ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್; ಶೇ.17 ರಿಂದ 28ಕ್ಕೆ DA ಏರಿಕೆ

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್; ಶೇ.17 ರಿಂದ 28ಕ್ಕೆ DA ಏರಿಕೆ

ಕೇಂದ್ರ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರ ಬಂಪರ್​​ ನೀಡಿದ್ದು ಡಿಯರೆನ್ಸ್ ಅಲೋವೆನ್ಸ್​ ಅನ್ನ ಶೇ.17 ರಿಂದ ಶೇ.28ಕ್ಕೆ ಏರಿಕೆ ಮಾಡಿದೆ. ಜುಲೈ 1, 2021ರಿಂದಲೇ ಅನ್ವಯವಾಗುವಂತೆ ಈ ಆದೇಶವನ್ನು ನೀಡಿರೋದಾಗಿ ಕೇಂದರ ಸರ್ಕಾರ ಮಾಹಿತಿ ನೀಡಿದೆ. ಕೊರೊನಾ ಸೋಂಕಿನ ಹೊರತಾಗಿಯೂ.. ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್​ ಸಿಕ್ಕಿದ್ದು, ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ಬರೋಬ್ಬರಿ 52 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದೆ.

blank

ಪ್ರಧಾನ ಮಂತ್ರಿ ನರೇಂದರ ಮೋದಿ ಸಂಪುಟ ವಿಸ್ತರಣೆ, ಪುನಾರಚನೆ ಬಳಿಕ ನಡೆದ ಮೊದಲ ಕ್ಯಾಬಿನೇಟ್ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಡಿಎ ಏರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಇಡೇರಿಸಿರುವುದರ ಬಗ್ಗೆ ಹೇಳಿದ್ದಾರೆ.

 

 

The post ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್; ಶೇ.17 ರಿಂದ 28ಕ್ಕೆ DA ಏರಿಕೆ appeared first on News First Kannada.

Source: newsfirstlive.com

Source link