ಸಹ ಕಲಾವಿದರ ಕಷ್ಟಕ್ಕೆ ಮಿಡಿದ ‘ಹೊಂಬಾಳೆ’ ಫಿಲಂಸ್​

ಸಹ ಕಲಾವಿದರ ಕಷ್ಟಕ್ಕೆ ಮಿಡಿದ ‘ಹೊಂಬಾಳೆ’ ಫಿಲಂಸ್​

ಬೆಂಗಳೂರು:  ಕೊರೋನ ಸಮಯದಲ್ಲಿ ಸಂಕಷ್ಟಕ್ಕೆ ತುತ್ತಾಗಿದ್ದ, ಕರ್ನಾಟಕ ಚಲನಚಿತ್ರ ಸಹ ಕಲಾವಿದರಿಗೆ ಹೊಂಬಾಳೆ ಫಿಲಂಸ್​ ನ ನಿರ್ಮಾಪಕ ವಿಜಯ್ ಕಿರಂಗದೂರು ನೆರೆವಿನ ಹಸ್ತ ಚಾಚಿದ್ದಾರೆ. ಕರ್ನಾಟಕ ಚಲನಚಿತ್ರ ಸಹ ಕಲಾವಿದರ ಹಾಗೂ ಪ್ರತಿನಿಧಿಗಳ ಸಂಘಕ್ಕೆ ನಾಲ್ಕು ಲಕ್ಷ ರೂಪಾಯಿ ನೀಡಿದ್ದಾರೆ.

blank

ಕೊರೊನಾ ಮಹಾಮಾರಿಯಿಂದಾಗಿ ಶೂಟಿಂಗ್​ ಇಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ ಸಹ ಕಲಾವಿದರಿಗೆ ಈ ಹಣದಿಂದ ಸುಮರು 600 ಜನರಿಗೆ ಆಹಾರ ಸಾಮಗ್ರಿಗಳ ಕಿಟ್​ನ್ನು ವಿತರಿಸಲಾಯಿತು. ಕಿಟ್ ಪಡೆಯಲು ಆಗಮಿಸಿದ ಪ್ರತಿ ಸದಸ್ಯನಿಗೆ ಸಾರಿಗೆ ಭತ್ಯೆಯೆಂದು ಎರಡು ನೂರು ರೂಪಾಯಿಯನ್ನು ಕೂಡ ನೀಡಲಾಗಿದೆ ಎಂದು ಕರ್ನಾಟಕ ಸಹ ಕಲಾವಿದರ ಸಂಘದ ಖಜಾಂಚಿ ದಿವಾಕರ್ ಆರಗ ತಿಳಿಸಿದ್ದಾರೆ.

blank

blank

ಚಲನಚಿತ್ರ ಸಹ ಕಲಾವಿದರಿಗೆ ಸಂಘದ ಸದಸ್ಯರ ಸಂಕಷ್ಟಕ್ಕೆ ಮಿಡಿದ ವಿಜಯ್ ಕಿರಂಗದೂರು ಹಾಗೂ ಅವರಿಗೆ ಸಹಕಾರ ನೀಡಿದ ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕಾರ್ಯದರ್ಶಿ ರವೀಂದ್ರನಾಥ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಅವರಿಗೆ ಸಂಫದ ಎಲ್ಲಾ ಸದಸ್ಯರ ಪರವಾಗಿ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ ದಿವಾಕರ್ ಆರಗ.

The post ಸಹ ಕಲಾವಿದರ ಕಷ್ಟಕ್ಕೆ ಮಿಡಿದ ‘ಹೊಂಬಾಳೆ’ ಫಿಲಂಸ್​ appeared first on News First Kannada.

Source: newsfirstlive.com

Source link