ಸಾಧಾರಣ ಮನುಷ್ಯನನ್ನೂ ಸೂಪರ್​ ಮ್ಯಾನ್​ ಮಾಡುತ್ತೆ ಈ ವ್ಯಾಕ್ಸಿನ್..!

ಸಾಧಾರಣ ಮನುಷ್ಯನನ್ನೂ ಸೂಪರ್​ ಮ್ಯಾನ್​ ಮಾಡುತ್ತೆ ಈ ವ್ಯಾಕ್ಸಿನ್..!

ವಿಶ್ವದಲ್ಲಿ 750 ಕೋಟಿ ಹೆಚ್ಚು ಜನ ಇದ್ದಾರೆ. ಆದರೆ, ಒಬ್ಬರಿಗಿಂತ ಒಬ್ಬರು ಭಿನ್ನವಾಗಿರ್ತಾರೆ. ಒಬ್ಬರು ಇದ್ದ ಹಾಗೆ ಇನ್ನೊಬ್ಬರು ಇರಲ್ಲ. ಕೆಲವರು ಹೋಲಿಕೆ ಕಾಣಿಸಿಬಹುದೇ ವಿನಹ ಚೇಂಜಸ್ ಅಂತೂ ಇದ್ದೇ ಇರುತ್ತೆ. ಯಾರೊಬ್ಬರಿಗೂ ಯಾರು ಪರ್ಫೆಕ್ಟ್ ಮ್ಯಾಚ್ ಆಗಲು ಸಾಧ್ಯಾನೆ ಇಲ್ಲ. ಎಲ್ಲರಲ್ಲೂ ವಿಭಿನ್ನತೆ, ಎಲ್ಲರಲ್ಲೂ ಅವರದೇ ಆಲೋಚನೆ. ಒಬ್ಬರ ಯೋಚನೆ, ಯೋಜನೆ ಇನ್ನೊಬ್ಬರಿಗೆ ಹಿಡಿಸುವುದಿಲ್ಲ. ಈ ಧ್ವಂದದಲ್ಲೆ ಎಷ್ಟೋ ಯುಗಗಳು ಕಳೆದು ಹೋದವು. ಹಾಗೆ ನಡೆಯುತ್ತಲೆ ಇದೆ. ಒಂದು ವೇಳೆ ಜಗತ್ತಿನಲ್ಲಿದ್ದವರಲೆಲ್ಲ ಒಂದೆ ರೀತಿ ಯೋಚಿಸಲು ಶುರು ಮಾಡಿದ್ದರೆ ಹೇಗಿರುತ್ತೆ?

ಹೈ-ಕ್ಲಾಸ್ ವ್ಯಾಕ್ಸಿನ್
ನಮ್ಮ ದೇಹದ ಒಂದೊಂದು ಅಂಗಾಂಗಗಳು ರೂಪುಗೊಂಡಿರೋದು ಜೀನ್ ಟೈಪ್ ಫಾರ್ಮೇಷನ್​ನಿಂದ. ನಮ್ಮ-ನಿಮ್ಮ ಪೂರ್ವಿಕರು ನೋಡಲು ಹೇಗಿದ್ದರು ಮತ್ತು ಅವರ ಕೆಲವೇ ಕೆಲವು ಗಣಗಳನ್ನು ಈ ಜೇನ್ ಹೊತ್ತು ಬಂದಿರುತ್ತೆ. ಒಬ್ಬರ ದೇಹದಿಂದ ಇನ್ನೊಬ್ಬರ ದೇಹಕ್ಕೆ ಹರಿದು ಬರುವಾಗ ಜೀನ್ ತಾನಾಗೆಯೇ ಮಾಡಿಫಿಕೇಷನ್ ಮಾಡಿಕೊಂಡಿರುತ್ತೆ. ಈ ಮಾಡಿಫಿಕೇಷನ್ ನಲ್ಲೂ ಅಲ್ಲಿ ಇಲ್ಲಿ ನಮ್ಮ ಪೂರ್ವಿಕರ ಗುಣಗಳು ಕಂಡಾಗ ಅದನ್ನು ಜೀನ್ ಮೆಮೋರಿಯನ್ನುತ್ತಾರೆ. ಆದರೆ ಈಗ ಜಗತ್ತಿನೆಲ್ಲೆಡೆ ಈ ಜೀನೋ ಟೈಪ್ ಅನ್ನು ಲ್ಯಾಬ್ ಗಳಲ್ಲಿ ಬದಲಾಯಿಸುವ ಪ್ರಯೋಗಗಳು ನಡಿತಾ ಇದೆ. ಹಲವು ವಿಜ್ಞಾನಿಗಳು ಈ ಪ್ರಯೋಗದಲ್ಲಿ ಜೀನ್ ಎಡಿಟಿಂಗ್ ಅಥವಾ ಜೆನಿಟಿಕಲ್ ಎಡಿಟಿಂಗ್ ಅನ್ನೋದು ಮುಂದಿನ ಪೀಳಿಗೆಯ ಬಹು ನೀರಿಕ್ಷಿತ ವಿಜ್ಞಾನ ವಿಷಯ ಆಗುವುದರಲ್ಲಿ ಸಂಶವೇ ಇಲ್ಲ. ಇದೀಗ ಎಲ್ಲ ಕಡೆ ಒಂದು ಹೈ-ಕ್ಲಾಸ್ ವ್ಯಾಕ್ಸಿನ್ ಬಗ್ಗೆ ಚರ್ಚೆ ನಡಿತಾ ಇದೆ, ಅದೇ ಸೂಪರ್ ಹೀರೋ ವ್ಯಾಕ್ಸಿನ್.

ಇದನ್ನೂ ಓದಿ: ಈ ದ್ರಾಕ್ಷಿ ಹಣ್ಣಿನ ಬೆಲೆ ₹7 ಲಕ್ಷ; ಒಂದು ಬಾರಿ ನೀವು ತಿಂದ್ರೆ.. ಇದೇ ಬೇಕು ಅನ್ನೋದ್ರಲ್ಲಿ ಡೌಟೇ ಇಲ್ಲ

ಸೂಪರ್ ಹೀರೋ ಅಂದ ಕೂಡಲೇ ನಮಗೆ ಸಿನಿಮಾದಲ್ಲಿ ತೋರಿಸಿದ ಪಾತ್ರಗಳು ನೆನಪಿಗೆ ಬರುತ್ತೆ. ಸೂಪರ್ ಮ್ಯಾನ್, ಸ್ಪೈಡರ್ ಮ್ಯಾನ್. ಎಕ್ಸ್ ಮ್ಯಾನ್ ಇವರೆಲ್ಲ ಸಿನಿಮಾದಲ್ಲಿ ಸೂಪರ್ ಹೀರೋಗಳು. ಕಾರಣ ಇವರು ಸಾಮಾನ್ಯ ಮಾನವನಿಗಿಂದ ವಿಭಿನ್ನರಾಗಿರ್ತಾರೆ. ಇವರನ್ನು ಎದುರಿಸೋದು ಅಷ್ಟು ಸುಲಭವಾಗಿರಲ್ಲ. ಕಾರಣ ಇವರ ಜೆನಿಟಿಕ್ಸ್ ನಲ್ಲಿ ವೇರಿಯೇಷನ್ ಆಗಿರುತ್ತೆ. ಉದಾಹರಣೆಗೆ ಸ್ಪೈಡರ್ ಮ್ಯಾನ್ ಸಿನಿಮಾವನ್ನು ನೋಡಿದರೆ. ಒಂದು ಜೇಡ ಅವನಿಗೆ ಕಡಿದಾಗ, ಆತನ ಜೀನೋಟಿಕ್ ಫಾರ್ಮೇಷನ್ ನಲ್ಲಿ ಬದಲಾವಣೆಗಳು ಕಾಣಿಸುತ್ತದೆ. ಈ ಕಾರಣದಿಂದ ಮೊದಲಿಗೆ ನಿಶಕ್ತನಾಗಿದ್ದ ಇವನು., ಒಮ್ಮೆಲೇ ಶಕ್ತಿಶಾಲಿಯಾಗಿ ಬಿಡ್ತಾನೆ. ಇದೆಲ್ಲ ಸಿನಿಮಾದಲ್ಲಿ ನೋಡಲು ಚಂದ, ನಿಜ ಜೀವನದಲ್ಲಿ ಹೀಗೆಲ್ಲಾ ನಡೆಯುವುದಿಲ್ಲ ಅಂದು ಕೊಳ್ಳಬಹುದು. ಆದರೆ ಈ ವಿಷಯವಾಗಿ ಸಂಶೋದನೆ ನಡೆಯುತ್ತಿರುವುದಂತು ಸುಳ್ಳಲ್ಲ. ಒಬ್ಬ ಸಹಜ ಮಾನವನನ್ನು ಶಕ್ತಿಶಾಲಿಯನ್ನಾಗಿ ಮಾಡುವುದೆ ಈ ಸೂಪರ್ ಹೀರೋ ವ್ಯಾಕ್ಸಿನ್.

DNA ಕಂಪ್ಲೀಟ್ ಬದಲಾಯಿಸಿ ಬಿಡ್ತಾರೆ
ವ್ಯಾಕ್ಸಿನ್ ಅಂದ ಕೂಡಲೇ ನೀವ್ ಕೊರೊನಾ ಲಸಿಕೆ ಅನ್ಕೋಬೇಡಿ. ಈ ಲಸಿಕೆ ಕೊರೊನಾ ಮಾತ್ರವಲ್ಲ, ಜಗತ್ತಿನಲ್ಲಿ ಇರುವ ಎಲ್ಲ ಕಾಯಿಲೆಗಳಿಗೆ ಇದೊಂದೆ ಲಸಿಕೆ ಸಾಕು. ಹೀಗೊಂದು ಲಸಿಕೆ ಇರಬಹುದಾ ? ಈ ಲಸಿಕೆ ತಗೊಂಡ್ರೆ ನಮಗೆ ಕಾಯಿಲೆನೇ ಬರಲ್ವಾ ? ಇದರ ಬಗ್ಗೆ ಮುಂದೆ ಹೇಳ್ತಾ ಹೋಗ್ತಿವಿ. ಆದ್ರೆ ಸೂಪರ್ ಹೀರೋ ವ್ಯಾಕ್ಸಿನ್ ತಯಾರಿಕೆ ಮಾಡಲು ಒಂದು ವಿಜ್ಞಾನಿಗಳ ಗುಂಪು ಸಿದ್ಧವಾಗಿ ಬಿಟ್ಟಿದೆ. ತುಂಬಾ ಕಾತುರದಿಂದ ಈ ವ್ಯಾಕ್ಸಿನ್ ತಯಾರಿಸಲು ಸಿದ್ಧತೆಗಳನ್ನು ಮಾಡ್ತಾ ಇದ್ದಾರೆ. ಹೌದು ಸ್ಟಾನ್ ಫೋರ್ಡ್ ಯುನಿವರ್ಸಿಟಿಯ ವಿಜ್ಞಾನಿಗಳು ನಿಮ್ಮ ದೇಹದ ಜೀನ್ ಗಳನ್ನು ಎಡಿಟ್ ಮಾಡಿ, ದೇಹದ ಜೆನಿಟಿಕಲ್ ಆರ್ಡರ್ ಹಾಗೂ ಡಿ.ಎನ್.ಎ ಗಳನ್ನು ಕಂಪ್ಲೀಟ್ ಬದಲಾಯಿಸಿ ಬಿಡ್ತಾರೆ. ಇದರಿಂದ ನಿಮಗೆ ಮುಂದೆ ಬರಬಹುದಾದ ಕಾಯಿಲೆಗಳನ್ನು ಇದು ತಡೆ ಗಟ್ಟುತ್ತೆ, ಅಷ್ಟೇ ಅಲ್ಲ ನಿಮ್ಮನ್ನು ಇದ್ದಕ್ಕಿದ್ದಂತೆ ಸೂಪರ್ ಪವರ್ ಮನುಷ್ಯನನನ್ನಾಗಿ ಮಾಡಿ ಬಿಡುತ್ತೆ.

ಕೊರೊನದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವ ಒಂದೇ ಒಂದು ಅಸ್ತ್ರ ಅಂದ್ರೆ ಅದು ಕೊರೊನಾ ವ್ಯಾಕ್ಸೀನ್. ಈ ಕೊರೊನಾಗೆ ಹಲವು ವ್ಯಾಕ್ಸಿನ್ ಗಳು ಸಿದ್ದವಾಗಿದೆ. ಅದರಲ್ಲಿ ಅಮೆರಿಕಾದ ಫೈಸರ್ ಕಂಪನಿಯ ವ್ಯಾಕ್ಸಿನ್ ಎಲ್ಲ ವ್ಯಾಕ್ಸಿನ್ ಗಿಂತ ಡಿಫರೆಂಟ್. ಕೊರೊನಾ ಎದುರಿಸಲು ಜೆನಿಟಿಕಲ್ ಆರ್ಡರ್ ಅನ್ನೇ ಬದಲಾಯಿಸುತ್ತೆ ಈ ಲಸಿಕೆ. ದೇಹದಲ್ಲಿನ ಆರ್.ಎನ್.ಎ ರೂಪದಲ್ಲಿ ಬದಲಾವಣೆ ತಂದು ಸಾಂಕ್ರಾಮಿಕದ ವಿರುದ್ಧ ಹೋರಾಡಲು ಈ ಲಸಿಕೆ ಸಹಾಯಕವಾಗುತ್ತೆ. ಜೆನಿಟಕಲಿ ಎಡಿಟ್ ಮಾಡುವ ಈ ಲಸಿಕೆ ಸಕ್ಸಸ್ ಕೂಡ ಆಯ್ತು. ಈ ತಂತ್ರಜ್ಞಾನದ ಸ್ಫೂರ್ತಿಯಿಂದಲೇ ಸೂಪರ್ ಹೀರೋ ವ್ಯಾಕ್ಸಿನ್ ಸಂಶೋಧನೆಗೆ ಇಳಿದಿರೋದು. ಈ ಸಂಶೋದನೆಯ ಚೀಫ್ ಆಗಿರುವ Euan Ashley, ಈ ವ್ಯಾಕ್ಸಿನ್ ಮುಂದಿನ ದಶಕದಲ್ಲಿ ಎಲ್ಲಡೆ ಡಿಮ್ಯಾಂಡ್ ಸೃಷ್ಟಿಸಲಿದೆ ಎನ್ನವ ನಂಬಿಕೆಯಲ್ಲಿದ್ದಾರೆ.

ಜೀನೋ ಟೈಪ್ ವ್ಯವಸ್ಥೆಯನ್ನೆ ಬದಲಿಸಿ ಬಿಡುತ್ತೆ
ಈಗ ಸಿದ್ಧವಾಗ್ತಾ ಇರೋ ಸೂಪರ್ ಹೀರೋ ವ್ಯಾಕ್ಸಿನ್ ಒಮ್ಮೆ ದೇಹದ ಒಳಕ್ಕೆ ಎಂಟ್ರಿ ಕೊಟ್ರೆ ನಿಮ್ಮ ಸಂಪೂರ್ಣ ಜೀನೋ ಟೈಪ್ ವ್ಯವಸ್ಥೆಯನ್ನೆ ಬದಲಿಸಿ ಬಿಡುತ್ತೆ. ಜೆನಿಟಿಕಲ್ ರೋಗಗಳಾದ ಡಯಾಬಿಟೀಸ್ಸ್, ಸ್ಕಿನ್ ರೋಗಗಳು, ಥೈರಾಡ್ ಗಳಂತಹ ಕಾಯಿಲೆಗಳಿಂದ ಸಂಪೂರ್ಣ ಮುಕ್ತಿ ಸಿಗಲಿದೆ. ಇನ್ನು ಪೇರೆಂಟಲ್ ಮೊಮರಿಯಾಗಿ ಬರುವ ಏಡ್ಸ್, ಟಿಬಿ ಮುಂತಾದ ರೋಗಗಳಿಗೆ ಫುಲ್ ಸ್ಟಾಪ್ ಹಾಕುತ್ತೆ. ಇನ್ನು ಹೃದಯ ಸಂಬಂಧಿ ಕಾಯಿಲೆಗಳು, ಹಾರ್ಟ್ ಅಟ್ಯಾಕ್, ಹಾರ್ಟ್ ಬ್ಲಾಕ್ ಗಳು ಸಹ ಆಗಲ್ಲ. ಅಲ್ಲದೆ ಕಿಡ್ನಿ, ಲಿವರ್ ಮುಂತಾದ ಅಂಗಾಂಗ ವೈಫಲ್ಯತೆಯಿಂದ ಸಾಕಷ್ಟು ನೋವಲ್ಲಿದ್ದವರಿಗೆ ಈ ಒಂದು ಲಸಿಕೆಯಿಂದ ಸಂಪೂರ್ಣ ಮುಕ್ತಿ ಇದ್ದಂತೆ. ಆದ್ರೆ ಇದೆಲ್ಲಾ ಹೇಗೆ ಸಾಧ್ಯ?

ಇದನ್ನೂ ಓದಿ: ಕಣ್ಣಲ್ಲೇ ಕ್ಯಾಮರಾ.. ಮೈತುಂಬಾ ಸೆನ್ಸಾರ್​.. ನೌಕಾ ಸೇನೆಗೆ ಶಕ್ತಿ ತುಂಬಲಿದೆ ರೋಬೊ ಫಿಶ್

ಸಹಜವಾಗಿ ಆಟಗಾರರ ಮುಖ್ಯವಾಗಿ ಒಲಿಂಪಿಕ್ ಆಡುವ ಪಟುಗಳ ಹೃದಯ, ಕಿಡ್ನಿ, ಲಿವರ್ ಆರೋಗ್ಯವಂತವಾಗಿರುತ್ತದೆ. ಸತತವಾಗಿ ಅಭ್ಯಾಸ ಮಾಡಿದ ಪಟುಗಳ ದೇಹದಲ್ಲಿ ಎಲ್ಲ ಜೀನ್ಸ್ ಗಳು ಬಲವಾಗಿರುತ್ತದೆ. ಈ ಜೀನ್ಸ್ ಗಳನ್ನು ತೆಗೆದು ಕೊಂಡು ಅದನ್ನು ಪರಿವರ್ತಿಸಿ, ಶಕ್ತಿ ಶಾಲಿ ಜೀನೋ ಟೈಪ್ ಗಳನ್ನು ವಿಜ್ಞಾನಿಗಳ ಸಿದ್ದ ಮಾಡ್ಕೊತಾರೆ. ಇದನ್ನು ಲಸಿಕೆಯನ್ನಾಗಿ ಮಾಡಿ, ಒಂದು ಡೋಸ್ ಕೊಟ್ಟರೆ ಅಷ್ಟೆ ಸಾಕು. ಲಸಿಕೆ ಪಡೆದವರ ಜೀನ್ ಸ್ಟರ್ಕಚರ್ ಬದಲಾಗ್ತಾ ಬರುತ್ತೆ. ಕೊನೆಗೆ ಆ ವ್ಯಕ್ತಿಯ ಸಂಪೂರ್ಣ ಜೀನೋ ಟೈಪ್ ಬದಲಾಗಿ, ಆರೋಗ್ಯವಂತನಾಗಿ ಬಿಡ್ತಾನೆ. ಆದರೆ ಇದರಲ್ಲಿ ಹಲವು ತೊಂದರೆಗಳು ಇರೋದನ್ನು ವಿಜ್ಞಾನಿಗಳು ಕಡೆಗಣಿಸುವಂತಿಲ್ಲ.

ಇಬ್ಬರು ವಿಜ್ಞಾನಿಗಳಿಗೆ ನೋಬಲ್ ಪುರಸ್ಕಾರ
ಲಸಿಕೆ ತೆಗೆದುಕೊಂಡವರ ಜೀನೋ ಟೈಪ್ ನಲ್ಲಿದ್ದ ಜೆನಿಟಿಕಲ್ ಕಾಯಿಲೆಗಳು ನಶಿಸಿ ಹೋಗುತ್ತೆ ಅನ್ನೋದೇನೋ ಸರಿ. ಆದರೆ ಒಲಿಂಪಿಕ್ ಆಟಗಾರನ ಜೀನ್ ನಲ್ಲಿದ್ದ ಕಾಯಿಲೆಗಳು ಇನ್ನೊಂದು ಜನೆರೇಷನ್ ಗೆ ಕ್ಯಾರಿ ಆಗಬಹುದು. ಜೊತೆಗೆ ಹೀಗೆ ಎರಡು ಬೇರೆ ಬೇರೆ ಜೆನಿಟಿಕಲ್ ಕಾಯಿಲೆಗಳು ಅಪ್ಪಿ ತಪ್ಪಿ ಒಂದಾದರೆ ಹೊಸದೊಂದು ಕಾಯಲೆ ಹುಟ್ಟಿಕೊಳ್ಳುವ ಅಪಾಯವೂ ಸಹ ಇದ್ದೇ ಇದೆ.ಈ ಒಂದು ವಿಚಾರವಾಗಿ ಸಂಶೋದಕರು ಇನ್ನಷ್ಟು ರಿಸರ್ಚ್ ಮಾಡಬೇಕಾಗಿದೆ. ಇದೆಲ್ಲ ಹೊರತು ಪಡಿಸಿ, ಲಸಿಕೆ ಒಬ್ಬನ ಸಂಪೂರ್ಣ ಡಿ.ಎನ್.ಎ ರೂಪವನ್ನೆ ಬದಲಾಯಿಸಿ ಬಿಟ್ಟರೆ. ಆ ವ್ಯಕ್ತಿಯ ಮುಂದಿನ ಜನರೇಷನ್ ಅಲ್ಲಿಗೆ ಮುಕ್ತಾಯವಾಗಿ ಬಿಡಬಹುದು.

ಕಳೆದ ವರ್ಷ ಜೆನಿಟಿಕಲ್ ಸಂಶೋದನೆಯಲ್ಲಿ ಬಹು ದೊಡ್ಡ ಯಶಸ್ಸು ಕಂಡಿದ್ದ ಇಬ್ಬರು ವಿಜ್ಞಾನಿಗಳಿಗೆ ನೋಬಲ್ ಪುರಸ್ಕಾರ ದೊರಕಿದೆ. ಈ ಇಬ್ಬರು ಹಲವು ವರ್ಷಗಳಿಂದ ಬ್ಯಾಕ್ಟೀರಿಯದಿಂದ ಹರಡುತ್ತಿದ್ದ ಕಾಯಿಲೆಗೆ ಮುಕ್ತಿ ಕೊಡಬೇಕೆಂದು ಸಂಶೋಧನೆಗೆ ಇಳಿದ್ದಿದ್ದಾರೆ. CRISPR gene editing ಎನ್ನುವ ಇವರ ಈ ಸಂಶೋದನೆ ವಿಶ್ವದಲ್ಲಿ ಕಾಡುವ ಬ್ಯಾಕ್ಟೀರಿಯ ಸಮಸ್ಯೆಗಳಿಗೆ ಮುಕ್ತಿ ಹಾಡಿದೆ. ಆ್ಯಂಟಿ ಬ್ಯಾಕ್ಟೀರಿಯಲ್ ಜೀನ್ ಅಂಶವನ್ನು ಪಡೆದು ನಮ್ಮ ದೇಹದ ಜೆನಿಟಿಕಲ್ ಯೋಜನೆಗೆ ಸೇರಿಸಿ ಬ್ಯಾಕ್ಟೀರಿಯದಿಂದ ಅನುಭವಿಸಬಹುದಾದ ತೊಂದರೆ ಇಲ್ಲದ ಹಾಗೆ ಮಾಡಿ ಬಿಟ್ಟಿದ್ದರು. ಈ ಕಾರಣಕ್ಕೆ ಇವರಿಗೆ ನೋಬಲ್ ಸಿಕ್ಕಿರ ಬಹುದು. ಇದಾದ ಬಳಿಕ ಹಲವು ಜೆನಿಟಿಕಲ್ ಸಂಶೋದಕರು ತಮ್ಮ ಐಡಿಯಾಗಳನ್ನು ಮುಂದಿಡುತ್ತಿದ್ದಾರೆ.

ಅಷ್ಟೆ ಅಪಾಯಕರವೂ ಹೌದು
ಈ ಸೂಪರ್ ಹೀರೋ ಲಸಿಕೆ ಸಧ್ಯ ಸಂಶೋದನ ಹಂತ ಮುಗಿಸಿ ಪ್ರಾಯೋಗಿಕ ಹಂತಕ್ಕೆ ಕಾಲಿಟ್ಟಿದೆ. ಈ ಪ್ರಯೋಗ ಯಶಸ್ಸನ್ನು ಕಂಡ ಬಳಿಕ 2026 ರಿಂದ ಮಾರುಕಟ್ಟೆಗೆ ಬಿಡುತ್ತೆವೆ ಎಂದು ಸ್ಟಾನ್ ಫೋರ್ಡ್ ಯುನಿವರ್ಸಿಟಿಯ ವಿಜ್ಞಾನಿಗಳ ಹೇಳ್ತಾ ಇದ್ದಾರೆ. ಈ ಲಸಿಕೆಗೆ ಇನ್ನು 10 ರಿಂದ 15 ವರ್ಷಗಳಲ್ಲಿ ಒಳ್ಳೆ ಡಿಮ್ಯಾಂಡ್ ಬರಲಿದೆ ಎನ್ನುವ ವಿಶ್ವಾಸವನ್ನು ಹೊಂದಿದ್ದಾರೆ. ಇನ್ನು ಇದೆ ಸಂಶೋದಕರು ಮನುಷ್ಯ, ಕಾಯಿಲೆಗಳಿಂದ ಮಾತ್ರವಲ್ಲದೆ, ಮಾನಸಿಕವಾಗಿ ಬಳಲುವುದನ್ನು ತಡೆಗಟ್ಟಲು ಇದೆ ಲಸಿಕೆಯ ಮುಂದುವರೆದ ಭಾಗವನ್ನು ಟಾರ್ಗೆಟ್ ಆಗಿ ಇಟ್ಟುಕೊಂಡಿದ್ದಾರೆ. ಆದರೆ ಒಬ್ಬನ ದೇಹದ ಸಂಪೂರ್ಣ ದೇಹ ಲಕ್ಷಣ ಹಾಗೂ ಗುಣಗಳನ್ನು ಬದಲಾಗಿಸೋದು ಎಷ್ಟರ ಮಟ್ಟಿಗೆ ಸರಿ? ಮನುಷ್ಯನಿಗೆ ಸಾವು ಅನ್ನೋದು ನಿಶ್ಚಿತ.  ಈ ಪ್ರಕೃತಿ ಸಹಜ ಸಾವುಗಳನ್ನು ತಡೆಯುವುದು ನಿಜಕ್ಕೂ ಪ್ರಾಕೃತಿಕ ವಿರೋಧ ಕಾರ್ಯ ಅನ್ನೋದು ಹಲವರ ವಾದವೂ ಆಗಿದೆ.

ತಂತ್ರಜ್ಞಾನ, ಆಧುನಿಕತೆ ಇವೆಲ್ಲ, ಎಷ್ಟು ಉಪಯೋಗಕರವೋ, ಅಷ್ಟೆ ಅಪಾಯಕರವೂ ಹೌದು. ಈ ಸೂಪರ್ ಹೀರೋ ವ್ಯಾಕ್ಸಿನ್ ಮುಂದೇನು ಆಗುತ್ತೋ ನೋಡ್ಬೇಕು. ಆದ್ರೆ ಒಂದು ಹೋಗಿ ಇನ್ನೊಂದಾಯ್ತು ಎನ್ನುವಂತಾಗದಿದ್ರೆ ಅಷ್ಟೆ ಸಾಕು.

ಇದನ್ನೂ ಓದಿ: 11ನೇ ವರ್ಷಕ್ಕೆ ಪದವಿ ಕಂಪ್ಲೀಟ್​​.. ಸಾವಿಗೇ ಮದ್ದು ಕಂಡು ಹಿಡಿಯಲು ಹೊರಟ ಬಾಲಕನ ಸ್ಫೂರ್ತಿದಾಯಕ ಕತೆ

The post ಸಾಧಾರಣ ಮನುಷ್ಯನನ್ನೂ ಸೂಪರ್​ ಮ್ಯಾನ್​ ಮಾಡುತ್ತೆ ಈ ವ್ಯಾಕ್ಸಿನ್..! appeared first on News First Kannada.

Source: newsfirstlive.com

Source link