3 ತಿಂಗಳ ಲಸಿಕೆ ಬದಲಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟ ಆರೋಪ; ಕೋಲಾರದಲ್ಲಿ ಮಗು ಸಾವು

3 ತಿಂಗಳ ಲಸಿಕೆ ಬದಲಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟ ಆರೋಪ; ಕೋಲಾರದಲ್ಲಿ ಮಗು ಸಾವು

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬೇವಹಳ್ಳಿ ಗ್ರಾಮದಲ್ಲಿ ಆರೋಗ್ಯದಿಂದ ಇದ್ದ ಮೂರು ತಿಂಗಳ ಮಗು ಸಾವನ್ನಪ್ಪಿದ್ದು, ಆರೋಗ್ಯ ಇಲಾಖೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಅಂಜಲಿ ಹಾಗೂ ನಾಗರಾಜ್ ಎಂಬುವರ ಮೂರು ತಿಂಗಳ ಮಗು ಸಾವನ್ನಪ್ಪಿದೆ. ಗ್ರಾಮಸ್ಥರು ಹಾಗೂ ಮಗುವಿನ ಪೋಷಕರು ಮಾಡಿರುವ ಆರೋಪದ ಪ್ರಕಾರ.. ಆರೋಗ್ಯ ಸಿಬ್ಬಂದಿ ಮಕ್ಕಳಿಗೆ ನೀಡುವ ಮೂರು ತಿಂಗಳದ ಲಸಿಕೆ ಬದಲಾಗಿ, ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಎಂದಿದ್ದಾರೆ.

blank

ನಿನ್ನೆ ಗ್ರಾಮದಲ್ಲಿ ಕೊರೊನಾ ವ್ಯಾಕ್ಸಿನ್ ಜೊತೆಗೆ ಮಕ್ಕಳಿಗೆ ಮೂರು ತಿಂಗಳ ಲಸಿಕೆ ಕೂಡ ಹಾಕಲಾಗಿತ್ತು. ಲಸಿಕೆ ಹಾಕುವ ವೇಳೆ ಮಗುವಿಗೆ ಕೊರೊನಾ ಲಸಿಕೆ ಹಾಕಿ ಎಡವಟ್ಟು ಮಾಡಿದ್ದಾರೆ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದಾರೆ. ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

The post 3 ತಿಂಗಳ ಲಸಿಕೆ ಬದಲಾಗಿ ಕೊರೊನಾ ವ್ಯಾಕ್ಸಿನ್ ಕೊಟ್ಟ ಆರೋಪ; ಕೋಲಾರದಲ್ಲಿ ಮಗು ಸಾವು appeared first on News First Kannada.

Source: newsfirstlive.com

Source link