ಬಿಎಸ್​​ವೈಗೆ ಹೈಕಮಾಂಡ್​​ನಿಂದ ಬುಲಾವ್- ಜೂ.16ಕ್ಕೆ ದೆಹಲಿಯತ್ತ ಸಿಎಂ ಪ್ರಯಾಣ?

ಬಿಎಸ್​​ವೈಗೆ ಹೈಕಮಾಂಡ್​​ನಿಂದ ಬುಲಾವ್- ಜೂ.16ಕ್ಕೆ ದೆಹಲಿಯತ್ತ ಸಿಎಂ ಪ್ರಯಾಣ?

ಬೆಂಗಳೂರು: ಸಿಎಂ ಬಿಎಸ್​​ ಯಡಿಯೂರಪ್ಪ ಅವರಿಗೆ ಬಿಜೆಪಿ ರಾಷ್ಟ್ರೀಯ ನಾಯಕರಿಂದ ದೆಹಲಿಗೆ ಬರುವಂತೆ ಬುಲಾವ್​ ಬಂದಿದೆ ಎನ್ನಲಾಗುತ್ತಿದೆ. ಹೀಗಾಗಿ ದೆಹಲಿ ನಾಯಕರನ್ನು ಭೇಟಿಯಾಗಲು ಸಿಎಂ ಶುಕ್ರವಾರ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನ್ಯೂಸ್‌ಫಸ್ಟ್‌‌ಗೆ ಸಿಎಂ ಕಚೇರಿಯಿಂದ ಲಭ್ಯವಾದ ಮಾಹಿತಿ ಪ್ರಕಾರ, ನಾಳೆ ಸಿಎಂ ಯಡಿಯೂರಪ್ಪರ ದೆಹಲಿ ಪ್ರಯಾಣ ಅಧಿಕೃತವಾಗಲಿದೆಯಂತೆ. ಈಗಿರುವ ಮಾಹಿತಿ ಅನ್ವಯ ಶುಕ್ರವಾರ ಬೆಳಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಸಿಎಂ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಡಿ.ವಿ ಸದಾನಂದ ಗೌಡ ಇಂದು ರಾಜೀನಾಮೆ; ರಾಜ್ಯದತ್ತ ಗಮನ ಹರಿಸಲು ಸೂಚನೆ

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾರನ್ನು ಸಿಎಂ ಭೇಟಿಯಾಗುವ ಸಾಧ್ಯತೆ ಇದೆ. ಹೀಗಾಗಿ ಒಂದು ಅಥವಾ ಎರಡು ದಿನಗಳ ಕಾಲ ದೆಹಲಿ ಪ್ರಯಾಣ ಮಾಡುವ ಸಾಧ್ಯತೆಯಿದೆ. ನಾಳೆ ಸಿಎಂ ಯಡಿಯೂರಪ್ಪರ ದೆಹಲಿ ಪ್ರವಾಸದ ಅಧಿಕೃತ ಮಾಹಿತಿ ತಿಳಿಯಲಿದೆ.

ಇದನ್ನೂ ಓದಿ: ಸಮುದ್ರದಲ್ಲಿ ಸ್ನಾನಕ್ಕೆ ಇಳಿದ ಮೇಲೆ ಅಲೆಗಳಿಗಾಗಿ ಕಾಯಬಾರದು -ಡಿವಿಎಸ್​ ಹೀಗ್ಯಾಕೆ ಅಂದ್ರು?

The post ಬಿಎಸ್​​ವೈಗೆ ಹೈಕಮಾಂಡ್​​ನಿಂದ ಬುಲಾವ್- ಜೂ.16ಕ್ಕೆ ದೆಹಲಿಯತ್ತ ಸಿಎಂ ಪ್ರಯಾಣ? appeared first on News First Kannada.

Source: newsfirstlive.com

Source link