ಸಂಸದೆ ಸುಮಲತಾ ಹೇಳಿಕೆಗೆ ಕಂದಾಯ ಸಚಿವ ಆರ್​.ಅಶೋಕ್​ ಸಿಡಿಮಿಡಿ

ಸಂಸದೆ ಸುಮಲತಾ ಹೇಳಿಕೆಗೆ ಕಂದಾಯ ಸಚಿವ ಆರ್​.ಅಶೋಕ್​ ಸಿಡಿಮಿಡಿ

ಮೈಸೂರು: ಕೆಆರ್​ಎಸ್​​ ಡ್ಯಾಂ ಬಿರುಕಿನ ವಿಚಾರದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ನೀಡುತ್ತಿರುವ ಹೇಳಿಕೆಗಳ ಕುರಿತಂತೆ ಕಂದಾಯ ಸಚಿವ ಆರ್.ಅಶೋಕ್​ ತೀವ್ರ ಅಸಮಾಧಾನ ಹೊರ ಹಾಕಿದ್ದು, ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್​​ಎಸ್​ ಡ್ಯಾಂ ಮುಖ್ಯ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಂದಾಯ ಸಚಿವರು, ಕೆಆರ್​ಎಸ್​ ಡ್ಯಾಂ ಸುರಕ್ಷತೆ ಬಗ್ಗೆ ಸರ್ಕಾರ ವರದಿ ಕೇಳಿತ್ತು. ಅಲ್ಲಿನ ಅಧಿಕಾರಿ ಬಿರುಕು ಇಲ್ಲ ಅಂತ ವರದಿ ಕೊಟ್ಟಿದ್ದಾರೆ. ಇದಾದ ಬಳಿಕ ಮುಖ್ಯಮಂತ್ರಿಗಳು, ನಾನು ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಎಲ್ಲರೂ ಹೇಳಿಕೆ ನೀಡಿದ್ದೇವೆ. ನಾವೆಲ್ಲ ಹೇಳಿಕೆ ನೀಡಿದ ಮೇಲೆಯೂ ಪದೇ ಪದೇ ಬಿರುಕು ಇದೆ ಅನ್ನೋದು ಸರಿಯಲ್ಲ. ಇದರಿಂದಾಗಿ ಅಣೆಕಟ್ಟೆಯ ತಳಭಾಗದಲ್ಲಿರುವ ಜನರು ಮತ್ತು ರೈತರಿಗೆ ಆತಂಕ ಉಂಟಾಗುತ್ತೆ. ಇಷ್ಟೆಲ್ಲ ಆಗುತ್ತಿರುವಾಗ ಸರ್ಕಾರವೂ ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

blankಇದೇ ವೇಳೆ ನಮಗೆ ಯಾವ ವ್ಯಕ್ತಿಯೂ ಮುಖ್ಯ ಅಲ್ಲ, ಕೆಆರ್‌ಎಸ್ ಡ್ಯಾಂ ಮುಖ್ಯ ಎಂದು ಸ್ಪಷ್ಟಪಡಿಸಿರುವ ಸಚಿವರು, ನಾನೂ ಇಂದು ಮಂಡ್ಯಕ್ಕೆ ಹೋಗುತ್ತಿದ್ದೇನೆ, ಜಿಲ್ಲಾಧಿಕಾರಿ ಭೇಟಿ ಮಾಡುತ್ತೇನೆ. ಕೆಆರ್‌ಎಸ್ ಡ್ಯಾಂ, ಬೇಬಿ ಬೆಟ್ಟದ ಸುತ್ತ ಏನಾಗಿದೆ ಅಂತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಅಣ್ಣಾಮಲೈ ಹಾದಿಯಲ್ಲೇ ಮತ್ತೊಬ್ಬ ಸಿಂಗಂ; ಪ್ರಭಾವಿ ಮಠಾಧೀಶರ ಭೇಟಿ ಸೀಕ್ರೆಟ್

The post ಸಂಸದೆ ಸುಮಲತಾ ಹೇಳಿಕೆಗೆ ಕಂದಾಯ ಸಚಿವ ಆರ್​.ಅಶೋಕ್​ ಸಿಡಿಮಿಡಿ appeared first on News First Kannada.

Source: newsfirstlive.com

Source link