#TokyoOlympics: ಆಳ್ವಾಸ್​​ನ ಇಬ್ಬರು ವಿದ್ಯಾರ್ಥಿನಿಯರು ಒಲಿಂಪಿಕ್ಸ್​ಗೆ ಆಯ್ಕೆ

#TokyoOlympics: ಆಳ್ವಾಸ್​​ನ ಇಬ್ಬರು ವಿದ್ಯಾರ್ಥಿನಿಯರು ಒಲಿಂಪಿಕ್ಸ್​ಗೆ ಆಯ್ಕೆ

ದಕ್ಷಿಣ ಕನ್ನಡ: ಜಪಾನ್​​ ಟೋಕಿಯೋ ಒಲಿಂಪಿಕ್ಸ್​​ಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್​​ ಪ್ರತಿಷ್ಠಾನದ ಇಬ್ಬರು ಮಾಜಿ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಧನಲಕ್ಷ್ಮೀ ಹಾಗೂ ಶುಭಾ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳಾಗಿದ್ದಾರೆ. ಭಾರತ ತಂಡದ 4×400 ಮೀಟರ್‌ ಮಿಕ್ಸೆಡ್ ರಿಲೇ ತಂಡವನ್ನು ಪ್ರತಿನಿಧಿಸಲಿದ್ದಾರೆ. 2016-17ನೇ ಶೈಕ್ಷಣಿಕ ವರ್ಷದಲ್ಲಿ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಾಗಿದ್ದ ಇಬ್ಬರು, ಮೂಲತಃ ತಮಿಳುನಾಡಿನ ತಿರುಚಿ ಮೂಲದವರು.

ಇದನ್ನೂ ಓದಿ: ಒಲಂಪಿಕ್ಸ್ ಮೇಲೆ ಮತ್ತೆ ಕೊರೊನಾ ಕರಿನೆರಳು.. ವೀಕ್ಷಕರಿಗಿಲ್ಲ ಅವಕಾಶ

ಒಲಿಂಪಿಕ್ಸೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್​ ಆಳ್ವಾ ಘೋಷಿಸಿದ್ದಾರೆ. ಆಳ್ವಾಸ್ ವಿದ್ಯಾಸಂಸ್ಥೆಯ ಹಲವಾರು ಕ್ರೀಡಾ ವಿದ್ಯಾರ್ಥಿಗಳು ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಸಾಧನೆ ಮಾಡಿದ್ದಾರೆ. ಅವರ ಸಾಲಿನಲ್ಲಿ ಇದೀಗ ಧನಲಕ್ಷ್ಮೀ ಹಾಗೂ ಶುಭಾ ಕೂಡ ಸೇರಿದ್ದಾರೆ. ಅಂದ್ಹಾಗೆ ಒಲಿಂಪಿಕ್ಸ್​ ಜುಲೈ 23 ರಿಂದ ಆಗಸ್ಟ್ 28 ವರೆಗೆ ನಡೆಯಲಿದೆ.

ಇದನ್ನೂ ಓದಿ: ಟೊಕಿಯೋ ಒಲಿಂಪಿಕ್ಸ್​ ಸ್ಪರ್ಧಿಗಳಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

The post #TokyoOlympics: ಆಳ್ವಾಸ್​​ನ ಇಬ್ಬರು ವಿದ್ಯಾರ್ಥಿನಿಯರು ಒಲಿಂಪಿಕ್ಸ್​ಗೆ ಆಯ್ಕೆ appeared first on News First Kannada.

Source: newsfirstlive.com

Source link