‘ಗಣಿಗಾರಿಕೆ ಅನುಮತಿ ನೀಡಿ ಇಲ್ಲಂದ್ರೆ ಪರಿಹಾರ ಕೊಡಿಸಿ’ ಸುಮಲತಾಗೆ ಮನವಿ

‘ಗಣಿಗಾರಿಕೆ ಅನುಮತಿ ನೀಡಿ ಇಲ್ಲಂದ್ರೆ ಪರಿಹಾರ ಕೊಡಿಸಿ’ ಸುಮಲತಾಗೆ ಮನವಿ

ಮಂಡ್ಯ: ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ್ದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಗಣಿ ಮಾಲೀಕ ರವಿ ಭೋಜೇಗೌಡ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಗಣಿಗಾರಿಕೆ ನಿಲ್ಲಿಸಬೇಡಿ. ಕೆಆರ್​ಎಸ್​ ಜಲಾಶಯಕ್ಕೆ ಯಾವುದೇ ತೊಂದರೆಯಾಗೋದಿಲ್ಲ, ದಯವಿಟ್ಟು ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.

ನಾವು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಸಕ್ರಮವಾಗಿಯೇ ನಡೆಸುತ್ತಿದ್ದೇವೆ. ಕೆಆರ್‌ಎಸ್​ಗೆ ಯಾವುದೇ ತೊಂದರೆಯಾಗುತ್ತಿಲ್ಲ. ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಟ್ರಯಲ್ ಬ್ಲಾಸ್ಟ್ ಪರೀಕ್ಷೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬೇಬಿ ಬೆಟ್ಟಕ್ಕೆ ತೆರಳುವಾಗ ಸುಮಲತಾ ಕಾರು​ ತಡೆದ ಗ್ರಾಮಸ್ಥರು.. ನಂತರ ಆಗಿದ್ದೇನು?

ಒಂದು ವೇಳೆ ಗಣಿಗಾರಿಕೆಗೆ ಅವಕಾಶ ಮಾಡಲು ಆಗಲಿಲ್ಲವೆಂದರೇ ಸರ್ಕಾರದಿಂದ ಪರಿಹಾರ ಕೊಡಿಸಿ. ಕೆಆರ್​ಎಸ್​ಗೆ ಅಪಾಯವಾಗೋದಾದ್ರೆ ಇಂದೇ ಮನೆಗೆ ಹೋಗುತ್ತೇವೆ ಎಂದು ಸುಮಲತಾ ಮುಂದೆ ತಮ್ಮ ಅಳಲು ತೋಡಿಕೊಂಡರು.

The post ‘ಗಣಿಗಾರಿಕೆ ಅನುಮತಿ ನೀಡಿ ಇಲ್ಲಂದ್ರೆ ಪರಿಹಾರ ಕೊಡಿಸಿ’ ಸುಮಲತಾಗೆ ಮನವಿ appeared first on News First Kannada.

Source: newsfirstlive.com

Source link