ಜೀವ & ಜೀವನ ಎರಡೂ ಮುಖ್ಯ -ಅಶ್ವಥ್​ ನಾರಾಯಣ್ ಯಾಕೆ ಹೀಗೆ ಹೇಳಿದ್ರು?

ಜೀವ & ಜೀವನ ಎರಡೂ ಮುಖ್ಯ -ಅಶ್ವಥ್​ ನಾರಾಯಣ್ ಯಾಕೆ ಹೀಗೆ ಹೇಳಿದ್ರು?

ಬೆಂಗಳೂರು: ರಾಜ್ಯದಲ್ಲಿ ಅನ್‌ಲಾಕ್ 4.0 ಪ್ರಕ್ರಿಯೆ ವಿಚಾರಕ್ಕೆ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ್ ಪ್ರತಿಕ್ರಿಯಿಸಿ.. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ಸೋಂಕಿನ ಪ್ರಮಾಣ ತಿಳಿದು ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತಾ ತಿಳಿಸಿದ್ದಾರೆ.

ಬದಲಾವಣೆ ಮಾಡುವುದಾದ್ರೆ ಕ್ಯಾಬಿನೆಟ್ ಸಚಿವರ ಜೊತೆ ಚರ್ಚೆ ಮಾಡಿ ಮುಖ್ಯಮಂತ್ರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ. ಜೀವ ಮತ್ತು ಜೀವನ ಎರಡು ಮುಖ್ಯ. ಈ ನಿಟ್ಟಿನಲ್ಲಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ರಾಜ್ಯದಲ್ಲಿ ಸಾರ್ವಜನಿಕರಿಗೆ ಲಸಿಕೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ತಿಂಗಳಿಗೆ ಒಂದು ಬಾರಿ ಲಸಿಕೆ ಎಲ್ಲಾ ರಾಜ್ಯಗಳಿಗೂ ಹಂಚಿಕೆಯಾಗುತ್ತದೆ. ಅದೇ ನಿಟ್ಟಿನಲ್ಲಿ ರಾಜ್ಯಕ್ಕೂ ಲಸಿಕೆ ಹಂಚಿಕೆಯಾಗಿದೆ. ಮುಂದೆಯೂ ಇದೇ ಪ್ರಮಾಣದಲ್ಲಿ ರಾಜ್ಯದಲ್ಲಿ ಲಸಿಕೆ ಹಂಚಿಕೆಯಾಗಲಿದೆ. 60 ಲಕ್ಷದಷ್ಟು ಸಾರ್ವಜನಿಕರು ಪ್ರತಿ ತಿಂಗಳು ಲಸಿಕೆ ಪಡೆಯುತ್ತಿದ್ದಾರೆ. ಲಸಿಕೆಯಲ್ಲಿ ಕೊರತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

The post ಜೀವ & ಜೀವನ ಎರಡೂ ಮುಖ್ಯ -ಅಶ್ವಥ್​ ನಾರಾಯಣ್ ಯಾಕೆ ಹೀಗೆ ಹೇಳಿದ್ರು? appeared first on News First Kannada.

Source: newsfirstlive.com

Source link