‘ಕಬ್ಬನ್ ಪಾರ್ಕ್​​ನಲ್ಲಿ ಲವರ್ಸ್​​ ಕೈಕೈ ಹಿಡ್ಕೊಂಡು ಸುತ್ತೋದು ನೋಡಿ ಹೊಟ್ಟೆಕಿಚ್ಚು ಪಟ್ಟಿದ್ದೆ’

‘ಕಬ್ಬನ್ ಪಾರ್ಕ್​​ನಲ್ಲಿ ಲವರ್ಸ್​​ ಕೈಕೈ ಹಿಡ್ಕೊಂಡು ಸುತ್ತೋದು ನೋಡಿ ಹೊಟ್ಟೆಕಿಚ್ಚು ಪಟ್ಟಿದ್ದೆ’

ರಾಮನಗರ: ತಮಿಳು ವಾಹಿನಿಯಲ್ಲಿ ಪ್ರಸಾರ ಆಗಲಿರುವ ಚೇಫ್ ಮಾಸ್ಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ರಾಮನಗರಕ್ಕೆ ಆಗಮಿಸಿದ್ದ ನಟ ವಿಜಯ್ ಸೇತುಪಥಿ ಬೆಂಗಳೂರಿನೊಂದಿಗೆ ತಮಗೆ ಇರುವ ನೆನಪಿನ ಕ್ಷಣಗಳನ್ನು ಹಂಚಿಕೊಂಡಿದ್ದು, ಈ ಹಿಂದೆ ಕಬ್ಬನ್​ ಪಾರ್ಕ್​​ಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಲಸ್​ ಆಗಿದ್ದ ಕುರಿತು ಹೇಳಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ಸೇತುಪತಿ ಅವರು, 1998ರಲ್ಲಿ ಸ್ನೇಹಿತರೊಂದಿಗೆ ಬೆಂಗಳೂರಿಗೆ ಆಗಮಿಸಿದ್ದೆ. ಆಗ ಕಬ್ಬನ್​ ಪಾರ್ಕ್​ಗೆ ಭೇಟಿ ಕೊಟ್ಟಿದ್ದೆ. ಆಗ ಹಲವರು ತಮ್ಮ ಜೋಡಿಗಳೊಂದಿಗೆ ಕಾಲ ಕಳೆಯುತ್ತಿದ್ದರು. ಆಗ ನನಗೆ ಜಲಸ್ ಆಯ್ತು. ಏಕೆಂದರೆ ಆಗ ನಮಗೆ ಗರ್ಲ್​ಫ್ರೆಂಡ್​ ಯಾರು ಇರಲಿಲ್ಲ ಎಂದು ನೆರೆದಿದ್ದವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದರು.

blank

ಆ ಬಳಿಕ 2008ರಲ್ಲಿ ಕನ್ನಡ ಸಿನಿಮಾದಲ್ಲಿ ಅವಕಾಶಕ್ಕಾಗಿ ಬಂದಿದ್ದೆ. ಆಗ ಶಾರ್ಟ್​ ಮೂವಿವೊಂದರಲ್ಲಿ ಕೂಟ ನಟನೆ ಮಾಡಿದ್ದೆ. ಆದರೆ ಅದು ಶೂಟಿಂಗ್ ಪೂರ್ಣಗೊಳ್ಳಲಿಲ್ಲ. ಆದರೆ ಆಗ ಮೂರು ತಿಂಗಳು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದು, ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಲು ಕಾರಣವಾಯ್ತು ಅಂತಾ ಹೇಳಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಕಂಡಿತ ಅಭಿನಯಿಸುತ್ತೇನೆ ಎಂದಿರುವ ಸೇತುಪಥಿ, ಸುದೀಪ್ ಅವರೊಂದಿನ ಸ್ನೇಹದ ಕುರಿತು ಮಾತನಾಡಿದ್ದಾರೆ. ಸುದೀಪ್​ ಸಖತ್ ಸ್ಟೈಲಿಸ್​​. ಅವರು ತಮ್ಮನ್ನು ಸ್ಟೈಲಿಸ್​ ಆಗಿ ಕಾಣಿಸಿಕೊಳ್ಳಲು ಸಾಕಷ್ಟು ಕೇರ್ ತೆಗೆದುಕೊಳ್ಳುತ್ತಾರೆ. ಅವರನ್ನು ಫ್ರೆಂಡ್​ ಒಬ್ಬರ ಮೂಲಕ 2013ರಲ್ಲಿ ಭೇಟಿ ಆಗಿದ್ದೆ.. ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡೋವಾಗ ನಮ್ಮ ಸ್ನೇಹ ಮತ್ತಷ್ಟು ಆಪ್ತ ಆಯ್ತು. ಚೆನ್ನೈನಲ್ಲೂ ಸುದೀಪ್ ಅವರನ್ನ ಭೇಟಿ ಮಾಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕನ್ನಡದಲ್ಲೇ ಖಡಕ್ ಡೈಲಾಗ್; ತಮಿಳು ಸ್ಟಾರ್​ ವಿಜಯ್ ಸೇತುಪತಿಗೆ ಪ್ರೇಕ್ಷಕರು ಫಿದಾ

The post ‘ಕಬ್ಬನ್ ಪಾರ್ಕ್​​ನಲ್ಲಿ ಲವರ್ಸ್​​ ಕೈಕೈ ಹಿಡ್ಕೊಂಡು ಸುತ್ತೋದು ನೋಡಿ ಹೊಟ್ಟೆಕಿಚ್ಚು ಪಟ್ಟಿದ್ದೆ’ appeared first on News First Kannada.

Source: newsfirstlive.com

Source link