ಕ್ರಿಕೆಟ್​ ಲೋಕದ ಬಿಗ್​ಬಾಸ್ ಗೇಲ್​ರನ್ನ ಜನ ಇಷ್ಟಪಡೋದು ಯಾಕೆ ಗೊತ್ತಾ?

ಕ್ರಿಕೆಟ್​ ಲೋಕದ ಬಿಗ್​ಬಾಸ್ ಗೇಲ್​ರನ್ನ ಜನ ಇಷ್ಟಪಡೋದು ಯಾಕೆ ಗೊತ್ತಾ?

ಕ್ರಿಸ್​​ ಗೇಲ್, T20 ಕ್ರಿಕೆಟ್​ನ ಕಿಂಗ್​. ಚುಟುಕು ಕ್ರಿಕೆಟ್​​​ ಇತಿಹಾಸದಲ್ಲಿ ವಿಶ್ವ ದಾಖಲೆಯನ್ನ ಮತ್ತಷ್ಟು ಎತ್ತರಕ್ಕೆ ಏರಿಸಿದ ವಿಂಡೀಸ್​ ದೈತ್ಯ​, ತಮ್ಮ ಸ್ಫೋಟಕ ಆಟದಿಂದ ನೂತನ ಮೈಲಿಗಲ್ಲು ನಿರ್ಮಿಸಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ ಯಾರೂ ಬರೆಯದ ದಾಖಲೆ ಬರೆದಿದ್ದಾರೆ.

blank

ಕ್ರಿಸ್​​ ಗೇಲ್, ಯ್ಯೂನಿವರ್ಸ್​​ ಬಾಸ್​​..​​​ ಟಿ20 ಕ್ರಿಕೆಟ್​​ನ ಕಿಂಗ್​. ತನ್ನ ಆಕ್ರಮಣಕಾರಿ ಆಟದಿಂದಲೇ ಅಧಿಕಾರಯುತ ದಾಖಲೆಗಳನ್ನ ಬರೆದಿರುವ ಕೆರಿಬಿಯನ್​ ಕಿಂಗ್​​, ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಬರೆಯದ ಸಾಧನೆಯನ್ನ 41 ವರ್ಷದ ಗೇಲ್, ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆ ಮೂಲಕ ಟಿ-ಟ್ವೆಂಟಿ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

blank

ಗೇಲ್​ ಈ ಸಾಧನೆ ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ. 38 ಎಸೆತಗಳಲ್ಲಿ 67ರನ್​ಗಳಿಸಿದ್ದ ಗೇಲ್​, 29ರನ್​ ಕಲೆಹಾಕಿದ್ದಾಗ ಈ ದಾಖಲೆ ಬರೆದ್ರು. ಗೇಲ್ ಕೆಲ ತಿಂಗಳ ಹಿಂದಷ್ಟೆ ಸಾವಿರ ಸಿಕ್ಸರ್​ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿದ್ದರು. ಕೆರಿಬಿಯನ್​ ದೈತ್ಯ ವಿಂಡೀಸ್​​ ಪರ ಟಿ20 ಮಾತ್ರವಲ್ಲ, ವಿಶ್ವದ ಎಲ್ಲಾ ಟಿ20 ಲೀಗ್​ಗಳಲ್ಲೂ ಬ್ಯಾಟ್​ ಬೀಸಿದ್ದಾರೆ. IPL, BBL, PSL, SPL, BPL, CPL ಹಾಗೇ ಕೌಂಟಿ ಟಿ-ಟ್ವೆಂಟಿ ಕ್ರಿಕೆಟ್​, ಸೌತ್​ ಆಫ್ರಿಕಾ ಟಿ20 ಲೀಗ್, ಹೀಗೇ ಎಲ್ಲಾ ಲೀಗ್​​ಗಳಲ್ಲೂ ಗೇಲ್​ ಆರ್ಭಟಿಸಿದ್ದಾರೆ.

ಚುಟುಕು ಕ್ರಿಕೆಟ್​ನಲ್ಲಿ ಗೇಲ್​ ಸಿಡಿಸಿರೋದು 22 ಶತಕ
ಟಿ-20 ಕ್ರಿಕೆಟ್​ನಲ್ಲಿ ಒಂದೆರಡು ಶತಕ ಸಿಡಿಸಿದ್ರೆ ಸಾಕಪ್ಪ ಅಂತ, ಹಲವು ಆಟಗಾರರು ಅಂತಿದ್ದಾರೆ. ಇನ್ನು ಕೆಲವರು, ಒಂದಾದರೂ ಸೆಂಚುರಿ ಸಿಡಿಸಲೇಬೇಕು ಅಂತ ಪ್ರಯತ್ನಿಸ್ತಾರೆ. ಆದ್ರೆ ಕ್ರಿಸ್​​ ಗೇಲ್​​​ ಮಾತ್ರ ಬರೋಬ್ಬರಿ 22 ಶತಕ ಸಿಡಿಸಿ, ವಿಶ್ವದಾಖಲೆ ನಿರ್ಮಿಸಿದ್ದಾರೆ. ಗೇಲ್​ರ ಈ ದಾಖಲೆಗಳ ಹತ್ತಿರಕ್ಕೂ, ಯಾರೂ ಬರಲು ಸಾಧ್ಯವಿಲ್ಲ ಬಿಡಿ.

 

View this post on Instagram

 

A post shared by KingGayle 👑 (@chrisgayle333)

ಗೇಮ್​ ಚೇಂಜರ್​ ಮಾತ್ರವಲ್ಲ, ಬೆಸ್ಟ್​ ಎಂಟರ್​​​ಟೈನರ್​ ಗೇಲ್
ಆನ್​ ದ ಫೀಲ್ಡ್​​ನಲ್ಲಿ ಬೌಲರ್​ಗಳ ಎದೆ ನಡುಗಿಸುವ ಗೇಲ್​, ಓರ್ವ ಎಂಟರ್​​ಟೈನಿಂಗ್ ಕ್ರಿಕೆಟರ್​. ಸೋಷಿಯಲ್​​ ಮೀಡಿಯಾದಲ್ಲೂ ಗೇಲ್​, ಮನರಂಜನಾತ್ಮಕ ವಿಡಿಯೋಗಳನ್ನ ಹಂಚಿಕೊಳ್ಳುತ್ತಾ, ಅಭಿಮಾನಿಗಳನ್ನ ಖುಷಿಪಡಿಸ್ತಾರೆ. ಬೆಂಕಿ-ಬಿರುಗಾಳಿಯಂತೆ ಬ್ಯಾಟ್​ ಬೀಸುವ ಯೂನಿವರ್ಸಲ್​ ಬಾಸ್​, ನೋಡೋಕೆ ಅಗ್ರೆಸ್ಸಿವ್ ಆಗಿ ಕಂಡರೂ ಮೃದು ಸ್ವಭಾವದವರು. ಇದರಿಂದಲೇ ಅಭಿಮಾನಿಗಳು, ಗೇಲ್​ರನ್ನ ಹೆಚ್ಚು ಇಷ್ಟಪಡೋದಕ್ಕೆ ಕಾರಣ.

ಟಿ-20ಯಲ್ಲಿ ಟಾಪ್​-5 ಆಟಗಾರರು

  • ಕ್ರಿಸ್​ಗೇಲ್​ 14038
  • ಪೊಲಾರ್ಡ್ 10,836
  • ಮಲ್ಲಿಕ್​​ 10,741
  • ವಾರ್ನರ್ 10,017
  • ವಿರಾಟ್ 9922

T20ಯಲ್ಲಿ ಕ್ರಿಸ್​ಗೇಲ್​ ಸಾಧನೆ

  • ಪಂದ್ಯ- 431
  • ರನ್​ -14038
  • 50/100 87/22
  • S/R 146.18

The post ಕ್ರಿಕೆಟ್​ ಲೋಕದ ಬಿಗ್​ಬಾಸ್ ಗೇಲ್​ರನ್ನ ಜನ ಇಷ್ಟಪಡೋದು ಯಾಕೆ ಗೊತ್ತಾ? appeared first on News First Kannada.

Source: newsfirstlive.com

Source link