ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಯುವಕ

ಸಿಡ್ನಿ: ವಿದೇಶದಲ್ಲಿ ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಭಾರತೀಯ ಯುವಕ ಎಲ್ಲರ ಮೆಚ್ಚುಗೆಗೆಪಾತ್ರನಾಗಿದ್ದಾನೆ.

ಭಾರತ ಮೂಲದ ಜಸ್ಟಿನ್ ನಾರಾಯಣ್ ಎನ್ನುವ 27 ವರ್ಷದ ಯುವಕ ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ಸೀಸನ್ 13ರ ವಿಜೇತರಾಗಿದ್ದಾರೆ. ಈ ಮೂಲಕ 1.8 ಕೋಟಿ ರೂಪಾಯಿ (2.5 ಲಕ್ಷ ಡಾಲರ್) ಪ್ರಶಸ್ತಿ ಹಣ ಗೆದ್ದಿದ್ದಾರೆ.

 

View this post on Instagram

 

A post shared by Justin Narayan (@justinnarayan)

ಮಾಸ್ಟರ್ ಶೆಫ್ ಆಸ್ಟ್ರೇಲಿಯಾ ರಿಯಾಲಿಟಿ ಶೋನ ಫಿನಾಲೆಯಲ್ಲಿ ಆಸ್ಟ್ರೆಲಿಯಾದ ಪೆಟೆ ಹಾಗೂ ಬಾಂಗ್ಲಾದೇಶದ ಕಿಶ್ವರ್ ಚೌಧರಿ ಕಡೆಯಿಂದ ಭಾರೀ ಕಾಂಪಿಟೇಷನ್ ಇತ್ತು. ಅಂತಿಮವಾಗಿ ಜಸ್ಟಿನ್ ವಿಜೇತರಾಗಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಪೆಟೆ ಆಯ್ಕೆಯಾದರೆ, ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಕಿಶ್ವರ್ ಪಡೆದುಕೊಂಡಿದ್ದಾರೆ. ತಮ್ಮ ಅದ್ಭುತ ಅಡುಗೆ ಮೂಲಕ ಜಡ್ಜ್​ಗಳನ್ನು ಸೆಳೆದುಕೊಂಡಿದ್ದರು. ಅವರು ಮಾಡುತ್ತಿದ್ದ ಅಡುಗೆ ಜಡ್ಜ್​ಗಳಿಗೆ ಇಷ್ಟವಾಗಿತ್ತು. ಹೀಗಾಗಿ, ಅಂತಿಮವಾಗಿ ಅವರೇ ವಿಜೇತರಾದರು.

 

View this post on Instagram

 

A post shared by Justin Narayan (@justinnarayan)

ಜಸ್ಟಿಸ್ ನಾರಾಯಣ್ ಪಶ್ಚಿಮ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಜಸ್ಟಿನ್ ತಮ್ಮ 13ನೇ ವಯಸ್ಸಿಗೆ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು. ಭಾರತೀಯ ಶೈಲಿಯ ಅಡುಗೆ ಹಾಗೂ ಪಾಶ್ಚಿಮಾತ್ಯ ಅಡುಗೆ ಎರಡರಲ್ಲೂ ಜಸ್ಟಿನ್ ಪಳಗಿದ್ದಾರೆ. ಇಂಡಿಯನ್ ಚಿಕನ್ ಟ್ಯಾಕೋಸ್, ಇಂಡಿಯನ್ ಚಿಕನ್ ಕರಿ ಸೇರಿ ಸಾಕಷ್ಟು ವಿಧದ ಅಡುಗೆಯನ್ನು ಜಸ್ಟಿನ್ ರಿಯಾಲಿಟಿ ಶೋನಲ್ಲಿ ಮಾಡಿದ್ದರು.

 

View this post on Instagram

 

A post shared by Justin Narayan (@justinnarayan)

2017ರಲ್ಲಿ ಜಸ್ಟಿನ್ ಭಾರತಕ್ಕೆ ಬಂದಿದ್ದರು. ಇಲ್ಲಿಯ  ಸಂಸ್ಕೃತಿ, ಇತಿಹಾಸ, ಜನರು ಹಾಗೂ ಆಹಾರ ಸಂಸ್ಕೃತಿ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಆಸ್ಟ್ರೇಲಿಯಾದಲ್ಲಿ ಫುಡ್ ಟ್ರಕ್ ಆರಂಭಿಸುವ ಆಲೋಚನೆಯನ್ನು ಜಸ್ಟಿನ್ ಹೊಂದಿದ್ದಾರೆ. ಇದರಲ್ಲಿ ಭಾರತೀಯ ಶೈಲಿಯ ಅಡುಗೆಯೂ ಇರಲಿದೆ ಅನ್ನೋದು ವಿಶೇಷವಾಗಿದೆ.

The post ಅಡುಗೆ ಮಾಡಿ 1.8 ಕೋಟಿ ರೂಪಾಯಿ ಗೆದ್ದ ಯುವಕ appeared first on Public TV.

Source: publictv.in

Source link