ಸ್ವತಂತ್ರ ಬಂದು 74 ವರ್ಷಗಳ ಬಳಿಕ ಕೊನೆಗೂ ವಿದ್ಯುತ್‌ ಸಂಪರ್ಕ ಪಡೆದ ಕಾಶ್ಮೀರದ ಹಳ್ಳಿ

ಸ್ವತಂತ್ರ ಬಂದು 74 ವರ್ಷಗಳ ಬಳಿಕ ಕೊನೆಗೂ ವಿದ್ಯುತ್‌ ಸಂಪರ್ಕ ಪಡೆದ ಕಾಶ್ಮೀರದ ಹಳ್ಳಿ

ಬರೋಬ್ಬರಿ 74 ವರ್ಷಗಳಿಂದ ವಿದ್ಯುತ್‌ ಸಂಪರ್ಕದಿಂದ ವಂಚಿತವಾಗಿದ್ದ ಜಮ್ಮು ಕಾಶ್ಮೀರದ ಹಳ್ಳಿಯೀಗ ಕರೆಂಟ್​ ನೋಡುತ್ತಿದೆ. ಜಿಲ್ಲೆಯ ರಂಬಾನ್‌ ಸಮೀಪದ ಕಡೋಲ ಎಂಬ ಗ್ರಾಮಕ್ಕೆ ಜಮ್ಮು ಕಾಶ್ಮೀರದ ಆಡಳಿತ ವಿದ್ಯುತ್​ ಸಂಪರ್ಕ ಕಲ್ಪಿಸಿದೆ. ಇದರಿಂದ ಸಂತಸಗೊಂಡ ಗ್ರಾಮಸ್ಥರು ಕರೆಂಟ್​​ ವ್ಯವಸ್ಥೆ ಮಾಡಿದ ಸರ್ಕಾರಕ್ಕೆ ಧನ್ಯವಾದಗಳು ತಿಳಿಸಿದ್ದಾರೆ.

2018 ರಿಂದ ಅಂದರೆ ಮೂರು ವರ್ಷಗಳಿಂದಲೂ ಕಾಶ್ಮೀರ ವಿದ್ಯುತ್‌ ಸರಬರಾಜು ಕಾರ್ಪೋರೇಶನ್‌ ಲಿಮಿಟೆಡ್‌ ಈ ಯೋಜನೆಗಾಗಿ ಬಹಳ ಶ್ರಮಿಸಿದೆ. ಕಗ್ಗತ್ತಲ್ಲಲಿಯೇ ಜೀವಿಸುತ್ತಿದ್ದ ಈ ಗ್ರಾಮಸ್ಥರಿಗೆ ವಿದ್ಯುತ್​​​​ ಕಲ್ಪಿಸುವ ಉದ್ದೇಶ ನನಗಿತ್ತು. ಈ ಗ್ರಾಮಕ್ಕೆ ನಾವು ಬೆಳಕು ಕಾಣುವಂತೆ ಮಾಡಲು ಇಷ್ಟು ವರ್ಷ ಬೇಕಾಯ್ತು ಎಂದಿದ್ದಾರೆ ಜೆಪಿಡಿಸಿಎಲ್​​ ಎಕ್ಸಿಕ್ಯೂಟಿವ್​ ಇಂಜಿನಿಯರ್​​​​ ನಿಸ್ಸಾರ್​ ಹುಸ್ಸೇನ್.

ಇದುವರೆಗೂ ನಾವು ಬೆಳಕಿಗಾಗಿ ಲೈಟ್​ ಲ್ಯಾಂಪ್ಸ್​ ಬಳಸುತ್ತಿದ್ದೇವೆ. ಯಾವುದಾದರೂ ಕಾರ್ಯಕ್ರಮ ಇದ್ದಾಗ ವಿದ್ಯುತ್​​ಗಾಗಿ ಸೋಲಾರ್‌ ಪವರ್‌ ಮತ್ತು ಡೀಸೇಲ್‌ ಜನರೇಟರ್‌ ವ್ಯವಸ್ಥೆ ಮಾಡಿಕೊಳ್ಳುತ್ತಿದೆವು. ಇದೀಗ ರಾಜ್ಯ ವಿದ್ಯುತ್‌ ಗ್ರಿಡ್‌ನಿಂದ ನೇರ ಸಂಪರ್ಕ ಕಲ್ಪಿಸಲಾಗಿದೆ. ಇನ್ನು ಮುಂದೆ ನಾವು ಟಿವಿ ನೋಡಬಹುದಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಖುಷಿ ವ್ಯಕ್ತಪಡಿಸಿದರು.

The post ಸ್ವತಂತ್ರ ಬಂದು 74 ವರ್ಷಗಳ ಬಳಿಕ ಕೊನೆಗೂ ವಿದ್ಯುತ್‌ ಸಂಪರ್ಕ ಪಡೆದ ಕಾಶ್ಮೀರದ ಹಳ್ಳಿ appeared first on News First Kannada.

Source: newsfirstlive.com

Source link