ್​ಎಫ್​ ಯೋಧರಿಂದ ಫೈರಿಂಗ್  appeared first on News First Kannada.

Source: newsfirstlive.com

Source link