‘ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಯಾಗಲಿ’ ಎಂದ ಬಿಜೆಪಿ ಮಿನಿಸ್ಟರ್​​

‘ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಯಾಗಲಿ’ ಎಂದ ಬಿಜೆಪಿ ಮಿನಿಸ್ಟರ್​​

ದಾವಣಗೆರೆ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಮಾಡಿದ ಬೆನ್ನಲ್ಲೇ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣಕ್ಕೆ ಹೀಗೊಂದು ಹೊಸ ನೀತಿ ಜಾರಿ ತರಲೇಬೇಕು ಎಂದು ಬಿಜೆಪಿ ಸಚಿವರು ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಸಚಿವ ಸಿಟಿ ರವಿ ಜನಸಂಖ್ಯಾ ನಿಯಂತ್ರಣ ಮಸೂದೆ ರಾಜ್ಯದಲ್ಲೂ ಜಾರಿಯಾಗಬೇಕು ಎಂದಿದ್ದರು. ಇದರ ಬೆನ್ನಲ್ಲೀಗ ಇಂದು ಸಚಿವ ಭೈರತಿ ಬಸವರಾಜ್ ಕೂಡ ಕರ್ನಾಟಕದಲ್ಲಿ ಜನಸಂಖ್ಯಾ ನಿಯಂತ್ರಣ ಮದೂದೆ ಜಾರಿಗೆ ಆಗ್ರಹಿಸಿದ್ದಾರೆ.

blank

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಭೈರತಿ ಸುರೇಶ್​​ ಅವರು, ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ನೀತಿ ಜಾರಿ ಅತ್ಯಗತ್ಯ. ಭಾರತದಲ್ಲಿ ಈಗ ಜನಸಂಖ್ಯೆ 150 ಕೋಟಿ ದಾಟುತ್ತಿದೆ. ಹೀಗಾದರೆ ಎಲ್ಲರಿಗೂ ಮೂಲಭೂತ ಸೌಲಭ್ಯ ಸಿಗೋದು ಅನುಮಾನ. ಅಮೆರಿಕಾ ಜನಸಂಖ್ಯೆ ಭಾರತಕ್ಕಿಂತ ಕಡಿಮೆ ಇದೆ. ಆದ್ದರಿಂದ ಅಮೆರಿಕಾದಲ್ಲಿ ಎಲ್ಲರಿಗೂ ಸೌಲಭ್ಯಗಳು ಸಿಗುತ್ತವೆ ಎಂದಿದ್ದಾರೆ.

ಹೀಗೆ ಮುಂದುವರಿದ ಅವರು, ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಯಾಗಲಿ. ಇದರ ಸಾಧಕಬಾಧಕ ಚರ್ಚಿಸಿ ಸರ್ಕಾರ ಮುಂದಿನ ದಿನಗಳಲ್ಲಿ ಒಂದು ಸೂಕ್ತ ತೀರ್ಮಾನಕ್ಕೆ ಬರಲಿದೆ. ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಬಿಡುಗಡೆ ಮಾಡಿರುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ಕಗ್ಗೊಲೆ
ಸದ್ಯ ಉತ್ತರ ಪ್ರದೇಶ ಸರಕಾರದ ಈ ಹೊಸ ನೀತಿಗೆ ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ. ಈ ಮಸೂದೆ ಜಾರಿಗೆ ತರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದು ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಸರ್ಕಾರ ‘ಹೊಸ ಅಸ್ತ್ರ’; ಚರ್ಚೆಗೆ ಕಾರಣವಾಗಿರೋ ಮಸೂದೆಯಲ್ಲಿ ಏನಿದೆ..?

The post ‘ಕರ್ನಾಟಕದಲ್ಲೂ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಯಾಗಲಿ’ ಎಂದ ಬಿಜೆಪಿ ಮಿನಿಸ್ಟರ್​​ appeared first on News First Kannada.

Source: newsfirstlive.com

Source link