ನಿಲ್ಲದ ಗಡಿ ಸಂಘರ್ಷ; ಭಾರತ, ಚೀನಾ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆ

ನಿಲ್ಲದ ಗಡಿ ಸಂಘರ್ಷ; ಭಾರತ, ಚೀನಾ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆ

ನವದೆಹಲಿ: ಭಾರತ-ಚೀನಾದ ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನಗೊಳ್ಳುತ್ತಿದೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಸೇನಾ ಪಡೆಗಳು ಶಸ್ತ್ರಸಜ್ಜಿತವಾಗಿ ಅಣಿಯಾಗುತ್ತಿವೆ. ಇದರ ಮಧ್ಯಯೇ ಇಂದು ನಡೆದ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್​​  ಒಂದು ಗಂಟೆಗಳ ಕಾಲ ಸುಧೀರ್ಘ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಉಭಯ ನಾಯಕರ ನಡುವಿನ ದ್ವಿಪಕ್ಷೀಯ ಮಾತುಕತೆ ವೇಳೆ ಎಲ್‌ಎಸಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕುರಿತು ಚರ್ಚಿಸಲಾಗಿದೆ. ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ. ದ್ವಿಪಕ್ಷೀಯ ಸಂಬಂಧಗಳ ಮತ್ತಷ್ಟು ಅಭಿವೃದ್ಧಿಗೆ ಅವಶ್ಯಕ ಎಂದರು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್.

The post ನಿಲ್ಲದ ಗಡಿ ಸಂಘರ್ಷ; ಭಾರತ, ಚೀನಾ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆ appeared first on News First Kannada.

Source: newsfirstlive.com

Source link