ಮೇಕೆದಾಟು ಯೋಜನೆಗೆ ಪುದುಚೇರಿಯೂ ಅಡ್ಡಗಾಲು -ಟಾಪ್​ 10 ಸುದ್ದಿಗಳ ಕ್ವಿಕ್​ರೌಂಡಪ್​

ಮೇಕೆದಾಟು ಯೋಜನೆಗೆ ಪುದುಚೇರಿಯೂ ಅಡ್ಡಗಾಲು -ಟಾಪ್​ 10 ಸುದ್ದಿಗಳ ಕ್ವಿಕ್​ರೌಂಡಪ್​

ಮೇಕೆದಾಟು ಯೋಜನೆಗೆ ಮತ್ತೊಂದು ವಿಘ್ನ

ಮೇಕೆದಾಟು ಯೋಜನೆಗೆ ಪುದುಚೇರಿಯೂ ಅಡ್ಡಗಾಲು -ಟಾಪ್​ 10 ಸುದ್ದಿಗಳ ಕ್ವಿಕ್​ರೌಂಡಪ್​
ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ಬಳಿಕ ಪುದುಚೇರಿ ಸರ್ಕಾರದಿಂದಲೂ ವಿರೋಧ ವ್ಯಕ್ತವಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ವಿದ್ಯುತ್ ಉತ್ಪಾದನೆ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಡ್ಯಾಂ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಆದ್ರೆ ಇದಕ್ಕೆ ತಮಿಳುನಾಡು ಬಳಿಕ ಪುದುಚೇರಿಯ ಎಐಎನ್​ಆರ್​ಸಿ ನೇತೃತ್ವದ ಎನ್​ಡಿಎ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಅದರಂತೆ ಪುದುಚೇರಿ ಮುಖ್ಯಮಂತ್ರಿ ಎನ್​.ರಂಗಸ್ವಾಮಿ ಅವರು ಯೋಜನೆಗೆ ತಡೆ ನೀಡುವಂತೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆಯಲು ಮುಂದಾಗಿದೆ. ಕರ್ನಾಟಕದ ಮೇಕೆದಾಟಿನಲ್ಲಿ ಕಾವೇರಿ ನೀರಿಗೆ ಜಲಾಶಯ ನಿರ್ಮಿಸಿದ್ರೆ ಪುದುಚೇರಿಯ ಕೆಲ ಪ್ರದೇಶಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆ. ಹೀಗಾಗಿ ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಬಾರದು ಎಂಬುದು ಪುದುಚೇರಿ ಸರ್ಕಾರದ ವಾದವಾಗಿದೆ. ಈ ಮಧ್ಯೆ, ನಾಳೆ ತಮಿಳುನಾಡು ಸರ್ವಪಕ್ಷ ನಿಯೋಗವು ಪ್ರಧಾನಿಯನ್ನ ಭೇಟಿ ಮಾಡಲಿದೆ.

ಕೊರ್ಟ್​​ಗೆ ಶರಣಾದ ರೌಡಿ ಶೀಟರ್ ಬೇಕರಿ ರಘು

blank
ಕುಖ್ಯಾತ ರೌಡಿಶೀಟರ್ ರಾಘವೇಂದ್ರ ಅಲಿಯಾಸ್ ಬೇಕರಿ ರಘು ಕೋರ್ಟ್​​ಗೆ ಶರಣಾಗಿದ್ದಾರೆ. ಸುಮಾರು ಎಂಟು ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಶೀಟರ್ ಬೇಕರಿ ರಘು ಬೆಂಗಳೂರಿನ 31ನೇ ಎಸಿಎಂಎಂ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಬ್ಯಾಟರಾಯನಪುರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ರಘು ಡಕಾಯಿತಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ. 8 ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಈಗ ಇದ್ದಕ್ಕಿದ್ದಂತೆ ನ್ಯಾಯಾಲಯದ ಎದುರು ಈತ ಶರಣಾಗಿರುವುದು ಅಚ್ಚರಿ ಹುಟ್ಟಿಸಿದೆ.

ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ

ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪೂಜಾ ಹಿರೇಮಠ ಹಾಗೂ ನಾರಾಯಣ್ ಮೇಲೆ ಯುವತಿ ಸೇರಿ ಮೂವರು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಸದ್ಯ, ಗಾಯಗೊಂಡ ಪೊಲೀಸ್ ಸಿಬ್ಬಂದಿ ಪೂಜಾ ಹಿರೇಮಠ್​​ ಹಾಗು ನಾರಾಯಣ್​ರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿದ ನೋವೆಲ್ ಸಿಕ್ವೇರಾ, ಜಾನ್‌ ಸಿಕ್ವೇರಾ ಹಾಗೂ ಯುವತಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಧಾನಿ ಮೋದಿಯಿಂದ ಇಂದು ವಾರಾಣಸಿ ಪ್ರವಾಸ

blank
ಪ್ರಧಾನಿ ನರೇಂದ್ರ ಮೋದಿ ಇಂದು ವಾರಾಣಸಿ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಸುಮಾರು ₹744 ಕೋಟಿ ರೂ. ವೆಚ್ಚದ ವಿಭಿನ್ನ ಯೋಜನೆಗಳನ್ನು ಉದ್ಘಾಟಿಸಿದ್ರೆ, 839 ಕೋಟಿ ರೂಪಾಯಿ ವೆಚ್ಚದ ಹಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಿದ್ದಾರೆ. ಇವುಗಳಲ್ಲಿ ರುದ್ರಾಕ್ಷ ಕನ್ವೆಂಶನ್‌ ಸೆಂಟರ್‌ ಕೂಡಾ ಇದೆ. ಈ ಕೇಂದ್ರದಲ್ಲಿ 108 ರುದ್ರಾಕ್ಷಗಳನ್ನು ಸ್ಥಾಪಿಸಲಾಗಿದ್ದು, ರಾತ್ರಿ ವೇಳೆ LED ದೀಪಗಳಿಂದ ಜಗಮಗಿಸುತ್ತದೆ. ಅಲ್ಲದೇ ಬೆಳಗ್ಗೆ 11 ಗಂಟೆಗೆ ಬಿಎಚ್‌ಯುನಲ್ಲಿ ನೂರು ಹಾಸಿಗೆಯ ಎಂಸಿಎಚ್‌ ವಿಭಾಗ, ಗಂಗಾ ನದಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೋ-ರೋ ಬೋಟ್‌ಗಳು ಮತ್ತು ವಾರಣಾಸಿ-ಗಾಜಿಪುರ ಹೆದ್ದಾರಿಯಲ್ಲಿ ತ್ರಿಪಥದ ಫ್ಲೈಓವರ್ ಸೇರಿ ವಿವಿಧ ಸಾರ್ವಜನಿಕ ಯೋಜನೆ ಹಾಗೂ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ.

ಲೋಕಸಭೆ ಕಾಂಗ್ರೆಸ್ ನಾಯಕರಾಗಿ ಅಧೀರ್‌ ಮುಂದುವರಿಕೆ
ಸಂಸತ್ತಿನ ಮುಂಗಾರು ಅಧಿವೇಶನವನ್ನು ವಿಪಕ್ಷ ನಾಯಕನ ಸ್ಥಾನದಲ್ಲಿ ಕುಳಿತು ಅಧೀರ್‌ ರಂಜನ್ ಚೌಧರಿಯೇ ಮುನ್ನಡೆಸಲಿದ್ದಾರೆ. ಇದೇ ಜುಲೈ 19 ರಿಂದ ಅಗಸ್ಟ್​ 13ರ ವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ. ಪಶ್ಚಿಮ ಬಂಗಾಳದಿಂದ ಲೋಕಸಭೆ ಸದಸ್ಯರಾಗಿರುವ ಅಧೀರ್‌ ರಂಜನ್‌ ಬಗ್ಗೆ ಪಕ್ಷದೊಳಗೆ ಮೊದಲಿನಿಂದಲೂ ಅಸಮಾಧಾನ ಇತ್ತು. ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಅದು ಇನ್ನಷ್ಟು ತೀವ್ರವಾಗಿತ್ತು. ಹೀಗಾಗಿ ಅವರನ್ನು ಬದಲಸಿ ಅವರ ಸ್ಥಾನದಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ ಸ್ಥಾನ ನೀಡಬೇಕು ಅಂತಲ್ಲಾ ಸೃಷ್ಟಿಯಾಗಿತ್ತು. ಆದ್ರೆ ಈ ಎಲ್ಲಾ ಕೂಗಿಗೆ ಕೇರ್​ ಮಾಡ ವರಿಷ್ಠರು ಅವರನ್ನೇ ವಿಪಕ್ಷ ನಾಯಕರನ್ನಾಗಿ ಮುಂದುವರೆಸಿದ್ದಾರೆ..

3ನೇ ಅಲೆಗೆ ಕಾರಣವಾಗಲಿದ್ಯಾ ಡೆಲ್ಟಾ ರೂಪಾಂತರಿ?

blank
ಡೆಲ್ಟಾ ರೂಪಾಂತರಿ ಭಾರತಕ್ಕೆ ಮುಂದಿನ ದಿನಗಳಲ್ಲಿ 3ನೇ ಅಲೆಯನ್ನ ತಂದೊಡ್ಡಬಲ್ಲದು ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹಲವು ಕಾರಣಗಳನ್ನ ನೀಡಿರುವ ಅವರು, ದೇಶದಲ್ಲಿ ಇತ್ತೀಚಿಗೆ ಲಸಿಕೆ ವಿತರಣೆಯ ವೇಗ ಕುಂಠಿತಗೊಂಡಿದ್ದು. ದಿನಕ್ಕೆ ನಾಲ್ಕು ಮಿಲಿಯನ್ನಷ್ಟು ವಿತರಣೆಯಾಗ್ತಿದ್ದ ಲಸಿಕೆ ಇದೀಗ 3.4 ಮಿಲಿಯನ್​ಗೆ ಬಂದಿಳಿದಿದೆ. ಅಲ್ಲದೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಎರಡೂ ಡೋಸ್​ಗಳನ್ನ ಪಡೆದವರ ಪ್ರಮಾಣ ಕೇವಲ 5 ಪರ್ಸೆಂಟ್​ ಅಷ್ಟೆದೆ. ಇದಲ್ಲದೇ ದೇಶಾದ್ಯಂತ ದಾಖಲಾಗ್ತಿರುವ ಕೊರೊನಾ ಪ್ರಕರಣಗಳಲ್ಲಿ ಶೇಕಡಾ 45 ಪರ್ಸೆಂಟ್​​ನಷ್ಟು ಸೋಂಕು ಗ್ರಾಮೀಣ ಭಾಗಗಳಲ್ಲೇ ಪತ್ತೆಯಾಗ್ತಿದೆ. ಸದ್ಯ ಈ ಎಲ್ಲಾ ಬೆಳವಣಿಗಳು ದೇಶದಲ್ಲಿ 3ನೇ ಅಲೆಯ ಅಪಾಯವನ್ನ ತಂದೊಡ್ಡುವ ಸಾಧ್ಯತೆಗಳಿವೆ ಅಂತಾ ತಜ್ಞರು ತಿಳಿಸಿದ್ದಾರೆ.

ಮುಂಬೈನಲ್ಲಿ ಇಂದಿನಿಂದ ಗರ್ಭಿಣಿಯರಿಗೂ ಲಸಿಕೆ
ಮಹಾರಾಷ್ಟ್ರದ ಮುಂಬೈನಲ್ಲಿ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧಿಸಿದೆ. ಮುಂಬೈನ 34 ಕೊರೊನಾ ಲಸಿಕೆ ಕೇಂದ್ರದಲ್ಲಿ ಇಂದಿನಿಂದ ಗರ್ಭಿಣಿಯರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಈ ಲಸಿಕೆ ಅಭಿಯಾನಕ್ಕೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಚಾಲನೆ ನೀಡಲಿದ್ದಾರೆ. ಈಗಾಗಲೇ ಇದ್ರ ಬಗ್ಗೆ ಮಾತನಾಡಿರೋ ತೋಪೆ, ಕೊರೊನಾ ಸೋಂಕು ಹಾಗೂ ಕೊರೊನಾ ರೂಪಾಂತರಿಗಳಿಂದ ಗರ್ಭಿಣಿ ಹಾಗೂ ಮಕ್ಕಳಿಗೂ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು. ಇದಕ್ಕಾಗಿ ನಾವು ಗರ್ಭಿಣಿಯರಿಗೂ ಕೊರೊನಾ ಲಸಿಕೆ ನೀಡುವ ಅಭಿಯಾನ ಶುರು ಮಾಡಿದ್ದೇವೆ ಎಂದಿದ್ದಾರೆ.

ಭಾರತದಲ್ಲಿ ಲಸಿಕೆ ಪಡೆದ ಪಾಕಿಸ್ತಾನ ಮೂಲದ ಮಹಿಳೆ
ಕೋಲ್ಕತ್ತಾದಲ್ಲಿ ಪಾಕಿಸ್ತಾನ ಮೂಲದ ಮಹಿಳೆ ಕೊರೊನಾ ಲಸಿಕೆ ಪಡೆದಿದ್ದಾಳೆ. 30 ವರ್ಷದ ಸಹಾರಾ ಖೈಸರ್ ಎನ್ನುವ ಮಹಿಳೆ ಸ್ಫುಟ್ನಿಕ್ – ವಿ ಲಸಿಕೆ ತೆಗೆದುಕೊಂಡಿದ್ದಾರೆ. ಕಳೆದ ಜುಲೈ 9 ರಂದು ಕೋಲ್ಕತ್ತಾದ ಮೆಡಿಕಾ ಸೂಪರ್ ಸ್ಪೆಷಾಲಟಿ ಆಸ್ಪತ್ರೆಯಲ್ಲಿ ತನ್ನ ಗಂಡನೊಂದಿಗೆ ಬಂದಿದ್ದ ಸಹಾರಾಗೆ ವ್ಯಾಕ್ಸಿನ್​ ವಿತರಣೆಯಾಗಿದೆ. ಇನ್ನು, ಲಸಿಕೆ ಪಡೆಯುವಾಗ ಮಹಿಳೆಯ ದಾಖಲೆಗಳನ್ನು ಆಸ್ಪತ್ರೆ ಸಿಬ್ಬಂದಿ ನೋಡಿರಲಿಲ್ಲ. ವ್ಯಾಕ್ಸಿನೇಷನ್ ಆದ ಒಂದೂವರೆ ಗಂಟೆಗಳ ನಂತ್ರ ಆಸ್ಪತ್ರೆ ಸಿಬ್ಬಂದಿಗೆ ಈ ಮಾಹಿತಿ ಗೊತ್ತಾಗಿದೆ. ಅಂದಹಾಗೆ ಕೊರೊನಾ ಲಸಿಕೆ ಪಡೆಯಲು ಈಕೆ ಕೋವಿನ್ ಆ್ಯಪ್​​ನಲ್ಲೂ ರಿಜಿಸ್ಟರ್ ಮಾಡಿದ್ದಳು ಎನ್ನಲಾಗಿದೆ.. ಭಾರತೀಯ ಮೂಲದ ಯುವಕನನ್ನ ಸಹಾರಾ ಖೈಸರ್ ಮದುವೆಯಾಗಿದ್ದಾಳೆ.

ಲಡಾಖ್​ ಉಡುಗೆ ತೊಟ್ಟು ಆಮೀರ್ – ಕಿರಣ್​ ಡಾನ್ಸ್​
ಇತ್ತೀಚೆಗಷ್ಟೇ ಡಿವೋರ್ಸ್​​ ನೀಡಿ ಬೇರೆ ಬೇರೆಯಾಗಿದ್ದ ನಟ ಆಮೀರ್ ಖಾನ್ ಹಾಗೂ ಕಿರಣ್ ರಾವ್​ ಮತ್ತೆ ಸುದ್ದಿಯಲ್ಲಿದ್ದಾರೆ. ಆಮೀರ್ ಅವರ ಬಹುನಿರೀಕ್ಷಿತ ಲಾಲ್​ ಸಿಂಗ್ ಛಡ್ಡಾ ಚಿತ್ರದ ಶೂಟಿಂಗ್​ಗಾಗಿ ಚಿತ್ರತಂಡ ಲಡಾಖ್​ನಲ್ಲಿ ಬೀಡುಬಿಟ್ಟಿದೆ. ಆದ್ರೆ, ಇದೇ ವೇಳೆ ಅಮೀರ್ ಹಾಗೂ ಕಿರಣ್ ಅವರನ್ನ ಲಡಾಖ್​ನ ವಖಾ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ. ಅಲ್ಲದೇ ವಿಶೇಷ ಅತಿಥಿಗಳಿಗೆ ಕಾರ್ಯಕ್ರಮವನ್ನ ಆಯೋಜಿಸಿದ್ರು. ಈ ವೇಳೆ ಸಾಂಸ್ಕೃತಿ ಉಡುಗೆಯಾಗಿರೋ ಲಡಾಖಿ ಅತ್ತರಿ ತೊಟ್ಟು ಇಬ್ಬರು ಹೆಜ್ಜೆ ಹಾಕಿದ್ದಾರೆ.. ಗುಂಭಾ ಸಂಶೇಕ್​ ಅನ್ನೋ ಹಾಡಿಗೆ ಆಮೀರ್ ಹಾಗೂ ಕಿರಣ್ ರಾವ್​ ಡಾನ್ಸ್​ ಮಾಡಿದ್ದಾರೆ..

ಬೀಡಿ ಪ್ಯಾಕೆಟ್‌ನಲ್ಲಿ ಮೆಸ್ಸಿ, ರೊನಾಲ್ಡೊ ಚಿತ್ರ ವೈರಲ್
ಫುಟ್ಬಾಲ್ ಲೋಕದ ಜನಪ್ರಿಯ ಆಟಗಾರ ಲಯೊನೆಲ್ ಮೆಸ್ಸಿ, ಭಾರತದಲ್ಲೂ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ‘ಕೋಪಾ ಅಮೆರಿಕ’ ಪ್ರಶಸ್ತಿ ಗೆದ್ದಾಗ ಭಾರತದಲ್ಲೂ ಸಂಭ್ರಮ ಮನೆ ಮಾಡಿತ್ತು. ಈ ಮಧ್ಯೆ ಮೆಸ್ಸಿ ಹೆಸರಿನಲ್ಲಿ ಬೀಡಿಯೊಂದು ನೆಟ್ಟಿಗರ ಗಮನ ಸೆಳೆದಿದ್ದು, ವೈರಲ್ ಆಗಿದೆ. ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಎಂಬವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿ ಮೆಸ್ಸಿ ಮಾಡಿರುವ ಮೊದಲ ಜಾಹೀರಾತು ಒಪ್ಪಂದ ಇದಾಗಿದೆ ಎಂಬ ಫನ್ನಿ ಕ್ಯಾಪ್ಷನ್​ ನೀಡಿದ್ದಾರೆ. ಕೇವಲ ಮೆಸ್ಸಿ ಮಾತ್ರವಲ್ಲದೆ ಫೋರ್ಚುಗಲ್‌ ದೈತ್ಯ ಕ್ರಿಸ್ಟಿಯಾನೊ ರೊನಾಲ್ಡೊ ಹೆಸರಿನಲ್ಲಿರುವ ಬೀಡಿ ಪ್ಯಾಕೆಟ್ ಕೂಡ ವೈರಲ್ ಆಗಿದೆ.

The post ಮೇಕೆದಾಟು ಯೋಜನೆಗೆ ಪುದುಚೇರಿಯೂ ಅಡ್ಡಗಾಲು -ಟಾಪ್​ 10 ಸುದ್ದಿಗಳ ಕ್ವಿಕ್​ರೌಂಡಪ್​ appeared first on News First Kannada.

Source: newsfirstlive.com

Source link