‘ಸ್ನೇಹಿತರ ವಿಚಾರದಲ್ಲಿ ಸಂಧಾನ ಆಗಿದೆ.. ಕೇಸ್ ವಿಚಾರದಲ್ಲಿ ನಾವು ರಾಜೀ ಆಗಲ್ಲ’

‘ಸ್ನೇಹಿತರ ವಿಚಾರದಲ್ಲಿ ಸಂಧಾನ ಆಗಿದೆ.. ಕೇಸ್ ವಿಚಾರದಲ್ಲಿ ನಾವು ರಾಜೀ ಆಗಲ್ಲ’

ಬೆಂಗಳೂರು: ನಟ ದರ್ಶನ್ ಹೆಸರಲ್ಲಿ ಶ್ಯೂರಿಟಿ ವಂಚನೆ ಪ್ರಕರಣ ತಣ್ಣಗಾಗುತ್ತಿದ್ದಂತೆ ಇಂದು ನಿರ್ಮಾಪಕ ಉಮಾಪತಿ ಪತ್ನಿ ಜೊತೆ ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಉಮಾಪತಿ ನಾನು ನಿರಪರಾಧಿ, ಬನಶಂಕರಿ ಅಮ್ಮ ನನ್ನ ಕಾಪಾಡ್ತಾಳೆ ಎಂದು ಹೇಳಿದ್ದರು. ಈಗ ಪ್ರಕರಣದಲ್ಲಿ ಕೊಂಚ ರಿಲೀಫ್ ಸಿಗ್ತಿದಂತೆ ಬನಶಂಕರಿ ಅಮ್ಮನಿಗೆ ಉಮಾಪತಿ ದಂಪತಿ ವಿಶೇಷ ಪೂಜೆ ಸಲ್ಲಿಸಿತು.

ನಾನು ಕಳ್ಳ ಅಲ್ಲ
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಉಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ದರ್ಶನ್ ಸರ್ ಹೇಳಿದ್ದಾರೆ, ನಮ್ಮ ನಿರ್ಮಾಪಕರು ಬಿಟ್ಟುಕೊಡಲ್ಲ ಎಂದು. ಕಾನೂನು ಮೂಲಕ ಮುಂದುವರೆಯುತ್ತೀವಿ ಎಂದು ಮತ್ತೆ ಸ್ಪಷ್ಟಪಡಿಸಿದರು.

ಅರುಣಾಕುಮಾರಿ ಪ್ರೆಸ್​ಮೀಟ್ ಮಾಡಲಿ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾನು ನೇರವಾಗಿರೋ ವ್ಯಕ್ತಿ, ನಾನು ಕಳ್ಳ ಅಲ್ಲ. ನೇರವಾಗಿ ಮಾತನಾಡುತ್ತೇನೆ, ಆಕೆ ನನಗೆ ಲೆಕ್ಕಕಿಲ್ಲ. ಅವರ ಹತ್ತಿರ ಏನೇ ದಾಖಲೆ ಇದ್ದರೂ ತೆಗೆದುಕೊಳ್ಳಿ. ನಾನು ತಪ್ಪು ಮಾಡಿದ್ರೆ ಮೈಸೂರು ಸಿಸಿಬಿ ಆಫೀಸ್​ಗೆ ಹೋಗ್ತಿರಲಿಲ್ಲ.

ದರ್ಶನ್ ಬಂದಿರೋದಕ್ಕೆ ದೊಡ್ಡ ವಿಷಯ ಆಯ್ತು
ನಾನು ದರ್ಶನ್ ಅವರ ಮೇಲೆ ಆರೋಪ ಮಾಡಿಲ್ಲ. ಅವರೂ ಕೂಡ‌ ನನ್ನ ಮೇಲೆ ಆರೋಪ ಮಾಡಿಲ್ಲ. ಇದು ದೊಡ್ಡ ವಿಷಯ ಅಲ್ಲ, ದರ್ಶನ್ ಬಂದಿರೋದಕ್ಕೆ ದೊಡ್ಡ ವಿಷಯ ಆಯ್ತು. ದರ್ಶನ್ ಸರ್​ಗೆ, ನನಗೆ ಏನೂ ಕಡಿಮೆ ಇಲ್ಲ. ನಿನ್ನೆ ದರ್ಶನ್ ಸರ್ ಮನೆಗೆ ಕರೆಸಿಕೊಂಡು ಮಾತನಾಡಿ ಬಗೆಹರಿಸಿಕೊಂಡಿದ್ದೀವಿ ಎಂದರು.

ದರ್ಶನ್ ಸರ್ ನಾನು‌ ಸಿನಿಮಾ ಮಾಡಿದ್ದೀವಿ. ಈ ವಿಚಾರವಾಗಿ‌ ನಾವಿಬ್ಬರೂ ಮಾತನಾಡಲ್ಲ. ದರ್ಶನ್ ಸರ್ ನಿನ್ನೆ ಹೇಳಿಕೆ‌ ಕೊಟ್ಟಿದ್ದಾರೆ. ಇದು ಮುಗಿದಿದೆ ದರ್ಶನ್ ಸರ್ ಜೊತೆ ಎರಡು‌ ಸಿನಿಮಾ ಮಾಡ್ತೀನಿ. ದರ್ಶನ್ ಸರ್ ನನ್ನ ಜೊತೆ ಯಾವುದೇ ವೈಮನಸ್ಸಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದರು.

The post ‘ಸ್ನೇಹಿತರ ವಿಚಾರದಲ್ಲಿ ಸಂಧಾನ ಆಗಿದೆ.. ಕೇಸ್ ವಿಚಾರದಲ್ಲಿ ನಾವು ರಾಜೀ ಆಗಲ್ಲ’ appeared first on News First Kannada.

Source: newsfirstlive.com

Source link