ಬಿಡುಗಡೆಯಾದ ಮೂರು ದಿನಗಳ ಬಳಿಕವೂ ಟ್ರೆಂಡಿಂಗ್​​ನಲ್ಲಿ ‘ರಿಚರ್ಡ್ ಆಂಟನಿ’ ಟಾಪ್

ಬಿಡುಗಡೆಯಾದ ಮೂರು ದಿನಗಳ ಬಳಿಕವೂ ಟ್ರೆಂಡಿಂಗ್​​ನಲ್ಲಿ ‘ರಿಚರ್ಡ್ ಆಂಟನಿ’ ಟಾಪ್

‘‘ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು’’.. ಇದು ‘ರಿಚರ್ಡ್ ಆಂಟನಿ’ ಟೈಟಲ್​​ ಟೀಸರ್​ ಬಿಡುಗಡೆಗೂ ಮುನ್ನ ಸ್ಯಾಂಡಲ್​ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೊಟ್ಟ ಸ್ಟ್ರಾಂಗ್ ಸ್ಟೇಟ್ ಮೆಂಟ್. ರಕ್ಷಿತ್​ ಅವರ ಹೇಳಿಕೆಯಂತೆಯೇ ‘ರಿಚರ್ಡ್ ಆಂಟನಿ’ ಟೀಸರ್ ಯೂಟ್ಯೂಬ್​​ನಲ್ಲಿ ದಾಖಲೆಗಳನ್ನು ನಿರ್ಮಿಸುತ್ತಿದೆ.

blank

‘ರಿಚರ್ಡ್ ಆಂಟನಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿ ಮೂರು ದಿನ ಕಳೆದರೂ ಈಗಲೂ ಯೂಟ್ಯೂಬ್​​ ಟ್ರೆಂಡಿಂಗ್​​ನಲ್ಲಿ ಟಾಪ್​ ಸ್ಥಾನವನ್ನು ಪಡೆದುಕೊಂಡಿದ್ದು, ಕನ್ನಡ ಸಿನಿ ಪ್ರೇಕ್ಷಕರಿಂದ ಭಾರೀ ಮೆಚ್ಚಿಗೆಯನ್ನು ಪಡೆದುಕೊಂಡಿದೆ. ಈಗಾಗಲೇ 11 ಮಿಲಿಯನ್ ವ್ಯೂ ಪಡೆದುಕೊಂಡಿರುವ ಟೀಸರ್​.. ನಂ.01 ಟ್ರೆಂಡಿಂಗ್​ನಲ್ಲೇ ಮುನ್ನುಗುತ್ತಿದೆ. ಸಿನಿಮಾಗೆ ಲಭಿಸಿದ ಅದ್ಧೂರಿ ಪ್ರತಿಕ್ರಿಯೆ ಸಂತಸ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ಈ ಬಗ್ಗೆ ಅಭಿಮಾನಿಗಳಿಗೆ ವಿಶೇಷ ಪತ್ರವನ್ನು ಬರೆದು, ಉಳಿದವರು ಕಂಡಂತೆ ಮುಂದುವರೆದ ಬೃಹತ್ ಭಾಗ ಸಂಪೂರ್ಣ ವಿಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ.

ಇತ್ತ ಮತ್ತೊಮ್ಮೆ ತಾನು ಕಂಡಂತೆ, ಅವರು ಕಂಡಂತೆ, ಇವ್ರು ಕಂಡಂತೆಯ ಉಳಿದವರು ಕಂಡಂತೆ ಮುಂದುವರೆದ ಬೃಹತ್ ಭಾಗಕ್ಕೆ ರಿಷಬ್​ ಶೆಟ್ಟಿ ಮುಂದಾಗಿದ್ದು, ಇದರೊಂದಿಗೆ ನಿರ್ದೇಶನಕ್ಕೆ ಮರಳಿದ್ದಾರೆ. ಆ ಮೂಲಕ ತಾವೇ ಡೈರೆಕ್ಷನ್ ಮಾಡಿ ನಟಿಸಿದ್ದ ಉಳಿದವರು ಕಂಡಂತೆ ಸಿನಿಮಾವನ್ನ ಮತ್ತೊಂದು ದೃಶ್ಯಕೋನದಲ್ಲಿ ನೋಡಲು ಸಜ್ಜಾಗಿದ್ದಾರೆ. ಸಿನಿಮಾವನ್ನು 14 ತಿಂಗಳಿನಲ್ಲಿಯೇ ಪೂರ್ಣಗೊಳಿಸುವ ವಿಶ್ವಾಸವನ್ನು ರಕ್ಷಿತ್ ಶೆಟ್ಟಿ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನ ಹೊತ್ತಿದ್ರೆ, ಕರಮ್ ಚಾವ್ಲಾ ಕ್ಯಾಮೆರಾ ಕಲ್ಪನೆ, ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ, ವಿಜಯ ಕಿರಗಂದೂರು ಅವರ ನಿರ್ಮಾಣದ ಹೊಣೆ ಈ ಚಿತ್ರಕ್ಕಿದೆ.

blank

ಇನ್ನು ರಕ್ಷಿತ್ ಶೆಟ್ಟಿ ಅವರು 777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ.. ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದು, ಆ ಬಳಿಕ ಪುಣ್ಯ ಕೋಟಿಯ ಕಥೆಯನ್ನ ಹೇಳ್ತಿನಿ ಎಂದಿದ್ದ ಅವರು ಯೂ ಟರ್ನ್ ಹೊಡೆದು ಉಳಿದವರು ಕಂಡಂತೆ ಸಿನಿಮಾ ಹೀರೋ ಕ್ಯಾರೆಕ್ಟರ್ ‘ರಿಚರ್ಡ್ ಆಂಟನಿ’ ಯಾಗಲು ಮುಂದಾಗಿರುವುದು ಅಭಿಮಾನಿಗಳ ಕುತೂಹಲವನ್ನು ಹೆಚ್ಚು ಮಾಡಿದೆ.

The post ಬಿಡುಗಡೆಯಾದ ಮೂರು ದಿನಗಳ ಬಳಿಕವೂ ಟ್ರೆಂಡಿಂಗ್​​ನಲ್ಲಿ ‘ರಿಚರ್ಡ್ ಆಂಟನಿ’ ಟಾಪ್ appeared first on News First Kannada.

Source: newsfirstlive.com

Source link