ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಯಾ ಮಿರ್ಜಾ

ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋದೊಂದಿಗೆ ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ಹೌದು, ಟ್ವಿಟ್ಟರ್ ನಲ್ಲಿ ತಮ್ಮ ಮಗನ ಕೈ ಹಿಡಿದುಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿರುವ ನಟಿ, ಇಲ್ಲಿಯವರೆಗೆ ತಮ್ಮನ್ನು ಕೇರ್ ಮಾಡಿದ ಕುಟುಂಬಸ್ಥರು ಹಾಗೂ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ ಈಗಾಗಲೇ ದಿಯಾ ಹಾಗೂ ವೈಭವ್ ರೇಖಿ ದಂಪತಿ ಮಗುವಿಗೆ ಅವ್ಯಾನ್ ಎಂದು ಹೆಸರು ಕೂಡ ನಾಮಕರಣ ಮಾಡಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಜೀವನ ಹೇಗಿರುತ್ತೆ ಎಂಬುದರ ಅರಿವು ನನಗಿತ್ತು: ದಿಯಾ ಮಿರ್ಜಾ

ಇದೇ ವರ್ಷ ಫೆಬ್ರವರಿ 15ರಂದು ದಿಯಾ ಮಿರ್ಜಾ ವೈಭವ್ ರೇಖಿಯನ್ನು ಮದುವೆಯಾಗಿದ್ದರು. ಕೇವಲ ಆಪ್ತರು ಹಾಗೂ ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಮದುವೆ ಮುಗಿಸುತ್ತಿದ್ದಂತೆಯೇ ದಿಯಾ ಮಿರ್ಜಾ ತಮ್ಮ ಪತಿ ಜೊತೆ ಮಾಲ್ಡೀವ್ಸ್ ಗೆ ಹನಿಮೂನ್‍ಗೆ ತೆರಳಿದ್ದರು. ನಂತರ ತಾವು ಗರ್ಭಿಣಿ ಎಂಬುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ರಿವೀಲ್ ಮಾಡಿದ್ದರು.

blank

ದಿಯಾ ಮಿರ್ಜಾಗೆ ಇದು ಎರಡನೇ ಮದುವೆಯಾಗಿದ್ದು, ಈ ಹಿಂದೆ ಅವರು 2014ರಲ್ಲಿ ಉದ್ಯಮಿ ಸಾಹುಲ್ ಸಂಘ ಅವರನ್ನು ಮದುವೆಯಾಗಿದ್ದರು. ಆದರೆ ಐದೇ ವರ್ಷದಲ್ಲಿ ಈ ಮದುವೆ ಮುರಿದು ಬಿದ್ದು 2019ರಲ್ಲಿ ಡೈವೋರ್ಸ್‍ನಲ್ಲಿ ಪರ್ಯಾವಸಾನಗೊಂಡಿತ್ತು. ಈ ಮೂಲಕ 11 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿ 37ನೇ ವಯಸ್ಸಿನಲ್ಲಿ ವಿಚ್ಛೇದನ ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೀಡಾಗಿತ್ತು.

blank

ಇದಾದ ಬಳಿಕ ದಿಯಾ ಮುಂಬೈ ಮೂಲದ ಉದ್ಯಮಿ, ಹಣಕಾಸು ಹೂಡಿಕೆದಾರ ಹಾಗೂ ಪಿರಮಲ್ ಫಂಡ್ ಮ್ಯಾನೇಜ್‍ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ವೈಭವ್ ರೇಖಿ ಜೊತೆ ಡೇಟಿಂಗ್ ಶುರು ಮಾಡ್ಕೊಂಡಿದ್ದರು. ಇದೇ ಫೆಬ್ರವರಿಯಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದರು. ಇತ್ತ ವೈಭವ್ ರೇಖಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ ಮಗಳಿದ್ದಾಳೆ.

 

View this post on Instagram

 

A post shared by Dia Mirza (@diamirzaofficial)

The post ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಯಾ ಮಿರ್ಜಾ appeared first on Public TV.

Source: publictv.in

Source link