ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ- ಅರುಣಾ ಕುಮಾರಿ

ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ- ಅರುಣಾ ಕುಮಾರಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರಿಗೆ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣಾ ಕುಮಾರಿ ಕೊನೆಗೂ ಮಾಧ್ಯಮ ಮುಂದೇ ಬಂದು ಹೇಳಿಕೆ ನೀಡಿದ್ದು, ನಾನು ಯಾರಿಗೂ ವಂಚನೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

blank

ಮಾಧ್ಯಮಗಳೊಂದಿಗೆ ಮಾತನಾಡಿದ ಅರುಣಾ ಕುಮಾರಿ, ನಾಲ್ಕು ದಿನದಿಂದ ನೀವೇ ನೋಡ್ತಿದ್ರಿ. ನಾನು ಯಾರಿಗೂ ಮೋಸ ಮಾಡಿಲ್ಲ. ಎಲ್ಲವನ್ನೂ ಕಾನೂನು ನೋಡಿಕೊಳ್ಳುತ್ತೆ. ಎಲ್ಲವನ್ನೂ ಕಾನೂನಿಗೆ ಕೊಡ್ತೀನಿ. ಮರ್ಯಾದೆ ಪ್ರಶ್ನೆ ಹಾಗಾಗಿ ಮನೆಬಿಟ್ಟಿದ್ದೆ ಅಷ್ಟೇ. ಪ್ರೆಸ್ ಮೀಟ್ ಮಾಡುವ ಶಕ್ತಿ ನನಗೆ ಇಲ್ಲ. ಹಾಗಾಗಿ ಮಾಡಿಲ್ಲ ಎಂದರು.

ನನ್ನ ತಾಯಿ ತಂದೆ ಮಗನಿಗೆ ತೊಂದರೆ ಆಗುತ್ತಿದೆ. ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ. ನಾನು ಯಾವುದೇ ಅಮೌಂಟ್ ತೆಗೆದುಕೊಂಡಿಲ್ಲ. ಪ್ರಕರಣದ ಬಗ್ಗೆ ಸ್ಟೇಷನ್ ನಲ್ಲಿ ಎಲ್ಲಾ ಮಾಹಿತಿ ಕೊಟ್ಟಿದ್ದೇನೆ. ಎಲ್ಲದಕ್ಕೂ ಸ್ಟೇಷನ್ ನಲ್ಲಿ ಸ್ಟೇಂಟ್ ಮೆಂಟ್ ಕೊಟ್ಟಿದ್ದೀನಿ. ನಾನು ವಂಚನೆ ಮಾಡಿದ್ದೀನಿ ಅನ್ನುವುದಕ್ಕೆ ಸಾಕ್ಷಿ ಏನಿದೆ..? ಏನಿದೆ ದಾಖಲೆ..? ಫೋರ್ಜರಿ ಆಗಿದಿಯಾ..? ಒಂದು ಫೇಕ್ ಡ್ಯಾಕ್ಯುಮೆಂಟ್ ಕ್ರಿಯೇಟ್ ಆಗಿದಿಯಾ..? ವಂಚನೆ ಮಾಡಿದ್ದೀನಿ ಅನ್ನುವುದಕ್ಕೆ ನನಗೆ ಸಾಕ್ಷಿ ತೋರಿಸಿ. ನನ್ನ ಮೇಲಿನ ಎಲ್ಲವೂ ಸುಳ್ಳು. ಯಾವುದಕ್ಕೂ ಫ್ರೂಫ್ ಅನ್ನುವುದೇ ಇಲ್ಲ. ನಾನು ಅಪರಾಧಿ ಅಂಥ ಕಾನೂನಲ್ಲಿ ಸಾಭೀತಾದ್ರೆ ಏನ್ ಬೇಕಾದ್ರೂ ಶಿಕ್ಷೆ ಕೊಡ್ಲಿ. ನನ್ನ ಮರ್ಯಾದೆ ಪ್ರಶ್ನೆ, ತಂದೆ ತಾಯಿ ಇಬ್ಬರೂ ಕೂಡ ಪೇಷೆಂಟ್ ಗಳೇ. ನಾನು ನನ್ನ ಮಗನಿಗೆ ನಾನು ಸಿಂಗಲ್ ಪೇರೆಂಟ್. ನಾನು ಹೆಣ್ಣಾಗಿ ಇಷ್ಟೇ ಕೇಳಿಕೊಳ್ಳುವುದು, ನನ್ನ ತಂದೆ ತಾಯಿ ಮರ್ಯಾದೆ ಹೋಗ್ತಿದೆ. ಅವರಿಗೋಸ್ಕರ ಈ ಘಟನೆಯನ್ನ ಇಲ್ಲೇ ಬಿಟ್ಟು ಬಿಡಿ.. ಟು ಡೇಸ್ ವೈಟ್ ಮಾಡಿ ನಿಮಗೆ ರಿಸ್ಟಲ್ ಗೊತ್ತಾಗತ್ತೆ  ಅಂತ ತೆರಳಿದರು.

The post ದರ್ಶನ್ ಸರ್ ಬಗ್ಗೆ ಮಾತಾಡೋ ಯೋಗ್ಯತೆ ನನಗಿಲ್ಲ- ಅರುಣಾ ಕುಮಾರಿ appeared first on News First Kannada.

Source: newsfirstlive.com

Source link