ಶಾಸಕ ಪುಟ್ಟರಾಜುಗೆ ಸೇರಿದ ಕಲ್ಲುಕ್ವಾರಿಗೆ ಸುಮಲತಾ ಭೇಟಿ; ಹೈಡ್ರಾಮಾ

ಶಾಸಕ ಪುಟ್ಟರಾಜುಗೆ ಸೇರಿದ ಕಲ್ಲುಕ್ವಾರಿಗೆ ಸುಮಲತಾ ಭೇಟಿ; ಹೈಡ್ರಾಮಾ

ಮಂಡ್ಯ: ಅಕ್ರಮ ಕಲ್ಲುಕ್ವಾರಿ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅಂಬರೀಶ್ ನಿನ್ನೆ ಶಾಸಕ ಪುಟ್ಟರಾಜು ಅವರಿಗೆ ಸೇರಿದ ಕಲ್ಲು ಕ್ವಾರಿಗೆ ಸಂಸದೆ ಸುಮಲತಾ ಭೇಟಿ ನೀಡಿದ್ದರು. ಅಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡರು.

blank

ಪುಟ್ಟರಾಜು ಅವರ ಕಲ್ಲುಕ್ವಾರಿಗೆ ಭೇಟಿ ನೀಡುತ್ತಿರೋದು ಗೊತ್ತಾಗುತ್ತಿದ್ದಂತೆ ಶಾಸಕರ ಬೆಂಬಲಿಗರೂ ಕೂಡ ದೌಡಾಯಿಸಿದ್ದರು. ಇಲ್ಲಿ ಯಾರೂ ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ. ಪಕ್ಕದ ಕ್ವಾರಿ ಬಿಟ್ಟು ಇಲ್ಲಿಗೆ ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

blank

ಕೆಲ ಕಾಲ ಪೋಲಿಸರು ಹಾಗೂ ಶಾಸಕ ಪುಟ್ಟರಾಜು ಬೆಂಬಲಿಗರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಸುಮಲತಾ ವಿರುದ್ಧ ಧಿಕ್ಕಾರ ಕೂಗಿ ಪುಟ್ಟರಾಜು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು.

The post ಶಾಸಕ ಪುಟ್ಟರಾಜುಗೆ ಸೇರಿದ ಕಲ್ಲುಕ್ವಾರಿಗೆ ಸುಮಲತಾ ಭೇಟಿ; ಹೈಡ್ರಾಮಾ appeared first on News First Kannada.

Source: newsfirstlive.com

Source link