ಮಾಟ ಮಂತ್ರ ವಿಚಾರ -ಪಕ್ಕದ ಮನೆ ಮಹಿಳೆಗೆ ನಡು ರಸ್ತೆಯಲ್ಲೇ ಥಳಿತ

ಮಾಟ ಮಂತ್ರ ವಿಚಾರ -ಪಕ್ಕದ ಮನೆ ಮಹಿಳೆಗೆ ನಡು ರಸ್ತೆಯಲ್ಲೇ ಥಳಿತ

ಬೆಂಗಳೂರು: ಮಾಟ ಮಂತ್ರದ ಆರೋಪವೊಡ್ಡಿ ಪಕ್ಕದ ಮನೆಯವರಿಗೆ ಕಿರುಕುಳ ನೀಡಿ ಜುಟ್ಟು ಹಿಡಿದು ಹಲ್ಲೆ ಮಾಡಿದ ಘಟನೆ ಕೆಂಗೇರಿಯಲ್ಲಿ ನಡೆದಿದೆ.

ರೇಣುಕಾ ಅನ್ನೋ ಮಹಿಳೆಗೆ ಪಕ್ಕದ ಮನೆಯವರು ಕಿರುಕುಳ ನೀಡ್ತಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ರೇಣುಕಾ ಪಕ್ಕದ ಮನೆಯಲ್ಲಿ ಅಲಮೇಲಮ್ಮ ಎಂಬುವವರ ಕುಟುಂಬ ವಾಸಿಸುತ್ತಿದ್ದು ಅವರ ಮನೆಯಲ್ಲಿ ಇತ್ತೀಚೆಗೆ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಳು. ಆ ಸಾವಿಗೆ ಪಕ್ಕದ ಮನೆಯ ರೇಣುಕಾ ಕಾರಣವೆಂದು ದಿನಪ್ರತಿ ಅಲಮೇಲಮ್ಮ ಕುಟುಂಬದವರು ಹಲ್ಲೆ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

blank

ಪಕ್ಕದ ಮನೆಯವರ ಕಾಟದಿಂದ ನೆಮ್ಮದಿಯೇ ಇಲ್ಲ. ಪ್ರತಿ ದಿನವೂ ಹಲ್ಲೆ ಮಾಡೋಕೆ ಮುಂದಾಗ್ತಾರೆ. ಮನೆ ಹತ್ತಿರ ಬಂದು ಗಲಾಟೆ ಮಾಡ್ತಾರೆ. ಆಸಿಡ್ ಹಾಕ್ತೀವಿ. ಸುಪಾರಿ ಕೊಡ್ತೀವಿ ಅಂತಾ ಬೆದರಿಕೆ ಹಾಕ್ತಾರೆ ಅವರಿಂದ ನಮಗೆ ಮುಕ್ತಿ ಕೊಡಿಸಿ ಅಂತಾ ನ್ಯೂಸ್​ಫಸ್ಟ್​ನ ಮುಂದೆ ಅಳಲು ತೊಡಿಕೊಂಡಿದ್ದಾರೆ ರೇಣುಕಾ.

ಈ ಕುರಿತು ಕೆಂಗೇರಿ ನಗರ ಪೊಲೀಸ್ ಠಾಣೆಗೆ ಕಂಪ್ಲೆಂಟ್ ಕೊಟ್ಟರೂ ಯಾವುದೇ ಉಪಯೋಗ ಆಗಿಲ್ಲ ಎಂದು ಆರೋಪಿಸಿರುವ ರೇಣುಕಾ, ಸದ್ಯ ಉಪ್ಪಾರಪೇಟೆ ಎಸಿಪಿ ಮೊರೆ ಹೋಗಿದ್ದಾರೆ.

The post ಮಾಟ ಮಂತ್ರ ವಿಚಾರ -ಪಕ್ಕದ ಮನೆ ಮಹಿಳೆಗೆ ನಡು ರಸ್ತೆಯಲ್ಲೇ ಥಳಿತ appeared first on News First Kannada.

Source: newsfirstlive.com

Source link