‘ಪದ್ಮ’ಕ್ಕೇ ಭೂಷಣ; ನಟ ಅನಂತ್​​​ ನಾಗ್​​ಗೆ ‘ಪದ್ಮ ಪ್ರಶಸ್ತಿ’ ನೀಡುವಂತೆ ಅಭಿಯಾನ

‘ಪದ್ಮ’ಕ್ಕೇ ಭೂಷಣ; ನಟ ಅನಂತ್​​​ ನಾಗ್​​ಗೆ ‘ಪದ್ಮ ಪ್ರಶಸ್ತಿ’ ನೀಡುವಂತೆ ಅಭಿಯಾನ

ಅನಂತ್ ನಾಗ್​​.. ಕನ್ನಡ ನಾಡು ಕಂಡ ಶ್ರೇಷ್ಟ ನಟ.. ಹತ್ತ್ ಹತ್ರಾ 50 ವರ್ಷಗಳಿಂದ ತನ್ನ ಅನುಪಮ ಕಲಾ ಸೇವೆಯನ್ನ ಮಾಡುತ್ತಾ ಬಂದಿರೋ ಕನ್ನಡ ಮುತ್ತಿನಂತ ನಟನಿಗೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ ಸಿಗಲಿ ಅನ್ನೊ ಕೂಗುಗಳು ಕೇಳಿ ಬರುತ್ತಿವೆ. ಕನ್ನಡ ಚಿತ್ರರಂಗ ಅನೇಕ ನಟ ನಟಿಯರು ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬರಲಿ ಅನ್ನೊ ಅಭಿಯಾವನ್ನ ಶುರು ಮಾಡಿದ್ದಾರೆ. ಈ ಅಭಿಯಾನಕ್ಕೆ ನಿಮ್ಮ ಚಿತ್ರಪ್ರೇಮಿಗಳ ಅಭಿಮಾನದ ಕೂಗು ಕೇಳಿ..

ಅನಂತ್ ನಾಗ್​​.. ಕನ್ನಡ ಸಿನಿರಂಗದ ಸರಳತೆಯ ಸುಂದರ ಸಂಪ್ರಾದಯ. ಇವ್ರಿಗೆ ಈಗ 70ರ ಪ್ರಾಯ, ಆದ್ರೆ ಇವರ ನಟನೆಗೆ 20ರ ಹರೆಯ. ಬರೋಬ್ಬರಿ 48 ವರ್ಷಗಳಿಂದ ಸಿನಿಮಾ ರಂಗ ಸೇವೆಯನ್ನ ಮಾಡುತ್ತಾ ಒಂದ್ ಕಾಲದಲ್ಲಿ ರಾಜಕೀಯ ಪಡಸಾಲೆಯಲ್ಲೂ ಜನ ಸೇವೆಯನ್ನ ಮಾಡಿದ ಅದ್ಭುತ ಮನುಷ್ಯ ಅನಂತ್ ನಾಗ್​​.

blank

ಅನಂತ್ ನಾಗ್ ಎಷ್ಟರ ಮಟ್ಟಿಗೆ ಕನ್ನಡ ಮತ್ತು ಕನ್ನಡಿಗರ ಮನೆ ಮನದಲ್ಲಿ ಅರೆತು ಬೆರೆತ್ತಾರೆ ಅನ್ನೋದನ್ನ ಒಂದೇ ಉಸಿರಿನಲ್ಲಿ ಹೇಳೋಕೆ ಆಗಲ್ಲ. ಮನೆಗಳಲ್ಲಿ ಹೆಣ್ಮಕ್ಕಳು ಸಂಬಂಧ ಒಪ್ಪಲಿಲ್ಲ ಅಂದ್ರೆ ನಿನಗಿನ್ನೇನ್ ಅನಂತ ನಾಗ್ ಥರ ಹುಡುಗ ಸಿಗ್ತಾನ? ಅಂತ ಕಲ್ಯಾಣಕ್ಕೆ ಒಪ್ಪಿಸಲಿಕ್ಕೆ. ವಯಸ್ಸು ಹುಡುಗರು ಮೀಸೆ ತೆಗೆಸಿದಾಗ ಏನೊ ಬಯಲುದಾರಿ ಅನಂತನಾಗ್ ಆಗೋಗಿದೀಯ! ಅನ್ನೋ ಹೋಲಿಕೆ. ಕಲರ್ ಚೆನ್ನಾಗಿದ್ರೆ ಒಳ್ಳೇ ಅನಂತನಾಗ್ ಇದ್ದಂಗಿದ್ದಾನೆ! ಅಂತ ಬಣ್ಣಕ್ಕೆ. ನಟನೆಗೆ, ಸ್ಪುರದ್ರೂಪಕ್ಕೆ , ವಿನಯವಂತಿಕೆಗೆ, ಶಿಸ್ತಿಗೆ, ಸಂಯಮಕ್ಕೆ, ಉಡುಪಿಗೆ , ಹುರುಪಿಗೆ.. ಹೀಗೆ ಇಂಥದ್ದಕ್ಕೇ ಅಂತಲ್ಲ ಯಾವುದಕ್ಕೆ ಬೇಕಾದ್ರೂ ಉದಾಹರಣೆಯಾಗಬಲ್ಲಂತಹ ನಟ ಅನಂತ್ ನಾಗ್​​.

blank

ಅನಂತ್ ನಾಗ್ ಅನ್ನೋದು ಶುದ್ಧನೀರು. ಎಷ್ಟೋ ಜನ ಈ ನೀರನ್ನು ಸಹ ಕಲುಷಿತ ಮಾಡಲಿಕ್ಕೆ ಅಂತ ಪ್ರಯತ್ನಪಟ್ಟು ಕೊನೆಗೆ ಸಾಧ್ಯವಾಗದೆ ಅದೇ ನೀರಿನಿಂದ ಅವರೇ ಶುದ್ಧವಾಗಿದ್ದಾರೆ. ತಮ್ಮ ಸ್ವಚ್ಛ ಉಚ್ಛಾರಣೆಯಿಂದಲೇ ಕನ್ನಡ ಭಾಷೆಗೆ ವಿಶೇಷ ಮಾಧುರ್ಯತೆ ಕಲ್ಪಿಸಿದಂತಹ ನಟರಿವರು. ಮೀಸೆ ಬಿಟ್ಟರೆ ದಕ್ಷಿಣದವನು ಮೀಸೆ ತೆಗೆದುಬಿಟ್ಟರೆ ಉತ್ತರ ಭಾರತೀಯನೂ ಆಗಬಲ್ಲ ಹಾಗೂ ಬಹುಭಾಷೆಯನ್ನೂ ನಿರರ್ಗಳವಾಗಿ ಆಡಬಲ್ಲ ಬಹುರೂಪಿ ಬಹುಭಾಷ ನಟ ಪ್ರತಿಭವಂತ ಘಟ.

blank

ಲಕ್ಷ್ಮಿ, ಅಂಬಿಕ, ಆರತಿ, ಭಾರತಿ, ಜಯಂತಿ, ಜಯಸುಧಾ, ಜಯಪ್ರದ, ಶ್ರೀದೇವಿ ಇವರೆಲ್ಲರ ಮನೆ ಮುಂದೆ ಪಡ್ಡೆ ಹುಡುಗರು ಹಗಲೂ ರಾತ್ರಿ ಬೀಟ್ ಹೊಡೆದು ಪೋಲಿಗಳು ಅಂತನ್ನಿಸಿಕೊಂಡು ಪೋಲೀಸರ ಕೈಲಿ ಒದೆ ತಿನ್ನುತ್ತಿದ್ದ ಕಾಲದಲ್ಲಿ ತನ್ನ ಮನೆ ಮುಂದೆ ಲೇಡೀಸ್ ಹಾಸ್ಟೆಲ್ಲೇ ಬೀಟ್ ಹೊಡೆಯೋ ಥರ ಮಾಡಿದಂತಹ ಅನ್ ಬೀಟಬಲ್ ಅಡೋರಬಲ್ ಹ್ಯಾಂಡ್ ಸಮ್ ಹೀರೋ ಅನಂತ್‌ ನಾಗ್. ಹೀರೋಗಳು ನಟನೆ ಡ್ಯಾನ್ಸು ಫೈಟು ಕಲಿತು ಸ್ಥಾನ ಗಟ್ಟಿ ಮಾಡ್ಕೊಳ್ತಿದ್ದ ಸಮಯದಲ್ಲಿ. ಅದ್ಯಾವುದನ್ನೂ ಮಾಡದೇ ಸೀದಾ ಬಂದು ಅನಾಯಾಸವಾಗಿ ಮನ್ಮಥನ ಸ್ಥಾನವನ್ನೇ ಅಲಂಕರಿಸಿದ ಮನಮೋಹಕನಟ ಅನಂತ್ ನಾಗ್.. ಇಷ್ಟೆಲ್ಲ ಸಾಧನೆಗಳನ್ನ ಜನರ ಮನಕಣದಲ್ಲಿ ಅಡಗಿರೋ ನಟರಿಗೆ ಪದ್ಮ ಪ್ರಶಸ್ತಿ ಒಲಿಯದೇ ಇದ್ದೇ ಹೇಗ್ಹೇಳಿ.

blank

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಪದ್ಮ ಪ್ರಶಸ್ತಿಗೆ ಅರ್ಹವಾದ ವ್ಯಕ್ತಿಗಳನ್ನ ಗುರುತಿಸಿ ಪಟ್ಟಿ ಮಾಡಿ ನಮಗೆ ತಲುಪಿಸಿ ಅನ್ನೋ ಮನವಿಯನ್ನ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡಿಗರಾದ ನಾವು ಅನಂತ್ ನಾಗ್ ಅಂತಹ ಪ್ರತಿಭಾವಂತ ಧೀಮಂತ ವ್ಯಕ್ತಿಯನ್ನ ಪದ್ಮ ಪ್ರಶಸ್ತಿ ಆಯ್ಕೆ ಮಾಡಿ ಎಂದು ಮನವಿ ಮಾಡದಿದ್ದಾರೆ ಎಷ್ಟು ಚೆನ್ನಾಗಿ ಇದ್ದಾತು ಹೇಳಿ. ನಮ್ಮ ನಿಮ್ಮ ಕಡೆಯಿಂದ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಬರಲಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡೋಣ.

blank

blank

blank blank

The post ‘ಪದ್ಮ’ಕ್ಕೇ ಭೂಷಣ; ನಟ ಅನಂತ್​​​ ನಾಗ್​​ಗೆ ‘ಪದ್ಮ ಪ್ರಶಸ್ತಿ’ ನೀಡುವಂತೆ ಅಭಿಯಾನ appeared first on News First Kannada.

Source: newsfirstlive.com

Source link