ಕೇರಳದಿಂದ ಕರ್ನಾಟಕಕ್ಕೆ ಕೊರೋನಾ ಹರಡುವ ಭೀತಿ; ಮಂಗಳೂರಿನಲ್ಲಿ ಕಟ್ಟೆಚ್ಚರ

ಕೇರಳದಿಂದ ಕರ್ನಾಟಕಕ್ಕೆ ಕೊರೋನಾ ಹರಡುವ ಭೀತಿ; ಮಂಗಳೂರಿನಲ್ಲಿ ಕಟ್ಟೆಚ್ಚರ

ಮಂಗಳೂರು: ಕೇರಳದಲ್ಲಿ ಮಾರಕ ಕೊರೋನಾ ವೈಸರ್​ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಕೊರೋನಾ ವೈರಸ್​ ತೀವ್ರವಾಗಿರುವಾಗಲೇ ಝಿಕಾ ವೈರಸ್ ಪ್ರಕರಣ ಪತ್ತೆಯಾಗಿವೆ. ಇದುವರೆಗೂ ಕೇರಳದಲ್ಲಿ ಝಿಕಾ ವೈರಸ್ ಪ್ರಕರಣ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಹೀಗಾಗಿ ಕೇರಳದಿಂದ ರಾಜ್ಯಕ್ಕೆ ಮತ್ತೆ ಕೊರೋನಾ ವೈರಸ್​ ಆಂತಕ ಶುರುವಾಗಿದೆ.

ಕೊರೋನಾ ಮೂರನೇ ಅಲೆಯ ಭೀತಿಯಿಂದಾಗಿ ಕೇರಳ ಮತ್ತು ಕರ್ನಾಟಕ ಗಡಿ ಪ್ರದೇಶದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯ ಸರಕಾರದ ದಿಂದ ಕೇರಳ ಗಡಿಯಲ್ಲಿ ಮತ್ತಷ್ಟು ಬಿಗಿಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಚೆಕ್ ಪೋಸ್ಟ್​ಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಾಳಿತ ಭಾರೀ ಸಿದ್ದತೆ ನಡೆಸಿಕೊಂಡಿದೆ.

ಜಿಲ್ಲೆಯ ಪ್ರಮುಖ 3 ಚೆಕ್ ಪೋಸ್ಟ್​ಗಳಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆಯಾಗಿದೆ. ದಿನದಲ್ಲಿ ಮೂರು ಶಿಫ್ಟ್ ಆಧಾರದಲ್ಲಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಕೇರಳ ಸಂಪರ್ಕಿಸುವ ಜಿಲ್ಲೆಯ ಒಳ ರಸ್ತೆಗಳನ್ನು ಬಂದ್ ಮಾಡಿ ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ ಮಂಗಳೂರು ಪೊಲೀಸರು.

ಪೊಲೀಸರ ಕಟ್ಟೆಚ್ಚರ

ಮಂಗಳೂರು ಪೊಲೀಸ್ ಕಮಿಷನರೇಟ್​​​​ ವ್ಯಾಪ್ತಿಯಲ್ಲಿ 6 ಹಾಗು ಜಿಲ್ಲಾ ಪೊಲೀಸರ ವ್ಯಾಪ್ತಿಯಲ್ಲಿ 10 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪ್ರತೀ ಚೆಕ್ ಪೋಸ್ಟ್​ನಲ್ಲಿ ಕೊರೋನಾ RTPCR ಟೆಸ್ಟಿಂಗ್ ಯುನಿಟ್ ಅನ್ನು ಜಿಲ್ಲಾಡಾಳಿತ ಆಯೋಜಿಸಿದೆ.

blank

RTPCR ನೆಗೆಟಿವ್ ರಿಪೋರ್ಟ್ ಕಡ್ಡಾಯ

ಇನ್ನು, ಪ್ರತಿ ಚೆಕ್ ಪೋಸ್ಟ್​ನಲ್ಲಿ ಸಬ್ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ 5 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಕೇರಳದಿಂದ ಬರುವವರು 72 ಗಂಟೆಗಳ ಒಳಗಿನ RTPCR ನೆಗೆಟಿವ್ ರಿಪೋರ್ಟ್ ಅಥವಾ ಕನಿಷ್ಟ 1 ಡೋಸ್ ವ್ಯಾಕ್ಸಿನ್ ಪಡೆದಿರುವ ರಿಪೊರ್ಟ್ ತರಬೇಕು ಎಂದು ಆದೇಶಿಲಾಗಿದೆ.

The post ಕೇರಳದಿಂದ ಕರ್ನಾಟಕಕ್ಕೆ ಕೊರೋನಾ ಹರಡುವ ಭೀತಿ; ಮಂಗಳೂರಿನಲ್ಲಿ ಕಟ್ಟೆಚ್ಚರ appeared first on News First Kannada.

Source: newsfirstlive.com

Source link