ಬಿಬಿಎಂಪಿ ಈ ವ್ಯಾಪ್ತಿಯಲ್ಲಿ ಹೆಚ್ಚಿದ ಕೊರೊನಾ.. ಕ್ರಮ ತೆಗೆದುಕೊಳ್ಳದಿದ್ರೆ ಭಾರೀ ಡೇಂಜರ್

ಬಿಬಿಎಂಪಿ ಈ ವ್ಯಾಪ್ತಿಯಲ್ಲಿ ಹೆಚ್ಚಿದ ಕೊರೊನಾ.. ಕ್ರಮ ತೆಗೆದುಕೊಳ್ಳದಿದ್ರೆ ಭಾರೀ ಡೇಂಜರ್

ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಳವಾಗಿದ್ದು ಆತಂಕ ಸೃಷ್ಟಿಯಾಗಿದೆ. ನಗರದ 8 ವಲಯಗಳ ಪೈಕಿ ದಕ್ಷಿಣ ವಲಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿದೆ. ಅನ್​ಲಾಕ್ ಆದ ಬೆನ್ನಲ್ಲೇ ಸೋಂಕಿನ ಹರಡುವಿಕೆ ಪ್ರಮಾಣ ಹೆಚ್ಚಾಗಿದ್ದು ಕಳೆದ 10 ದಿನಗಳಲ್ಲಿ ದಕ್ಷಿಣ ವಲಯದಲ್ಲಿ 545 ಪ್ರಕರಣಗಳು ದಾಖಲಾಗಿವೆ.

ಇಷ್ಟು ದಿನ ಬೊಮ್ಮನಹಳ್ಳಿ, ಮಹದೇವಪುರ ಈ ಎರಡು ವಲಯಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕೊರೊನಾ ಇಲ್ಲಿ ಮಾತ್ರ ಆತಂಕ ಸೃಷ್ಟಿಸಿತ್ತು. ಆದರೆ ಈ ವಲಯಗಳಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿ, ದಕ್ಷಿಣ ವಲಯದಲ್ಲಿ ಮಾತ್ರ ಏರಿಕೆ ಕಂಡಿದೆ. ಹೀಗಾಗಿ ದಕ್ಷಿಣ ವಲಯದಲ್ಲಿ ಮತ್ತೆ ಮೈಕ್ರೋ ಕಂಟೈನ್ಮೆಂಟ್ ಝೋನ್​ ಜಾರಿ ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಹಿಂದೆ ಬೊಮ್ಮನಹಳ್ಳಿ, ಮಹದೇವಪುರದಲ್ಲೂ ಮೈಕ್ರೋ ಕಂಟೈನ್ಮೆಂಟ್ ಝೋನ್ ಜಾರಿ ಮಾಡಲಾಗಿತ್ತು. ಅದರಿಂದ ಸೋಂಕು ಇಳಿಮುಖ ಕಂಡಿತ್ತು, ಅದೇ ಮಾದರಿಯನ್ನು ಈಗ ದಕ್ಷಿಣ ವಲಯದಲ್ಲಿ ಜಾರಿ ಮಾಡಲಾಗುವುದು ಎಂದು ತಿಳಿದು ಬಂದಿದೆ.

ದಿಢೀರ್ ಕೇಸ್ ಹೆಚ್ಚಳವೇಕೆ?
ಅನ್​ಲಾಕ್ ಮಾಡಿದ ಬಳಿಕ ಈ ಭಾಗದಲ್ಲಿ ಜನರ ಓಡಾಟ ತೀರಾ ಹೆಚ್ಚಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಗಳಿಂದಲೂ ನಗರಕ್ಕೆ ಹೆಚ್ಚಿನ ಸಂಖ್ಯೆಯ ಜನ ಆಗಮಿಸ್ತಿದ್ದಾರೆ. ಹೀಗಾಗಿ ದಕ್ಷಿಣ ವಲಯದಲ್ಲಿನ ಮಾರ್ಕೆಟ್​ಗಳ ಸಂಖ್ಯೆ ಹೆಚ್ಚಿದ್ದು, ವ್ಯಾಪಾರ ವಹಿವಾಟಿನಿಂದ ಜನಜಂಗುಳಿ ಹೆಚ್ಚಳವಾಗುತ್ತಿದೆ. ಮತ್ತು ಆರಂಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರ ನಿರ್ಲಕ್ಷ್ಯವೇ ಸೋಂಕು ಹೆಚ್ಚಳವಾಗಲು ಕಾರಣ ಎನ್ನಲಾಗಿದೆ.

ನಿಯಂತ್ರಣಕ್ಕೆ ಬಿಬಿಎಂಪಿ ಕ್ರಮವೇನು?
ಸೋಂಕಿನ ನಿಯಂತ್ರಣಕ್ಕೆ ಬಿಬಿಎಂಪಿ ಕೆಲವೊಂದು ಪ್ಲಾನ್​ ಮಾಡಿಕೊಂಡಿದೆ. ಹೆಚ್ಚು ಸೋಂಕು ಕಾಣಿಸಿಕೊಂಡ ಏರಿಯಾಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಝೋನ್ ಜಾರಿ ಮಾಡಿ ಜನರ ತಪಾಸಣೆ ಮಾಡಿ, ಮನೆಗಳಲ್ಲೇ ಐಸೊಲೇಷನ್ ಮಾಡುವುದು. ಜನ ಸಂದಣಿ ಕಂಟ್ರೋಲ್ ಮಾಡೋ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಕೋವಿಡ್-19 ಪರೀಕ್ಷೆಯ ಸಂಖ್ಯೆಯನ್ನ ಹೆಚ್ಚಿಸಿ ಟ್ರಾವೆಲ್​ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಮುಂದಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ.

The post ಬಿಬಿಎಂಪಿ ಈ ವ್ಯಾಪ್ತಿಯಲ್ಲಿ ಹೆಚ್ಚಿದ ಕೊರೊನಾ.. ಕ್ರಮ ತೆಗೆದುಕೊಳ್ಳದಿದ್ರೆ ಭಾರೀ ಡೇಂಜರ್ appeared first on News First Kannada.

Source: newsfirstlive.com

Source link