ಮಡಿಕೇರಿಯ ಆಕಾಶವಾಣಿ ಟವರ್​ ಕೆಳಭಾಗದಲ್ಲಿ ಭೂ ಕುಸಿತ- ಆತಂಕದಲ್ಲಿ ಸ್ಥಳೀಯರು

ಮಡಿಕೇರಿಯ ಆಕಾಶವಾಣಿ ಟವರ್​ ಕೆಳಭಾಗದಲ್ಲಿ ಭೂ ಕುಸಿತ- ಆತಂಕದಲ್ಲಿ ಸ್ಥಳೀಯರು

ಕೊಡಗು: ಜಿಲ್ಲೆಯಲ್ಲಿ ಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ, ಆಕಾಶವಾಣಿಯ ಟವರ್ ಕೆಳಭಾಗದಲ್ಲಿ ಮಣ್ಣು ಕುಸಿತವಾಗಿದ್ದು, ಸ್ಥಳೀಯರು ಟವರ್ ಕುಸಿದು ಬೀಳುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

blank

ಮಡಿಕೇರಿಯ ಮಯೂರ ವ್ಯಾಲಿ ವ್ಯೂ ರಸ್ತೆಯಲ್ಲಿರುವ ಆಕಾಶವಾಣಿ ಕಚೇರಿಯ ಟವರ್​ ಕೆಳಭಾಗದಲ್ಲಿ ಮಣ್ಣು ಕುಸಿತವಾಗಿದೆ. ಪರಿಣಾಮ ಟವರ್ ಕೆಳಭಾಗದಲ್ಲಿರೋ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಜನರು ಭಯದಲ್ಲೇ ವಾಸಿಸುತ್ತಿದ್ದಾರೆ. ಕಳೆದ ವರ್ಷವೂ ಮಳೆಯಿಂದ ಟವರ್ ತಡೆಗೋಡೆ ಕುಸಿದಿತ್ತು. ಇದೀಗ ಮತ್ತೆ ತಡೆಗೋಡೆ ಸಮೀಪದಲ್ಲೇ, ಮಣ್ಣು ಕುಸಿತವಾಗಿದೆ. ಸದ್ಯ, ರಸ್ತೆ ಸಂಚಾರ ಬಂದ್ ಮಾಡಲು ಜಿಲ್ಲಾಡಳಿತಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಅಲ್ಲದೇ, ಸ್ಥಳಕ್ಕೆ ನಗರಸಭೆ ಆಯುಕ್ತ ರಾಮ್ ದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

blank

The post ಮಡಿಕೇರಿಯ ಆಕಾಶವಾಣಿ ಟವರ್​ ಕೆಳಭಾಗದಲ್ಲಿ ಭೂ ಕುಸಿತ- ಆತಂಕದಲ್ಲಿ ಸ್ಥಳೀಯರು appeared first on News First Kannada.

Source: newsfirstlive.com

Source link