ಸರಳತೆಗೆ ಮತ್ತೊಂದು ಹೆಸರೇ ಎಂ.ಎಸ್ ಧೋನಿ..!

ಸರಳತೆಗೆ ಮತ್ತೊಂದು ಹೆಸರೇ ಎಂ.ಎಸ್ ಧೋನಿ..!

ಸೆಲೆಬ್ರೆಟಿಗಳು ಲಕ್ಸುರಿ ಲೈಫ್ ಲೀಡ್ ಮಾಡೋದು ಸಾಮಾನ್ಯ. ಆದರೆ ಟೀಮ್ ಇಂಡಿಯಾದ ಮಾಜಿ ನಾಯಕ ಎಮ್​.ಎಸ್.ಧೋನಿ ಮಾತ್ರ, ಇದಕ್ಕೆ ವಿಭಿನ್ನ.. ಹೌದು..! ತಮ್ಮ ವೃತ್ತಿ ಜೀವನದ ವೇಳೆ ಕ್ರಿಕೆಟ್​ ಫೀಲ್ಡ್​ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಮಾಹಿ, ನಿವೃತ್ತಿ ಬಳಿಕದ ದಿನಗಳನ್ನ ಅಷ್ಟೇ ಸರಳವಾಗಿ ಲೈಫ್​ ಲೀಡ್ ಮಾಡುತ್ತಾ, ಸಖತ್ ಎಂಜಾಯ್​ ಮಾಡ್ತಿದ್ದಾರೆ. ಇತ್ತೀಚಿಗಷ್ಟೆ ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಜೊತೆ ಶಿಮ್ಲಾ ಪ್ರವಾಸ ಕೈಗೊಂಡು ಸದ್ದು ಮಾಡಿದ್ದ ಧೋನಿ, ಈಗ ತಮ್ಮ ಸಿಂಪ್ಲಿಸಿಟಿಯಿಂದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಗೆಳೆಯ ಸೀಮಂತ್ ಲೋಹನಿ ಜೊತೆ ವಿಂಟೇಜ್ ಕಾರ್​ ಗ್ಯಾರೇಜ್​​​ನಲ್ಲಿ ಉಪಹಾರ ಸೇವಿಸೋ ಮೂಲಕ, ತಮ್ಮ ಸಿಂಪ್ಲಿಸಿಟಿ ಮೆರೆದಿದ್ದಾರೆ. ಸದ್ಯ ಈ ಫೋಟೋ, ಸೋಶಿಯಲ್ ಮೀಡಿಯಾದಲ್ಲಿ ಸಖರ್ ವೈರಲ್ ಆಗ್ತಿದೆ. ಧೋನಿಯ ಸರಳತೆಗೆ ಕ್ರಿಕೆಟ್ ಅಭಿಮಾನಿಗಳು ಫಿದಾ ಆಗಿ, ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ.

The post ಸರಳತೆಗೆ ಮತ್ತೊಂದು ಹೆಸರೇ ಎಂ.ಎಸ್ ಧೋನಿ..! appeared first on News First Kannada.

Source: newsfirstlive.com

Source link