ದಿವ್ಯಾಳ ಹಲ್ಲು ಉಜ್ಜಿದ ಅರವಿಂದ್.. Soooo cute..!

ದಿವ್ಯಾಳ ಹಲ್ಲು ಉಜ್ಜಿದ ಅರವಿಂದ್.. Soooo cute..!

ಅರವಿಂದ್​ ಮತ್ತು ದಿವ್ಯ ಉರುಡುಗ ಬಿಗ್​ ಮನೆಯ ಸ್ವೀಟ್​ ಕ್ಯೂಟ್ ಜೋಡಿ ಎಂದೇ ಫೇಮಸ್​​ ಆಗಿದ್ದಾರೆ. ಟಾಸ್ಕ್​ ವೇಳೆ ದಿವ್ಯಾ ಅವರು ಪೆಟ್ಟು ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ದಿವ್ಯಾ ರೇಸ್ಟ್​ ಮಾಡದಿದ್ದಾಗ ಅರವಿಂದ್​ ಪೊಲೀಸಪ್ಪನ ತರಹ ದಿವ್ಯಾಗೆ ಕ್ಲಾಸ್​ ತಗೋತಾರೆ.

ಇದನ್ನೂ ಓದಿ: ಬಿಗ್​​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಗೆದ್ದಿದ್ಯಾರು? ಬಿದ್ದಿದ್ಯಾರು? -ಇಂಟರೆಸ್ಟಿಂಗ್ ಕಹಾನಿ

ಹೌದು.. ಅರವಿಂದ್​ ಅವರು ದಿವ್ಯಾ ಅವರನ್ನು ತುಂಬಾ ನಾಜುಕಾಗಿ ಕಾಳಜಿ ಮಾಡ್ತಿದ್ದಾರೆ. ದಿವ್ಯಾಗೆ ಊಟ ಮಾಡಿಸುವುದರಿಂದ ಹೀಡಿದು ಬ್ರಶ್​ ಮಾಡಿಸುವುದುರ ತನಕ ಪ್ರತಿಯೊಂದನ್ನು ತಾವೇ ಖುದ್ದಾಗಿ ಕಾಳಜಿವಹಿಸುತ್ತಿದ್ದಾರೆ.

blank

ದಿವ್ಯಾ ರೇಸ್ಟ್​ ಮಾಡದೇ ಪ್ರಶಾಂತ್​ ಅವರ ಜೊತೆ ವಾಕ್ ಮಾಡ್ತಿರ್ತಾರೆ. ಇದನ್ನು ನೋಡಿದ ಅರವಿಂದ್​ ಕೋಪದಿಂದಲೇ ಒಂದು ಕಡೆ ಕೂತ್ಕೋ, ಹೇಳಿದ್ದು ಕೇಳಲ್ಲ, ನಿಂಗೆ ಏನ್​ ಅನ್ಸುತ್ತೊ ಅದನ್ನು ಮಾಡು ಅಂತಾರೆ.

blank

ಇದನ್ನೂ ಓದಿ: ದಿವ್ಯಾ ಉರುಡುಗಗೆ ಮತ್ತೆ ಏನಾಯ್ತು..? ಗೆಟ್​​ವೆಲ್ ಸೂನ್ ಎಂದ ಫ್ಯಾನ್ಸ್​

ಇತ್ತ ದಿವ್ಯಾ ಕ್ಯೂಟ್​ ಆಗಿ ಎಕ್ಸ್​ಪ್ರೇಶನ್​ ಕೊಡ್ತಾ ಕೂತ್ಕೋತಾರೆ. ಇವರನ್ನು ನೋಡಿದ ಮನೆಯವರೆಲ್ಲ ಮುಗ್ಳನಗುತ್ತಾರೆ. ಮನೆಯವರೆಲ್ಲ ನಗುತ್ತೀರುವುದನ್ನು ನೋಡಿದ ದಿವ್ಯಾ ನಾಚಿ ನೀರಾಗ್ತಾರೆ. ಇನ್ನೊಂದು ಕಡೆ ಅರವಿಂದ್​ ಮಾಡುತ್ತೀರುವ ಕಾಳಜಿ ನೋಡಿ ಮನೆಯಲ್ಲಿ ಶುಭಾ ಬೇರಗಾಗಿ ಮಂಜು ಹಾಗೂ ವೈಷ್ಣವಿ ಅವರ ಜೊತೆ ಒಂದಿಷ್ಟು ಚರ್ಚೆ ಮಾಡ್ತಾರೆ. ಒಟ್ನಲ್ಲಿ ಇದನ್ನೆಲ್ಲಾ ನೋಡಿದ ಅರ್ವಿ ಫ್ಯಾನ್ಸ್​ಗಂತೂ ಹಬ್ಬ. ಇದ್ದರೇ ಅರವಿಂದ್​ ಅವರ ತರಹ ಹುಡುಗ ಇರಬೇಕು ಎಂದು ಅದೆಷ್ಟು ಹುಡುಗಿರು ಪ್ರಾರ್ಥನೆ ಮಾಡ್ತಿದ್ದಾರೋ ಗೊತ್ತಿಲ್ಲ.

ಇದನ್ನೂ ಓದಿ: ಮಂಜಗೆ ಕೊಡಬಾರದ ಟಾರ್ಚರ್ ಕೊಟ್ಟ ಶುಭಾ; ಚಕ್ರವರ್ತಿಗೆ ಇದೆಂಥಾ ಶಿಕ್ಷೆ..?

The post ದಿವ್ಯಾಳ ಹಲ್ಲು ಉಜ್ಜಿದ ಅರವಿಂದ್.. Soooo cute..! appeared first on News First Kannada.

Source: newsfirstlive.com

Source link