ವಾರಣಾಸಿಗೆ ಮೋದಿ ‘ಬಂಪರ್ ಗಿಫ್ಟ್’; ಬರೋಬ್ಬರಿ ₹1500 ಕೋಟಿ ಯೋಜನೆಗೆ ಇಂದು ಚಾಲನೆ

ವಾರಣಾಸಿಗೆ ಮೋದಿ ‘ಬಂಪರ್ ಗಿಫ್ಟ್’; ಬರೋಬ್ಬರಿ ₹1500 ಕೋಟಿ ಯೋಜನೆಗೆ ಇಂದು ಚಾಲನೆ

ವಾರಣಾಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾರಾಣಸಿ ಪ್ರವಾಸ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡುವುದರ ಜೊತೆ, ಕೆಲ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ಜಪಾನ್‌ ಹಾಗೂ ಭಾರತದ ನಡುವಿನ ಸ್ನೇಹದ ಸಂಕೇತವಾಗಿರುವ ‘ರುದ್ರಾಕ್ಷ‘ ಕನ್ವೆಂಶನ್‌ ಸೆಂಟರ್​ನ್ನೂ ಅವ್ರು ಉದ್ಘಾಟಿಸಲಿದ್ದಾರೆ.

blank

ಮಧ್ಯಾಹ್ನ 12:15ಕ್ಕೆ ಜಪಾನ್ ನೆರವಿನಿಂದ ನಿರ್ಮಿಸಲಾದ ಇಂಟರ್‌ ನ್ಯಾಷನಲ್ ಕೋ ಆಪರೇಷನ್ ಅಂಡ್‌ ಕನ್ವೆಂಷನ್ ಸೆಂಟರ್‌ ‘ರುದ್ರಾಕ್ಷ್’ಉದ್ಘಾಟಿಸಲಿದ್ದಾರೆ. ಅಷ್ಟೇ ಅಲ್ಲ, ಈ ಉದ್ಘಾಟನೆಗೂ ಮುಂಚೆ  ಅಂದರೆ 11 ಗಂಟೆ ಸುಮಾರಿಗೆ ಬಿಎಚ್‌ಯುನಲ್ಲಿ ನೂರು ಹಾಸಿಗೆಯಳ್ಳ ಎಂಸಿಹೆಚ್​ ವಿಭಾಗ ಜೊತೆಗೆ ಗೋದೌಲಿಯಾದಲ್ಲಿ ಒಂದು ಬಹುಮಹಡಿ ಪಾರ್ಕಿಂಗ್. ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಬೋಟ್‌ಗಳು ಮತ್ತು ವಾರಣಾಸಿ-ಗಾಜಿಪುರ ಹೆದ್ದಾರಿಯಲ್ಲಿ ತ್ರಿಪಥದ ಫ್ಲೈಓವರ್ ಸೇರಿದಂತೆ ವಿವಿಧ ಸಾರ್ವಜನಿಕ ಯೋಜನೆ ಹಾಗೂ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

blank

ಇದರ ಜೊತೆಗೂ ಸೆಂಟರ್ ಫಾರ್ ಸ್ಕಿಲ್ ಮತ್ತು ಟೆಕ್ನಿಕಲ್ ಸಪೋರ್ಟ್ ಆಫ್ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಸಿಐಪಿಇಟಿ), ಜಲ್ ಜೀವನ್ ಮಿಷನ್ ಅಡಿಯಲ್ಲಿ 143 ಗ್ರಾಮೀಣ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

blank

ಈ ಬಗ್ಗೆ, ಪ್ರಧಾನಿ ನಿನ್ನೆಯೇ ತಮ್ಮ ಟ್ವಿಟರ್​ ಖಾತೆಯಲ್ಲಿ, ತಾವು ಉದ್ಘಾಟನೆ ಮಾಡಲಿರೋ ವಿಚಾರವನ್ನ ತಿಳಿಸಿದ್ದಾರೆ.

 

The post ವಾರಣಾಸಿಗೆ ಮೋದಿ ‘ಬಂಪರ್ ಗಿಫ್ಟ್’; ಬರೋಬ್ಬರಿ ₹1500 ಕೋಟಿ ಯೋಜನೆಗೆ ಇಂದು ಚಾಲನೆ appeared first on News First Kannada.

Source: newsfirstlive.com

Source link