ತನ್ನಿಷ್ಟದ ದೇವರೊಂದಿಗಿನ ಇಂಟರ್ನಿ ಫೋಟೋ ಶೇರ್ ಮಾಡಿದ ನಾಸಾ.. ಇಷ್ಟಕ್ಕೇ ಯಾಕೆ ವಿವಾದ?

ತನ್ನಿಷ್ಟದ ದೇವರೊಂದಿಗಿನ ಇಂಟರ್ನಿ ಫೋಟೋ ಶೇರ್ ಮಾಡಿದ ನಾಸಾ.. ಇಷ್ಟಕ್ಕೇ ಯಾಕೆ ವಿವಾದ?

ನವದೆಹಲಿ: ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಭಾರತೀಯ ಮೂಲದ ಇಂಟರ್ನಿ ಪ್ರತಿಮಾ ರಾಯ್ ಎಂಬುವರು ಹಿಂದೂ ದೇವರುಗಳೊಂದಿಗೆ ಕ್ಲಿಕ್ಕಿಸಿದ ಫೋಟೋ ಪೋಸ್ಟ್​ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಮಾ ರಾಯ್​​ ಅವರ ಫೋಟೋ ಭಾರೀ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ತನ್ನ ಸಂಸ್ಥೆಯಲ್ಲಿ ಇಂಟರ್ನ್​ಶೀಪ್​​ಗೆ ಅರ್ಜಿ ಸಲ್ಲಿಸಿದ್ದ 4 ಜನರ ಫೋಟೋಗಳನ್ನು ಅಪ್ಲೋಡ್​ ಮಾಡಿ ನಾಸಾ ತನ್ನ ಅಧಿಕೃತ ಖಾತೆಯಿಂದ ಟ್ವೀಟ್​ ಮಾಡಿತ್ತು. ಈ ಟ್ವೀಟ್​​ನಲ್ಲಿ 4 ಇಂಟರ್ನಿಗಳ ಫೋಟೋಗಳು ಇದ್ದವು. ಈ ಪೈಕಿ ಭಾರತದ ಪ್ರತಿಮಾ ರಾಯ್​ ಮಾತ್ರ ದೇವರೊಂದಿಗೆ ಕ್ಲಿಕ್ಕಿಸಿದ ಫೋಟೋ ನೀಡಿದ್ದರು. ಆದರೀಗ, ನಾಸಾ ಪೋಸ್ಟ್​ ಮಾಡಿರುವ ಈ ಫೋಟೋಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಕೆಲವರು ನಾಸಾ ಸಂಸ್ಥೆಯನ್ನು ನಾಶಪಡಿಸಲು ಎಂದು ಭಾರತದಿಂದ ಅಮೇರಿಕಾಗೆ ಹೋಗಿದ್ದಾರೆ. ನಾಸಾ ತಾನು ಹಿಂದೂ ಎಂದು ಹೇಳಿಕೊಳ್ಳುವ ಯುವತಿಯನ್ನು ಯಾಕೇ ತೆಗೆದುಕೊಳ್ಳಬೇಕು? ಪ್ರತಿಮಾ ರಾಯ್​​​ ಹಿಂದೂ ದೇವತೆಗಳೊಂದಿಗೆ ಫೋಟೋ ಕ್ಲಿಕ್ಕಿಸಿ ನಾಸಾಗೆ ನೀಡುವ ಅವಶ್ಯಕತೆ ಏನಿದೆ? ಎಂದು ಹಲವರು ಟೀಕೆ ಮಾಡಿದ್ದಾರೆ.

ಒಂದೆಡೆ ಕೆಲವರು ಈ ಚಿತ್ರ ಪೋಸ್ಟ್​ ಮಾಡಿದ ನಾಸಾದ ವೈಜ್ಞಾನಿಕ ಚಿಂತನೆಯನ್ನು ಪ್ರಶ್ನಿಸಿದರೇ, ಇನ್ನೊಂದೆಡೆ ತನ್ನಿಷ್ಟದ ಧರ್ಮ ಮತ್ತು ದೇವರನ್ನು ನಂಬುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎಂದು ಪ್ರತಿಮಾ ಪರ ಟ್ವೀಟ್​ ಮಾಡಿದ್ದಾರೆ.

ಭಾರತೀಯ ಮೂಲದ ಪ್ರತಿಮಾ ರಾಯ್ ಮತ್ತು ಪೂಜಾ ರಾಯ್ ಇಬ್ಬರೂ ಅಕ್ಕ ತಂಗಿಯರು. ಇವರು ನಾಸಾ ಗ್ಲೆನ್ ರೀಸರ್ಚ್ ಕೇಂದ್ರದಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಿಮಾ, ನನಗೆ ದೇವರ ಮೇಲೆ ನಂಬಿಕೆ ಇದೆ. ನನ್ನ ಎಲ್ಲಾ ಸಾಧನೆಗೂ ನಾನು ನಂಬುವ ಧರ್ಮ ಮತ್ತು ದೇವರೆ ಸ್ಫೂರ್ತಿ ಎಂದಿದ್ದಾರೆ. ಹಾಗೆಯೇ ನಾಸಾಗೆ ನಮ್ಮ ಧರ್ಮದ ದೇವರ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲದಿರುವಾಗ ಕೆಲವು ಕಿಡಿಗೇಡಿಗಳಿಗೆ ಯಾಕೇ ತೊಂದರೆ ಎಂದು ಪ್ರಶ್ನಿಸಿದ್ದಾರೆ ಪ್ರತಿಮಾ.

ನಾಸಾ ಹಾಕಿರುವ ಪೋಸ್ಟ್​ನಲ್ಲಿ ಒಂದು ವೇಳೆ ಮುಸ್ಲಿಂ ಅಥವಾ ಕ್ರೈಸ್ತರ ಫೋಟೋ ಇದ್ದಿದ್ದರೇ ಹೀಗೆ ವಿರೋಧ ವ್ಯಕ್ತವಾಗುತ್ತಿತ್ತೇ? ಕೇವಲ ಹಿಂದುಗಳ ಫೋಟೋಗೆ ಮಾತ್ರ ಯಾಕೇ ವಿರೋಧ ಎಂದು ಹಲವರು ಟ್ವೀಟ್​ ಮಾಡಿದ್ದಾರೆ.

The post ತನ್ನಿಷ್ಟದ ದೇವರೊಂದಿಗಿನ ಇಂಟರ್ನಿ ಫೋಟೋ ಶೇರ್ ಮಾಡಿದ ನಾಸಾ.. ಇಷ್ಟಕ್ಕೇ ಯಾಕೆ ವಿವಾದ? appeared first on News First Kannada.

Source: newsfirstlive.com

Source link