ಮಂಗಳೂರು; ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್​​​ ಸಿಬ್ಬಂದಿ ಮೇಲೆ ಹಲ್ಲೆ-ಯುವತಿ ಸೇರಿ ಮೂವರು ವಶಕ್ಕೆ

ಮಂಗಳೂರು; ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್​​​ ಸಿಬ್ಬಂದಿ ಮೇಲೆ ಹಲ್ಲೆ-ಯುವತಿ ಸೇರಿ ಮೂವರು ವಶಕ್ಕೆ

ಮಂಗಳೂರು: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಪೊಲೀಸ್ ಕಾನ್ಸ್ ಟೇಬಲ್​​ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

blank

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನೋವೆಲ್ ಸಿಕ್ವೇರಾ, ಜಾನ್‌ ಸಿಕ್ವೇರಾ ಹಾಗೂ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೂಜಾ ಹಿರೇಮಠ ಮತ್ತು ನಾರಾಯಣ್ ಅವರು ಗಾಯಗೊಂಡಿದ್ದು, ಇಬ್ಬರು ಪೊಲೀಸ್​ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

blank

ಪೊಲೀಸ್​ ಠಾಣೆಯಲ್ಲಿ ಮೇ ತಿಂಗಳ ಕೊನೆಯಲ್ಲಿ ಕುಟುಂಬಗಳ ನಡುವೆ ನೀರಿನ ಕನೆಕ್ಷನ್ ಪಡೆಯುವ ಕುರಿತಂತೆ ಅಟ್ರಾಸಿಟಿ ಮತ್ತು ಪೋಕ್ಸೋ ಕಾಯ್ದೆ ಅಡಿ ಎರಡು ಪ್ರಕರಣ ದಾಖಲಾಗಿತ್ತು. ಆದರೆ ಕೆಲ ಸಮಯದ ಬಳಿಕ ಎರಡು ಕುಟುಂಬಗಳು ಒಂದೇ ಅಪಾರ್ಟ್​​ಮೆಂಟ್​ನಲ್ಲಿರೋ ಕಾರಣ ಅಂತಹ ಘಟನೆ ಏನೂ ನಡೆದಿಲ್ಲ. ಪ್ರಕರಣದಲ್ಲಿ ರಾಜಿ ಮಾಡುಕೊಳ್ಳುತ್ತೇವೆ, ಕೇಸ್ ವಾಪಸ್​ ಪಡೆದುಕೊಳ್ಳುತ್ತೇವೆ ಅಂತಾ ಎರಡು ಕಡೆಯವರು ಠಾಣೆಗೆ ಆಗಮಿಸಿದ್ದರು.

blank

ಈ ಸಂದರ್ಭದಲ್ಲಿ ಪರಿಶೀಲನೆ ಮಾಡಿ ತನಿಖಾ ಅಧಿಕಾರಿಗೆ ಕಳುಹಿಸಿಕೊಳ್ಳಲು ಸೂಚಿಸಲಾಗಿತ್ತು. ಈ ನಡುವೆ ಕುಟುಂಬಸ್ಥರು ಠಾಣೆಗೆ ಬಂದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿದ್ದ ಸಿಬ್ಬಂದಿ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ವಿಡಿಯೋ ಶೂಟ್​ ಮಾಡಲು ಮುಂದಾದ ವೇಳೆ ವಿಡಿಯೋ ಮಾಡದಂತೆ ಹೇಳಿದ ಕಾರಣ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿರುವ ದೃಶ್ಯಗಳು ಕೂಡ ಲಭ್ಯವಾಗಿದೆ. ಒಬ್ಬ ಪೇದೆಗೆ ಕಾಲಿಗೆ ಗಂಭೀರವಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ ಎಂದು ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಎನ್​.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

blank

The post ಮಂಗಳೂರು; ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್​​​ ಸಿಬ್ಬಂದಿ ಮೇಲೆ ಹಲ್ಲೆ-ಯುವತಿ ಸೇರಿ ಮೂವರು ವಶಕ್ಕೆ appeared first on News First Kannada.

Source: newsfirstlive.com

Source link