ದರ್ಶನ್ ಸರ್ ಹೇಳಿದ್ದಾರೆ, ಇನ್ಮೇಲೆ ಪ್ರಕರಣದ ಬಗ್ಗೆ ನಾನ್ ಮಾತಾಡಲ್ಲ- ಉಮಾಪತಿ

ದರ್ಶನ್ ಸರ್ ಹೇಳಿದ್ದಾರೆ, ಇನ್ಮೇಲೆ ಪ್ರಕರಣದ ಬಗ್ಗೆ ನಾನ್ ಮಾತಾಡಲ್ಲ- ಉಮಾಪತಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ 25 ಕೋಟಿ ಶ್ಯೂರಿಟಿ ವಂಚನೆಗೆ ಯತ್ನ ಆರೋಪ ಪ್ರಕರಣ ಸದ್ಯ ತಣ್ಣಗಾಗಿದೆ.   ​

ಅದರಂತೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರ್ಮಾಪಕ ಉಮಾಪತಿ ಗೌಡ ನಿರಾಕರಿಸಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ನಿಲ್ಲಿಸೋಣಾ ನಿರ್ಮಾಪಕರೇ. ಈ ವಿಷಯದ ಬಗ್ಗೆ ಮಾತನಾಡೋದು ಬೇಡ ಎಂದು ದರ್ಶನ್ ಹೇಳಿದ್ದಾರೆ. ಹೀಗಾಗಿ ನಾನು ಯಾವುದೇ ಹೇಳಿಕೆ ನೀಡಲ್ಲ ಎಂದಿದ್ದಾರೆ.

ಈ ಬಗ್ಗೆ ಆರೋಪಿ ಅರುಣಾಕುಮಾರಿ ಬೇಕಾದ್ರೆ ಮಾತಾಡಲಿ. ಪೊಲೀಸ್ ಶೈಲಿಯಲ್ಲಿ ತನಿಖೆ ಆದರೆ ಸತ್ಯಾಂಶ ಹೊರಬರಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಬಗ್ಗೆ ಕಾಯುತ್ತಿದ್ದೀವಿ. ದಾಖಲೆ ಸಿಕ್ಕ ತಕ್ಷಣ ದರ್ಶನ್ ಸರ್ ನಾನು ಇಬ್ಬರೂ ಪ್ರೆಸ್​ಮೀಟ್ ಮಾಡಿ ಮಾಹಿತಿ ನೀಡ್ತೀವಿ. ಇನ್ನೆರಡು ದಿನಗಳಲ್ಲಿ ದರ್ಶನ್ ಸರ್ ಮತ್ತು ನಾನು ಕಮಿಷನ್ ಅವರ ಭೇಟಿ ಮಾಡ್ತೀವಿ ಎಂದು ನ್ಯೂಸ್ ಫಸ್ಟ್​ಗೆ ಉಮಾಪತಿ ಮಾಹಿತಿ ನೀಡಿದ್ದಾರೆ.

The post ದರ್ಶನ್ ಸರ್ ಹೇಳಿದ್ದಾರೆ, ಇನ್ಮೇಲೆ ಪ್ರಕರಣದ ಬಗ್ಗೆ ನಾನ್ ಮಾತಾಡಲ್ಲ- ಉಮಾಪತಿ appeared first on News First Kannada.

Source: newsfirstlive.com

Source link