‘ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ್ರೆ ನಮ್​ ಮೇಲೆ ಲಾರಿ ಹತ್ತಿಸಿ ಬಿಡ್ತಾರೆ’ ಸುಮಲತಾ ಮುಂದೆ ಗ್ರಾಮಸ್ಥರ ಅಳಲು

‘ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ್ರೆ ನಮ್​ ಮೇಲೆ ಲಾರಿ ಹತ್ತಿಸಿ ಬಿಡ್ತಾರೆ’ ಸುಮಲತಾ ಮುಂದೆ ಗ್ರಾಮಸ್ಥರ ಅಳಲು

ಮಂಡ್ಯ: ಅಕ್ರಮ ಗಣಿಗಾರಿಕೆಯಿಂದ ಕೆಆರ್​ಎಸ್​​​ ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಗಂಭೀರ ಆರೋಪ ಮಾಡಿದ್ದ ಮಂಡ್ಯ ಸಂಸದೆ ಸುಮಲತಾ ಅವರು ಇವತ್ತು ಖುದ್ದಾಗಿ ಕನ್ನಂಬಾಡಿ ಕಟ್ಟೆ ಸೇರಿದಂತೆ ವಿವಿಧ ಕಲ್ಲಿನ ಕ್ವಾರಿ ಹಾಗೂ ಬೇಬಿ ಭೇಟ್ಟ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
 
ಈ ವೇಳೆ ಬೇಬಿ ಗ್ರಾಮಕ್ಕೆ ಭೇಟಿ ನೀಡಿದ ಸುಮಲತಾ ಅವರ ಎದುರು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾಮದ ಮರಿದೇವರ ಶಿವಯೋಗಿ ಗದ್ದುಗೆಗೆ ಭೇಟಿ ನೀಡಿದ್ದ ಸುಮಲತಾ ಅವರು, ತ್ರಿನೇತ್ರ ಶಿವಯೋಗಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಗ್ರಾಮಸ್ಥರು, ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಬೇಬಿ ಗ್ರಾಮಸ್ಥರಿಂದ ಒತ್ತಾಯ ಮಾಡಿದರು.
blank
ರಾತ್ರಿಯ ವೇಳೆ ಸ್ಫೋಟ ಮಾಡ್ತಾರೆ. ದೇವಸ್ಥಾನ ಕೂಡ ಬಿರುಕು ಬಿಟ್ಟಿದೆ. ನಾವೇನಾದ್ರು ಸಾಕ್ಷಿ ಹೇಳಿದ್ರೆ ನಮ್ಮ ಮೇಲೆಯೇ ಲಾರಿ ಹತ್ತಿಸುತ್ತಾರೆ ಎಂದು ನೋವು ತೋಡಿಕೊಂಡರು. ಒಟ್ಟಾರೆ ಇಂದು ಸತತ ಮೂರು ಗಂಟೆಗಳ ಕಾಲ ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸುಮಲತಾ ಅವರು, ಕ್ರಮಕೈಗೊಳ್ಳುವ ಭರವಸೆ ನೀಡಿದರು. ಇನ್ನು ಎರಡು ದಿನಗಳ ಮಂಡ್ಯ ಜಿಲ್ಲಾ ಪ್ರವಾಸ ಮುಗಿಸಿದ ಸಂಸದರು ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದರು.
ವರದಿ: ಹರೀಶ್ ಕಾಕೋಳ್, ಪೊಲಿಟಿಕಲ್ ಬ್ಯೂರೋ

The post ‘ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ್ರೆ ನಮ್​ ಮೇಲೆ ಲಾರಿ ಹತ್ತಿಸಿ ಬಿಡ್ತಾರೆ’ ಸುಮಲತಾ ಮುಂದೆ ಗ್ರಾಮಸ್ಥರ ಅಳಲು appeared first on News First Kannada.

Source: newsfirstlive.com

Source link