ಕನ್ನಡದಲ್ಲೇ ಖಡಕ್ ಡೈಲಾಗ್; ತಮಿಳು ಸ್ಟಾರ್​ ವಿಜಯ್ ಸೇತುಪತಿಗೆ ಪ್ರೇಕ್ಷಕರು ಫಿದಾ

ಕನ್ನಡದಲ್ಲೇ ಖಡಕ್ ಡೈಲಾಗ್; ತಮಿಳು ಸ್ಟಾರ್​ ವಿಜಯ್ ಸೇತುಪತಿಗೆ ಪ್ರೇಕ್ಷಕರು ಫಿದಾ

ರಾಮನಗರ: ಪ್ರತಿಬಾರಿ ನಾನು ಬೆಂಗಳೂರಿಗೆ ಬಂದ ಸಂದರ್ಭದಲ್ಲೂ ನಾನು ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ. ನನಗೆ ಬೆಂಗಳೂರು ಎಂದರೇ ತುಂಬಾ ಇಷ್ಟ. ಇಲ್ಲಿನ ಫಿಲ್ಮ್​​ ಸಿಟಿಯೂ ತುಂಬಾ ಚೆನ್ನಾಗಿದೆ ಎಂದು ತಮಿಳು ನಟ ವಿಜಯ್ ಸೇತುಪತಿ ಹೇಳಿದ್ದಾರೆ.

ತಮಿಳಿನ ರಿಯಾಲಿಟಿ ಶೋ ಚೇಫ್ ಮಾಸ್ಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲು ರಾಮನಗರಕ್ಕೆ ಆಗಮಿಸಿದ್ದ ಸೇತುಪಥಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ನನಗೆ ಕೊಡಗಿನ ಮಡಿಕೇರಿ ಎಂದರೇ ಕರ್ನಾಟಕದಲ್ಲಿ ತುಂಬಾ ಇಷ್ಟ. ಕನ್ನಡದಲ್ಲಿ ಉತ್ತಮ ಅವಕಾಶ ಸಿಕ್ಕರೇ ತಪ್ಪದೇ ಸಿನಿಮಾ ಮಾಡುತ್ತೇನೆ. ಈ ಹಿಂದೆ ಮಾಸ್ಟರ್ ಸಿನಿಮಾ ಶೂಟಿಂಗ್​ಗಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದೆ, ಅಲ್ಲಿನ ಜರ್ನಿ ಮಾತ್ರ ತುಂಬಾ ಚೆನ್ನಾಗಿತ್ತು. ಅಲ್ಲಿನ ಪರಿಸರ, ಊಟ ನನಗೆ ತುಂಬಾ ಇಷ್ಟ ಆಯ್ತು ಎಂದರು.

blank

ಇದೇ ವೇಳೆ ಕನ್ನಡ ಡೈಲಾಗ್​ ಒಂದನ್ನು ಹೇಳಲು ಮನವಿ ಮಾಡಿದ ಸಂದರ್ಭದಲ್ಲಿ, ‘ಆಗ ಎಲ್ಲಾ ಬಂಬಡಾ ಬಡಿಕೊಂಡಿದ್ದೇ.. ನನ್ನ ಮಗಳು ಆಗಲ್ಲ ಅಂತಾ.. ನನ್ನ ಮಗಳು ಇನೋಸೆಂಟ್​, ಏನೂ ಗೊತ್ತಾಗೋದಿಲ್ಲ ಅಂತಾ.. ಬಾಯಿಗೆ ಬೆರಳಿಟ್ಟರೇ ಚಿಪೋದು ಬರೋದಿಲ್ಲ ಅಂತಾ..’ ಡೈಲಾಗ್​ ಹೇಳಿ ಅಭಿಮಾನಿ ಮೆರೆದರು. ಅಲ್ಲದೇ ಕಿಚ್ಚ ಸುದೀಪ್​ ಅವರನ್ನು ಭೇಟಿ ಮಾಡಿದ್ದು, ಅವರ ಸ್ನೇಹ, ನಡೆ-ನುಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರು ನನ್ನ ಸ್ನೇಹಿತ ಎಂದು ಹೇಳಿದರು.

ಇದನ್ನೂ ಓದಿ: ಡೈನಾಮಿಕ್ ಫ್ರೀನ್ಸ್ ಪ್ರಜ್ವಲ್​​ರ ‘ಮಾಫಿಯಾ’ ಸಿನಿಮಾ ಪೋಸ್ಟರ್ ಲಾಂಚ್​ ಮಾಡಿದ ವಿಜಯ್ ಸೇತುಪತಿ 

The post ಕನ್ನಡದಲ್ಲೇ ಖಡಕ್ ಡೈಲಾಗ್; ತಮಿಳು ಸ್ಟಾರ್​ ವಿಜಯ್ ಸೇತುಪತಿಗೆ ಪ್ರೇಕ್ಷಕರು ಫಿದಾ appeared first on News First Kannada.

Source: newsfirstlive.com

Source link