ಬೇಬಿ ಬೆಟ್ಟಕ್ಕೆ ತೆರಳುವಾಗ ಸುಮಲತಾ ಕಾರು​ ತಡೆದ ಗ್ರಾಮಸ್ಥರು.. ನಂತರ ಆಗಿದ್ದೇನು?

ಬೇಬಿ ಬೆಟ್ಟಕ್ಕೆ ತೆರಳುವಾಗ ಸುಮಲತಾ ಕಾರು​ ತಡೆದ ಗ್ರಾಮಸ್ಥರು.. ನಂತರ ಆಗಿದ್ದೇನು?

ಮಂಡ್ಯ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ನಡುವೆ ಅಕ್ರಮ ಗಣಿಗಾರಿಕೆ ವಿಚಾರವಾಗಿ ನಡೆದ ಶೀತರ ಸಮರವೀಗ ಮುಗಿಲು ಮುಟ್ಟಿದೆ. ಗಣಿಗಾರಿಕೆ ಸಚಿವ ಮುರುಗೇಶ್​ ನಿರಾಣಿಯವರನ್ನು ಭೇಟಿ ಮಾಡಿದ್ದ ಸುಮಲತಾ ಈಗ ಮಂಡ್ಯದ ಅಧಿಕಾರಿಗಳ ಬೆನ್ನ ಹಿಂದೆ ಬಿದ್ದಿದ್ದಾರೆ. ಅಕ್ರಮ ಗಣಿಗಾರಿಕೆ ಪರಿಶೀಲನೆಗಾಗಿ ಅಧಿಕರಿಗಳೊಂದಿಗೆ ಸುಮಲತಾ ಬೇಬಿ ಬೆಟ್ಟಕ್ಕೆ ತೆರಳಿದ್ದಾರೆ.

ಇನ್ನು, ಬೇಬಿ ಬೆಟ್ಟಕ್ಕೆ ತೆರಳುವಾಗ ಮಾರ್ಗ ಮಧ್ಯೆ ಸುಮಲತಾ ಅಂಬರೀಶ್​​ ಕಾರು ತಡೆದಿದ್ದಾರೆ ಎನ್ನಲಾಗಿದೆ. ಕಾವೇರಿಪುರ ಗ್ರಾಮದ ಬಳಿ ಗಣಿಗಾರಿಕೆ ಬೇಕೇ ಬೇಕು, ಅವಕಾಶ ಮಾಡಿಕೊಡಿ ಎಂದು ಸುಮಲತಾರನ್ನು ಒತ್ತಾಯಿಸಿದ್ದಾರೆ.

ನಾವು ಗಣಿಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿದ್ದೇವೆ. ​​ಹಲವು ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದೇವೆ. ಗಣಿಗಾರಿಕೆ ನಡೆಸಲು ಅವಕಾಶ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸದ್ಯ ಸುಮಲತಾ ಅಂಬರೀಶ್​ ಬೇಬಿ ಬೆಟ್ಟಕ್ಕೆ ನೋಡಿ ಅಕ್ರಮ ಗಣಿಗಾರಿಕೆ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಹಾಗೆಯೇ ಇಲ್ಲಿ ನಡೆಯುತ್ತಿರುವ ಗಣಿಗಾರಿಕೆ ಮಾಲೀಕ ಯಾರು ಎಂದು ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದಾರೆ.

The post ಬೇಬಿ ಬೆಟ್ಟಕ್ಕೆ ತೆರಳುವಾಗ ಸುಮಲತಾ ಕಾರು​ ತಡೆದ ಗ್ರಾಮಸ್ಥರು.. ನಂತರ ಆಗಿದ್ದೇನು? appeared first on News First Kannada.

Source: newsfirstlive.com

Source link