ಹೊತ್ತಿ ಉರಿಯುತ್ತಿದೆ ಸೌಥ್ ಆಫ್ರಿಕಾ.. ಎಲ್ಲೆಲ್ಲೂ ಬೆಂಕಿ..ಲೂಟಿ..ದಂಗೆ

ಹೊತ್ತಿ ಉರಿಯುತ್ತಿದೆ ಸೌಥ್ ಆಫ್ರಿಕಾ.. ಎಲ್ಲೆಲ್ಲೂ ಬೆಂಕಿ..ಲೂಟಿ..ದಂಗೆ

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜೇಕಬ್ ಜುಮಾರ ಬಂಧನ ತೀವ್ರ ಗಲಭೆಗೆ ಕಾರಣವಾಗಿದೆ. ಮಂಗಳವಾರ ತಡ ರಾತ್ರಿಯಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ ಇದುವರೆಗೂ 70ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ದಕ್ಷಿಣಾ ಆಫ್ರಿಕಾ ಪೊಲೀಸರು ಸುಮಾರು 1234 ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದೊಂದು ವಾರದಿಂದ ತಮ್ಮ ಅಧ್ಯಕ್ಷರ ಬಂಧಿಸಿದ್ದಾರೆ ಎಂದು ಜೇಕಬ್ ಜುಮಾರ ಬೆಂಬಲಿಗರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಈ ಪ್ರತಿಭಟನೆಯೀಗ ತೀವ್ರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಅನೇಕ ಅಮಾಯಕರ ಹೆಣಗಳು ಬೀಳುತ್ತಿವೆ. ಕೆಲವರಂತೂ ಪ್ರತಿಭಟನೆ ನೆಪದಲ್ಲಿ ವಿವಿಧ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಲೂಟಿ ಮಾಡುತ್ತಿದ್ದಾರೆ.

blank

ಇನ್ನು, ಜೇಕಬ್ ಜುಮಾರ ಬೆಂಬಲಿಗರು ಲೂಟಿ ಮಾಡುತ್ತಿರುವ ಸ್ಥಳದಲ್ಲಿ ಅಪಾರವಾದ ಜನಸ್ತೋಮ ಸೇರಿದೆ. ಈ ಜನರ ನೂಕುನುಗ್ಗಲಿನಿಂದಲೇ ಅನೇಕ ಸಾವುಗಳು ಸಂಭವಿಸಿವೆ. ಸದ್ಯ ಹಿಂಸಾಚಾರದಲ್ಲಿ ತೊಡಗಿರುವ ಕಿಡಿಗೇಡಿಗಳನ್ನು ನಿಯಂತ್ರಿಸಲು ಹರಸಾಹಸ ಮಾಡಲಾಗುತ್ತಿದೆ. ಇದಕ್ಕಾಗಿ ಪೊಲೀಸ್ ಮತ್ತು ಮಿಲಿಟರಿ ಪಡೆಗಳು ಸ್ಟನ್ ಗ್ರೆನೇಡ್ ಹಾಗೂ ರಬ್ಬರ್ ಬುಲೆಟ್​ಗಳನ್ನ ಪ್ರಯೋಗಿಸಿದ್ದಾರೆ ಎನ್ನಲಾಗಿದೆ.

blank

ಅದೃಷ್ಟವಶಾತ್​​ ಗೌಟೆಂಗ್ ಹಾಗೂ ಕ್ವಾಜುಲು-ನಟಾಲ್ ಪ್ರಾಂತ್ಯಗಳಿಗೆ ಮಾತ್ರ ಈ ಹಿಂಸಾಚಾರ ಸೀಮಿತವಾಗಿದೆ. ಇದು ಇಡೀ ಆಫ್ರೀಕಾಗೆ ಹರಡುವ ಮುನ್ನವೇ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಯತ್ನಿಸುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಬೇಕಾದರು ಅಧ್ಯಕ್ಷ ಸಿರಿಲ್ ರಾಮ್ಪೊಸಾ ಮೇಲೆ ದಾಳಿ ನಡೆಯಬಹುದು ಎಂದು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಜೇಕಬ್​​ ಬಂಧನ ಯಾಕೆ?

ಜೇಕಬ್ ಜುಮಾ ಸುಮಾರು ಹತ್ತು ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು. ತಮ್ಮ ಅಧಿಕಾರದ ವೇಳೆಯಲ್ಲಿ ಜೇಕಬ್​​​ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಜೀಕಬ್​​ರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಎಂದು ಅಧ್ಯಕ್ಷ ಸಿರಿಲ್ ರಾಮ್ಪೊಸಾ ನೇತೃತ್ವದ ಸರ್ಕಾರ ಆದೇಶಿಸಿದೆ. ಪೊಲೀಸರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಜೇಕಬ್​​ರನ್ನು ಬಂಧಿಸಲಾಗಿದೆ.

The post ಹೊತ್ತಿ ಉರಿಯುತ್ತಿದೆ ಸೌಥ್ ಆಫ್ರಿಕಾ.. ಎಲ್ಲೆಲ್ಲೂ ಬೆಂಕಿ..ಲೂಟಿ..ದಂಗೆ appeared first on News First Kannada.

Source: newsfirstlive.com

Source link