ಬೆಳ್ಳಂಬೆಳಗ್ಗೆಯೇ ಎಸಿಬಿ ಶಾಕ್; 9 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 40 ಕಡೆ ದಾಳಿ

ಬೆಳ್ಳಂಬೆಳಗ್ಗೆಯೇ ಎಸಿಬಿ ಶಾಕ್; 9 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 40 ಕಡೆ ದಾಳಿ

ಬೆಂಗಳೂರು: ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 9 ಅಧಿಕಾರಿಗಳಿಗೆ ಬ್ರಷ್ಟಾಚಾರ ನಿಗ್ರಹ ದಳ ಬೆಳ್ಳಂಬೆಳಗ್ಗೆಯೇ ಶಾಕ್ ನೀಡಿದೆ. ಬರೋಬ್ಬರಿ 300ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು 40ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಯಾವೆಲ್ಲಾ ಜಿಲ್ಲೆಯಲ್ಲಿ ದಾಳಿ?

 • ಬೆಂಗಳೂರು
 • ಮೈಸೂರು
 • ಮಂಡ್ಯ
 • ವಿಜಯಪುರ
 • ಮಂಗಳೂರು
 • ಉಡುಪಿ
 • ಕೋಲಾರ
 • ಚಿತ್ರದುರ್ಗ
 • ಬಳ್ಳಾರಿ

ಯಾರೆಲ್ಲಾ ನಿವಾಸ ಹಾಗೂ ಮನೆಗಳ ಮೇಲೆ ದಾಳಿ?

 • ಜಿ. ಶ್ರೀಧರ್ -ಮಂಗಳೂರು ನಗರಾಭಿವೃದ್ಧಿ ಘಟಕ -ಡಿಸಿ ಕಚೇರಿ
 • ಕೃಷ್ಣ.ಎಸ್ -ಹೆಬ್ಸೂರು ಇಇ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ-ಉಡುಪಿ
 • ಆರ್.ಪಿ.ಕುಲಕರ್ಣಿ -ಸಿಇ-KRIDCL (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್-ಬೆಂಗಳೂರು)
 • ಹೆಚ್.ಆರ್.ಕೃಷ್ಣಪ್ಪ -ಸಹಾಯಕ ನಿರ್ದೇಶಕ- ಮಾಲೂರು ನಗರ ನಗರ ಯೋಜನಾ ಪ್ರಾಧಿಕಾರ, ಕೋಲಾರ
 • ಸುರೇಶ್ ಮೋಹ್ರೆ -JE PRE ಬೀದರ್
 • ವೆಂಕಟೇಶ್ ಟಿ -DCF ಸಾಮಾಜಿಕ ಅರಣ್ಯ-ಮಂಡ್ಯ
 • ಸಿದ್ದರಾಮ ಮಲ್ಲಿಕಾರ್ಜುನ್ -AEE ಹೆಸ್ಕಾಂ ವಿಜಯಪುರ
 • ಎ.ಕೃಷ್ಣಮೂರ್ತಿ -ಹಿರಿಯ ಮೋಟಾರು ವಾಹನ ನಿರೀಕ್ಷಕರು-ಕೋರಮಂಗಲ
 • ಎ.ಎನ್.ವಿಜಯ್​ ಕುಮಾರ್​ -ಎಲೆಕ್ಟ್ರಿಕಲ್ ಇನ್ಸ್‌ಪೆಕ್ಟರ್-ಬಳ್ಳಾರಿ

ಕೋಲಾರ ಜಿಲ್ಲೆಯ ಮಾಲೂರು‌ ನಗರ ಸಭೆಯ ಯೋಜನಾ ನಿರ್ದೇಶಕ ಹೆಚ್.ಆರ್.ಕೃಷ್ಣಪ್ಪ ನಿವಾಸ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆ ಹಾಗೂ ಆಸ್ತಿ‌ಪತ್ರಗಳನ್ನ ಪರಿಶೀಲನೆ ಮಾಡ್ತಿದ್ದಾರೆ. ಇವರ ಸ್ವ-ಗ್ರಾಮವಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ, ಮಾಲೂರು ಮನೆ, ಬೆಂಗಳೂರಿನ ವಿಜಯನಗರದಲ್ಲಿರುವ ಮನೆ ಮತ್ತು ‌ಕಚೇರಿ ಐದು ಕಡೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾವಣಗೆರೆ ಎಸಿಬಿ ಎಸ್ಪಿ ಜಯಪ್ರಕಾಶ್​ ನೇತ್ರತ್ವದ ತಂಡದಿಂದ ದಾಳಿ ನಡೆದಿದೆ.

The post ಬೆಳ್ಳಂಬೆಳಗ್ಗೆಯೇ ಎಸಿಬಿ ಶಾಕ್; 9 ಅಧಿಕಾರಿಗಳ ಮನೆ, ಕಚೇರಿ ಸೇರಿದಂತೆ 40 ಕಡೆ ದಾಳಿ appeared first on News First Kannada.

Source: newsfirstlive.com

Source link