ಪಾಕಿಸ್ತಾನದಲ್ಲಿ ಭೀಕರ ಬಸ್​ ಸ್ಫೋಟ; ಚೀನಾದ 9 ಇಂಜಿನೀಯರ್ಸ್​​ ಸೇರಿ 13 ಸಾವು

ಪಾಕಿಸ್ತಾನದಲ್ಲಿ ಭೀಕರ ಬಸ್​ ಸ್ಫೋಟ; ಚೀನಾದ 9 ಇಂಜಿನೀಯರ್ಸ್​​ ಸೇರಿ 13 ಸಾವು

ನವದೆಹಲಿ: ಚೀನಾದ ಇಂಜಿನಿಯರ್ಸ್​ ಮತ್ತು ಪಾಕಿಸ್ತಾನ ಸೇನಾಧಿಕಾರಿಯನ್ನು ಕರೆದೊಯ್ಯುತ್ತಿದ್ದ ಬಸ್ ಗುರಿಯಾಗಿಸಿಕೊಂಡು ನಡೆಸಿದ ಸ್ಫೋಟದಲ್ಲಿ​ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿವೆ. ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕೊಹಿಸ್ತಾನ್ ಜಿಲ್ಲೆಯಲ್ಲಿ ಸಂಭವಿಸಿದ ಈ ಬಸ್​ ಸ್ಫೋಟದಲ್ಲಿ ಚೀನಾ ಮೂಲದ ಇಂಜಿನಿಯರ್ಸ್​, ಸರ್ವೇಯರ್ಸ್​, ಮೆಕಾನಿಕ್ಸ್ ಮತ್ತು ಪಾಕ್​​ನ ಓರ್ವ ಸೇನಾಧಿಕಾರಿ ಪ್ರಾಣ ಕಳೆದುಕೊಂಡಿದ್ದಾರೆ​​.

blank

ಇನ್ನು, ಈ ಬಸ್​ ಸ್ಫೋಟದಲ್ಲಿ 13 ಮಂದಿ ಅಸುನೀಗಿರುವುದಲ್ಲದೇ ಕನಿಷ್ಠ 36 ಜನ ತೀವ್ರ ಗಾಯಗೊಂಡಿದ್ದಾರೆ. ಚೀನಿಯರನ್ನು ದಸು ಪ್ರಾಂತ್ಯದ ಅಣೆಕಟ್ಟು ನಿರ್ಮಾಣಕ್ಕೆ ಕರೆದೊಯ್ಯುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾ ಜಿಲ್ಲಾಧಿಕಾರಿ ಆರಿಫ್ ಜಾವೇದ್ ತಿಳಿಸಿದ್ದಾರೆ.

ಬಸ್​​ ಮೇಲೆ ದಾಳಿ ನಡೆಸಿದ ಕೂಡಲೇ ಸ್ಫೋಟದಿಂದ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದೊಂದು ಯೋಜಿತ ದಾಳಿ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

The post ಪಾಕಿಸ್ತಾನದಲ್ಲಿ ಭೀಕರ ಬಸ್​ ಸ್ಫೋಟ; ಚೀನಾದ 9 ಇಂಜಿನೀಯರ್ಸ್​​ ಸೇರಿ 13 ಸಾವು appeared first on News First Kannada.

Source: newsfirstlive.com

Source link