ಕಿಚನ್​ ಕಿರಿಕ್ಕು.. ಮಂಜನ ಕಾಟಕ್ಕೆ ವೈಷ್ಣವಿ ಮುನಿಸು..

ಕಿಚನ್​ ಕಿರಿಕ್ಕು.. ಮಂಜನ ಕಾಟಕ್ಕೆ ವೈಷ್ಣವಿ ಮುನಿಸು..

ಕಳೆದ ವಾರ ದಿವ್ಯಾ ಉರುಡುಗ ಅವರು ಕ್ಯಾಪ್ಟನ್​ ಆದಾಗ ಅಡುಗೆ ಡಿಪಾರ್ಟ್​ಮೆಂಟ್ ಅನ್ನು ಹುಡುಗರಿಗೆ ವಹಿಸಿದ್ದರು. ಹುಡುಗರು ಅಡುಗೆ ಮಾಡುವಾಗ ಬಿಗ್​ ಮನೆಯ ಹೆಣ್ಮಕ್ಕಳು ಕೊಟ್ಟ ಕಾಟ ಅಷ್ಟಿಷ್ಟಲ್ಲ. ಅರವಿಂದ್​ ಕ್ಯಾಪ್ಟನ್​ ಆದ ತಕ್ಷಣ ಅಡುಗೆ ಮನೆ ಜವಾಬ್ದಾರಿಯನ್ನು ಹುಡುಗಿರಿಗೆ ಒಪ್ಪಿಸಿದ್ದಾರೆ. ಇತ್ತ ಮಂಜ ಸುಮ್ನೇ ಇರ್ತಾನಾ. ಸೇರಿಗೆ ಸವಾ ಸೇರು ಎನ್ನುತ್ತಿದ್ದಾರೆ.

blank

ಇದಕ್ಕೆ ಪುಷ್ಠಿ ನೀಡುವಂತೆ ಸುದೀಪ್​ ಅವರು ಹೇಗೆಲ್ಲಾ ರಿವೆಂಜ್​ ತುಗೋತಿರಾ ನೋಡೋಣಾ ಅಂದಿದ್ದರು. ಇದನ್ನು ಕೇಳಿದ ಮಂಜನಿಗೆ ನೂರು ಆನೆ ಬಲ ಬಂದಾಂತಾಗಿ ಏನೇ ಅಡುಗೆ ಮಾಡಿದ್ರೂ ಕೊಂಕು ತೆಗೆದು ಕಾಟ ಕೊಡ್ತಿದ್ದಾನೆ. ಇವರ ಕಾಟಕ್ಕೆ ತುಸು ಹೆಚ್ಚೇ ಬಲಿಯಾಗುತ್ತಿರುವುದು ವೈಷ್ಣವಿ.

ಹೌದು, ಎಲ್ಲಿ ಮಂಜು ಏನಾದ್ರೂ ಅಂತಾರೋ ಅನ್ನು ಭಯಕ್ಕೆ ವೈಷ್ಣವಿ ಸಾಂಗ್​ ಬರುವ ಮೊದಲೇ ಎದ್ದು ಅಡುಗೆ ಮಾಡುತ್ತಿದ್ದಾರೆ. ಅಷ್ಟೇಯಲ್ಲ ಮಂಜು ಎಷ್ಟು ತಿಂತಾರೆ. ಯಾವುದು ಹೇಗೆ ಮಾಡ್ಬೇಕು ಎಂಬ ವಿಷಯಗಳು ವೈಷ್ಣವಿಯ ನಿದ್ದೆ ಗೆಡಸಿದೆ.

blank
ಮಂಜನ ಕೀಟಲೆಗಳಿಗೆ ಬೇಸತ್ತ ಶುಭಾ, ಮಂಜ ನಿಂದು ಓವರ್​ ಆಯ್ತು ಸಾಕು ಮಾಡು. ನಂಗೆ ಊಟ ಮಾಡಲು ಆಗ್ತಿಲ್ಲ ಎಂದು ಕೋಪ ಮಾಡಿಕೊಂಡು ಡೈನಿಂಗ್​ ಟೇಬಲ್​ನಿಂದ ಎದ್ದು ಹೋಗುತ್ತಾರೆ. ಅಷ್ಟೇಯಲ್ಲ ಮಂಜು ಅವರಿಗೆ ವಾರ್ನ್​ ಮಾಡುತ್ತಾರೆ.

ಇದಕ್ಕೆ ಬಗ್ಗದ ಲ್ಯಾಗ್​ ಮಂಜು, ವೈಷ್ಣವಿ ಸಾರಿ ಕೇಳಿದ್ರೆ ಏನೂ ಅನ್ನುವುದಿಲ್ಲ. ಇಲ್ಲಾ ಅಂದ್ರೆ ನಾನು ಸುಮ್ನೇ ಇರುವುದಿಲ್ಲ ಅಂತಾರೆ. ಇದಕ್ಕೆ ವೈಷ್ಣವಿ ನಾನೂ ಸಾರಿ ಕೇಳಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಹಾಗೋ ಹೀಗೋ ಮನೆಯವರೆಲ್ಲ ವೈಷ್ಣವಿ ಮನವೊಲಿಸಿ ಸಾರಿ ಹೇಳಿಸುತ್ತಾರೆ.

ಒಟ್ನಲ್ಲಿ ಮಜವಾಗಿ ಶುರುವಾಗಿದ್ದ ಕಿಚನ್​ ಕಿರಿಕ್ಕು.. ಸಾ ರಿ ಅಲ್ಲಿ ಎಂಡ್​ ಆಯ್ತು. ಆದ್ರೂ ಮಂಜು ಇಷ್ಟಕ್ಕೆ ನಿಲ್ಲಿಸುತ್ತಾರಾ, ಇನ್ನೂ ಏನೆಲ್ಲಾ ಕೀಟಲೇ ಮಾಡ್ತಾರೆ ಎಂದು ನೋಡಬೇಕು.

The post ಕಿಚನ್​ ಕಿರಿಕ್ಕು.. ಮಂಜನ ಕಾಟಕ್ಕೆ ವೈಷ್ಣವಿ ಮುನಿಸು.. appeared first on News First Kannada.

Source: newsfirstlive.com

Source link