ಬಸವೇಶ್ವರ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ 5 ವರ್ಷದ ಬಾಲಕ ನೇಮಕ

ಬಸವೇಶ್ವರ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ 5 ವರ್ಷದ ಬಾಲಕ ನೇಮಕ

ಕಲಬುರಗಿ: ಜಿಲ್ಲೆಯ ಕಾಳಗಿ ಪಟ್ಟಣದ ಬಸವೇಶ್ವರ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ ಐದು ವರ್ಷದ ಬಾಲಕ ನೀಲಕಂಠಯ್ಯಸ್ವಾಮಿ ಅವರಿಗೆ ಪಟ್ಟ ಕಟ್ಟಲಾಗಿದೆ.

ನಿನ್ನೆ ಐದು ವರ್ಷದ ಬಾಲಕ ನೀಲಕಂಠಯ್ಯಸ್ವಾಮಿ ಹಿರೇಮಠ ಅವರನ್ನ ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಕಳೆದ ಸೋಮವಾರ ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯ ಸ್ವಾಮೀಜಿ ಹೃದಯಾಘಾತದಿಂದ ಲಿಂಗ್ಯಕ್ಯರಾಗಿದ್ದರು.

blank

 

ಆ ಹಿನ್ನೆಲೆಯಲ್ಲಿ ಬಾಲಕನನ್ನ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ. ಮಠದ ಉತ್ತರಾಧಿಕಾರಿ ಸ್ಥಾನವನ್ನ ಖಾಲಿ ಬಿಡುವಂತಿಲ್ಲ. ಹೀಗಾಗಿ ಲಿಂಗೈಕ್ಯರಾಗಿದ್ದ ಸ್ವಾಮೀಜಿಯ ಪೂರ್ವಾಶ್ರಮದ ಸಹೋದರನ ಪುತ್ರನಿಗೆ ಉತ್ತರಾಧಿಕಾರಿ ಪಟ್ಟ ನೀಡಲಾಗಿದೆ. ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿದೆ.

The post ಬಸವೇಶ್ವರ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯಾಗಿ 5 ವರ್ಷದ ಬಾಲಕ ನೇಮಕ appeared first on News First Kannada.

Source: newsfirstlive.com

Source link