ಸಚಿವ ಬಿ.ಸಿ.ಪಾಟೀಲ್ ಮೇಲೆ ಮುನಿಸು – ಕೆಡಿಪಿ ಸಭೆಗೆ ಬಾರದ ಆಚಾರ್, ದಡೇಸೂಗೂರ!

ಕೊಪ್ಪಳ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎದ್ದಿರುವಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರ ಬದಲಾವಣೆಯ ಧ್ವನಿ ಎದ್ದಿದೆ. ಸಚಿವರ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ಶಾಸಕ ಹಾಲಪ್ಪ ಆಚಾರ್, ಬಸವರಾಜ ದಡೇಸೂಗೂರ ಸಚಿವ ಬಿ.ಸಿ. ಪಾಟೀಲ್ ಕರೆದ ಕೆಡಿಪಿ ತ್ರೈಮಾಸಿಕ ಸಭೆಗೆ ಗೈರಾಗುವ ಮೂಲಕ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ.

ಕೊಪ್ಪಳ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಹೊಗೆಯಾಡುತ್ತಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರಾದಾಗಿನಿಂದ ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಇವೆ. ಇದೀಗ ಈ ಭಿನ್ನಾಭಿಪ್ರಾಯ ತಾರಕಕ್ಕೆ ಏರಿದ್ದು, ಕನಕಗಿರಿ ಶಾಸಕ ಬಸವರಾಜ ದಡೇಸುಗೂರ ಮತ್ತು ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಕೆಡಿಪಿ ಸಭೆಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಸಹ ಗೈರಾಗಿರುವುದು ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಸೋನು ಸೂದ್ ಭೇಟಿಗೆ ಹೊರಟ ಅಲೆಮಾರಿ ಜನಾಂಗದ ಯುವಕರ ತಂಡ

ಇಂದು ಕೊಪ್ಪಳದಲ್ಲಿ ಸ್ವತಃ ಬಿ.ಸಿ. ಪಾಟೀಲ್ ಅಧ್ಯಕ್ಷತೆಯಲ್ಲಿ ಕೊರೊನಾ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಕೆಡಿಪಿ ತ್ರೈಮಾಸಿಕ ಸಭೆ ನಡೆಯಿತು. ಜೊತೆಗೆ ಸಚಿವರು ಜೆಡಿಎಸ್ ಮುಖಂಡರನ್ನು ಪಕ್ಷಕ್ಕೆ ತರುವ ನಿಟ್ಟಿನಲ್ಲಿ ಅವರ ಮನೆಗೆ ಭೇಟಿ ನೀಡಿದ್ದರು. ಸಾಮಾನ್ಯವಾಗಿ ಸಚಿವರನ್ನು ಸ್ವಾಗತಿಸಲು ಬಿಜೆಪಿ ಶಾಸಕರೆಲ್ಲರು ಬರುತ್ತಿದ್ದರು. ಆದರೆ ಬಿಜೆಪಿಯ ಮೂವರು ಶಾಸಕರ ಪೈಕಿ ಇಬ್ಬರು ಶಾಸಕರು ಕೊನೆವರೆಗೂ ಸಭೆಗೆ ಬರಲಿಲ್ಲ. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಭೆ ಆರಂಭದ ನಂತರ ಆಗಮಿಸಿ ಭಾಗವಹಿಸಿದ್ದರು.

blank

ಬಿಜೆಪಿ ಶಾಸಕರು ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನಗೊಳ್ಳಲು ಕಾರಣ, ಸಚಿವರು ಕಾಂಗ್ರೆಸ್ ಶಾಸಕರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ನಮ್ಮ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ ಎಂಬ ಬಲವಾದ ಆರೋಪ ಕೇಳಿ ಬಂದಿವೆ.

ಇದೇ ಕಾರಣಕ್ಕೆ ತಮ್ಮ ಜಿಲ್ಲೆಗೆ ಬೇರೊಬ್ಬರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಸಿಎಂ ಬಳಿ ಬಿಜೆಪಿ ಶಾಸಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪ ಅವರದ್ದು ರಾಕ್ಷಸ ಸರ್ಕಾರ, ಪಕೋಡ ಮಾರೋಣ ಅಂದ್ರೆ ಎಣ್ಣೆ ರೇಟ್ ಜಾಸ್ತಿ: ಸಿದ್ದರಾಮಯ್ಯ

The post ಸಚಿವ ಬಿ.ಸಿ.ಪಾಟೀಲ್ ಮೇಲೆ ಮುನಿಸು – ಕೆಡಿಪಿ ಸಭೆಗೆ ಬಾರದ ಆಚಾರ್, ದಡೇಸೂಗೂರ! appeared first on Public TV.

Source: publictv.in

Source link