ಸಿಡಿಲಿಗೂ ಜಗ್ಗದ ದ್ವಾರಕಾಧೀಶನ ಮಂದಿರ; ನಡೆಯಿತು ನೂರಾರು ಜನರ ಪ್ರಾಣ ಉಳಿಸಿದ ಪವಾಡ

ಸಿಡಿಲಿಗೂ ಜಗ್ಗದ ದ್ವಾರಕಾಧೀಶನ ಮಂದಿರ; ನಡೆಯಿತು ನೂರಾರು ಜನರ ಪ್ರಾಣ ಉಳಿಸಿದ ಪವಾಡ

ದ್ವಾರಕಾಧೀಶ ಅಂದ್ರೆ ದ್ವಾರಕೆಯ ರಾಜ ಶ್ರೀ ಕೃಷ್ಣ ಪರಮಾತ್ಮ. ಇಂಥ ದ್ವಾರಕಾಧೀಶನ ಮಂದಿರಕ್ಕೇ ಸಿಡಿಲು ಬಡಿದಾಗ ಏನಾಗಬಹುದು? ಅದ್ರಲ್ಲೂ ಹಲವಾರು ಭಕ್ತರು ದೇವಸ್ಥಾನದ ಪ್ರಾಂಗಣದಲ್ಲಿದ್ದಾಗ.. ಭಜನೆ-ಆರತಿ ನಡೆಯುತ್ತಿರೋವಾಗ ಹೀಗೆ ಸಿಡಿಲು ಬಿದ್ದಾಗ ಏನಾಗಿರಬಹುದು..? ಅವನು ದ್ವಾರಕಾಧೀಶ.. ಭಕ್ತರು ಹೇಳುವಂತೆ ದ್ವಾರಕೆಯಲ್ಲಿ ಶ್ರೀ ಕೃಷ್ಣ ವಿರಾಜಮಾನವಾಗಿರೋವಾಗ ಕಾಲನಿಗೂ ಏನೂ ಮಾಡಲು ಸಾಧ್ಯವಿಲ್ಲ ಅಂತ.. ಈ ಮಾತು ಈಗ ಅಕ್ಷರಶಃ ನಿಜವಾಗಿದ್ದು.. ಕಣ್ಣಾರ ಕಂಡ ಪವಾಡಕ್ಕೆ ಭಕ್ತರು ಆನಂದಿಂದ ಕಣ್ಣೀರು ಸುರಿಸಿದ್ದಾರೆ.

ಅಷ್ಟಕ್ಕೂ ಏನಾಯ್ತು ಅಂತಾ ನೋಡೋದಾದ್ರೆ. ನಿನ್ನೆ ದ್ವಾರಕಾದಲ್ಲಿ ಭಯಂಕರ ಮಳೆ ಸುರಿಯುತ್ತಿತ್ತು. ಇತ್ತೀಚೆಗಿನ ದಿನಗಳಲ್ಲಿಯೇ ಅತ್ಯಂತ ಭಯಂಕರ ಅನ್ನೋವಂಥ ಮಳೆ ಸುರಿಯುತ್ತಿತ್ತು. ದ್ವಾರಕಾ ಮಾತ್ರವಲ್ಲ ಇಡೀ ಉತ್ತರಭಾರತದಲ್ಲಿ ಕಳೆದ ಕೆಲ ದಿನಗಳಿಂದ ಭಯಂಕರ ಮಳೆ ಸುರಿಯುತ್ತಿದೆ. ಅಷ್ಟೇ ಅಲ್ಲ ಭಾರೀ ಸಿಡಿಲು ಬಡಿದು ಸುಮಾರು 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ನಿನ್ನೆ ದ್ವಾರಕಾದಲ್ಲಿ ದೊಡ್ಡ ಪವಾಡವೇ ನಡೆದು ಹೋಗಿದೆ. ಹಲವಾರು ಭಕ್ತರ ಪ್ರಾಣ ಉಳಿದಿದೆ.

ನಿನ್ನೆ ನಡೆದಿದ್ದೇನು?

ಹೌದು.. ನಿನ್ನೆ ದ್ವಾರಕಾದಲ್ಲಿ ಭಯಂಕರ ಮಳೆ ಸುರಿಯುತ್ತಿತ್ತು. ಅಷ್ಟೇ ಅಲ್ಲ ಮಧ್ಯಾಹ್ನ ಸುಮಾರು 3 ಗಂಟೆಗೆ ಭಕ್ತರ ಕಣ್ಣ ಮುಂದೆಯೇ ಮಂದಿರಕ್ಕೆ ಭಯಂಕರ ಸಿಡಿಲು ಬಡಿಯಿತು. ಅದೂ ನೇರವಾಗಿ ದ್ವಾರಕಾ ಮಂದಿರದ ಗರ್ಭ ಗುಡಿಯ ಮೇಲಿರುವ ಧ್ವಜಕ್ಕೆ ನೇರವಾಗಿ ಸಿಡಿಲು ಬಡಿಯಿತು. ಭಯಂಕರ ಸಿಡಿಲು ಮಂದಿರಕ್ಕೆ ಬಡಿದರೂ ಒಬ್ಬರೇ ಒಬ್ಬ ಭಕ್ತರಿಗೆ ಒಂಚೂರು ಗಾಯವಾಗಲಿಲ್ಲ. ಅಷ್ಟೇ ಅಲ್ಲ ಮಂದಿರದ ಕಟ್ಟಡಕ್ಕೂ ಏನೂ ತೊಂದರೆ ಆಗಿಲ್ಲ.. ಪ್ರತ್ಯಕ್ಷ ದರ್ಶಿಗಳು ಹೇಳುವಂತೆ 3 ಗಂಟೆಗೆ ಸಿಡಿಲು ಬಡಿದಿತ್ತು. ಬಳಿಕ ಅರ್ಧ ಗಂಟೆಯಲ್ಲಿ ಮಳೆ ಕೂಡ ನಿಂತು ಹೋಯಿತು. ಬಳಿಕ ಮತ್ತೆ ಧ್ವಜವನ್ನು ಭಕ್ತರು ಮಂದಿರದ ಮೇಲೆ ಏರಿಸಿದ್ರು.

ವರದಿ ಕೇಳಿದ ಅಮಿತ್ ಶಾ

ಇನ್ನು ಈ ಘಟನೆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂದಿರದ ಆಡಳಿತ ಮಂಡಳಿ ಬಳಿ ವರದಿ ಪಡೆದ್ರು. ಈ ಸಿಡಿಲಿನ ಕಾರಣದಿಂದಾಗಿ ಮಂದಿರಕ್ಕೆ ಏನಾದ್ರೂ ಧಕ್ಕೆಯಾಗಿದೆಯಾ? ಅಂತ ಕೂಡ ವಿಚಾರಿಸಿದ್ರು. ಆದ್ರೆ ಮಂದಿರಕ್ಕೆ ಯಾವುದೇ ತೊಂದರೆ ಆಗದೇ ಇರೋದರ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿತು.

The post ಸಿಡಿಲಿಗೂ ಜಗ್ಗದ ದ್ವಾರಕಾಧೀಶನ ಮಂದಿರ; ನಡೆಯಿತು ನೂರಾರು ಜನರ ಪ್ರಾಣ ಉಳಿಸಿದ ಪವಾಡ appeared first on News First Kannada.

Source: newsfirstlive.com

Source link