ಇಂಗ್ಲೆಂಡ್​ನ ಎಡ್ಜ್​​ಬಸ್ಟನ್​​ ಮೈದಾನದಲ್ಲಿ ‘ಅಣ್ಣಾವ್ರ ಅಭಿಮಾನಿ’ ಪ್ರತ್ಯಕ್ಷ..!

ಇಂಗ್ಲೆಂಡ್​ನ ಎಡ್ಜ್​​ಬಸ್ಟನ್​​ ಮೈದಾನದಲ್ಲಿ ‘ಅಣ್ಣಾವ್ರ ಅಭಿಮಾನಿ’ ಪ್ರತ್ಯಕ್ಷ..!

ಡಾ.ರಾಜಕುಮಾರ್, ಕನ್ನಡ ಚಿತ್ರರಂಗದ ಅಮೂಲ್ಯ ರತ್ನ. ಕನ್ನಡ ಚಿತ್ರರಂಗ ಹಾಗೂ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿರುವ ರಾಜ್​ಕುಮಾರ್​ ಅವರಿಗೆ​ ಕರ್ನಾಟಕದಲ್ಲಿ ಮಾತ್ರವಲ್ಲದೇ, ದೇಶದ್ಯಾಂತ ಅಭಿಮಾನಿಗಳ ಬಳಗವನ್ನ ಹೊಂದಿದ್ದಾರೆ. ಭಾರತದಲ್ಲಿ ಮಾತ್ರವೇ ಅಲ್ಲ..! ವಿದೇಶದಲ್ಲೂ ಅಸಂಖ್ಯಾತ ಅಣ್ಣಾವ್ರ ಅಭಿಮಾನಿಗಳಿದ್ದಾರೆ. ನಿನ್ನೆ ಪಾಕಿಸ್ಥಾನ ಹಾಗೂ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ, ಅಣ್ಣಾವ್ರ ಅಭಿಮಾನಿಯೋರ್ವ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಎಡ್ಜ್​​ಬಸ್ಟನ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ, ‘ಅಣ್ಣಾವ್ರು’ ಎಂಬ ಹೆಸರಿನ ಬೆಂಗಳೂರು ಫುಟ್ಬಾಲ್ ಕ್ಲಬ್​​ ಜರ್ಸಿ ಧರಿಸಿ, ಎಲ್ಲರ ಗಮನ ಸೆಳೆದರು. ಆ ಮೂಲಕ ಡಾ.ರಾಜಕುಮಾರ್ ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ. ಸದ್ಯ ಆತ ಯಾರು..? ಆತ ಯಾವ ದೇಶದವರು ಎಂಬ ವಿವರ ತಿಳಿಯದಿದ್ದರೂ, ಅಣ್ಣಾವ್ರ ಹೆಸರಿರುವ ಜರ್ಸಿ ಮಾತ್ರ ಸಖತ್ ವೈರಲ್ ಆಗ್ತಿದೆ.

 

The post ಇಂಗ್ಲೆಂಡ್​ನ ಎಡ್ಜ್​​ಬಸ್ಟನ್​​ ಮೈದಾನದಲ್ಲಿ ‘ಅಣ್ಣಾವ್ರ ಅಭಿಮಾನಿ’ ಪ್ರತ್ಯಕ್ಷ..! appeared first on News First Kannada.

Source: newsfirstlive.com

Source link